Site icon Vistara News

ಸ್ವಾತಂತ್ರ್ಯ ದೊರೆತ ಸಮಯದಲ್ಲಿ 1 ರೂಪಾಯಿ ಮೌಲ್ಯವು 1 ಡಾಲರ್‌ಗೆ ಸಮನಾಗಿತ್ತೇ? ವರದಿಗಳು ಏನು ಹೇಳುತ್ತವೆ?

Was 1 dollar equal to Rs 1 during independence?

ನವದೆಹಲಿ: ಸದ್ಯ 1 ಡಾಲರ್ (Dollar) ಎದುರು ರೂಪಾಯಿ (Rupee) ಮೌಲ್ಯವು 83 ರೂ. ಇದೆ. ಆದರೆ, ಕೆಲವು ವರದಿಗಳ ಪ್ರಕಾರ, 1 ಡಾಲರ್ ಎದುರು ರೂಪಾಯಿ ಮೌಲ್ಯವೂ ಅಷ್ಟೇ ಇದ್ದ ಕಾಲವೂ ಇತ್ತು. ಬ್ರಿಟಿಷ್ ಆಡಳಿತದ ಕಾಲಾವಧಿಯಲ್ಲಿ (British Administration) ಭಾರತದಲ್ಲಿ ಪ್ರತಿಯೊಂದು ರಾಜ್ಯವು ತನ್ನದೇ ಆದ ಕರೆನ್ಸಿಯನ್ನು (Currency) ಹೊಂದಿತ್ತು. ಸ್ವಾತಂತ್ರ್ಯ ಸಿಕ್ಕ ಬಳಿಕವಷ್ಟೇ ಇಡೀ ರಾಷ್ಟ್ರಕ್ಕೆ ಒಂದೇ ಕರೆಯನ್ಸಿಯನ್ನು ಪರಿಚಯಿಸಲಾಯಿತು. ಈ ವೇಳೆ, ಭಾರತ ರೂಪಾಯಿ ಮತ್ತು ಅಮೆರಿಕದ ಡಾಲರ್ ಮೌಲ್ಯವು ಸಮನಾಗಿತ್ತು ಎಂದು ಹೇಳಲಾಗುತ್ತದೆ. ಹಾಗಿದ್ದೂ, ಆಗಿನ ಕಾಲದ ಅಧಿಕೃತ ವರದಿಗಳು ಬೇರೆಯದ್ದೇ ಕತೆ ಹೇಳುತ್ತವೆ.

ಥಾಮಸ್‌ಕುಕ್ ಡಾಟ್ ಇನ್ ವರದಿಯ ಪ್ರಕಾರ, ಸ್ವಾತಂತ್ರ್ಯದ ಸಮಯದಲ್ಲಿ 1 ರೂಪಾಯಿ ಮೌಲ್ಯವು 1 ಡಾಲರ್‌ ಆಗಿತ್ತು ಎಂದು ಹಲವರು ನಂಬುತ್ತಾರೆ. ಈ ನಂಬಿಕೆಯನ್ನು ಬೆಂಬಲಿಸುವ ವಿವಿಧ ವಾದಗಳಿವೆ. ಮೆಟ್ರಿಕ್ ವ್ಯವಸ್ಥೆಯ ಅನುಪಸ್ಥಿತಿಯ ಕಾರಣದಿಂದಾಗಿ, ಎಲ್ಲಾ ಕರೆನ್ಸಿಗಳು ಸಮಾನ ಮೌಲ್ಯವನ್ನು ಹೊಂದಿದ್ದವು ಎಂಬುದು ಸಾಮಾನ್ಯವಾಗಿ ಕಂಡುಬರುವ ಒಂದು ಅಭಿಪ್ರಾಯವಾಗಿದೆ. ಆ ಸಮಯದಲ್ಲಿ ಭಾರತವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ, ಡಾಲರ್‌ಗಿಂತ ಸ್ಟರ್ಲಿಂಗ್ ಪೌಂಡ್ ಪ್ರಬಲವಾಗಿರುವುದರಿಂದ ಡಾಲರ್‌ಗೆ ಹೋಲಿಸಿದರೆ ಭಾರತೀಯ ರೂಪಾಯಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎಂದು ಮತ್ತೊಂದು ವಾದವು ಹೇಳುತ್ತದೆ.

ಈ ಸುದ್ದಿಯನ್ನು ಓದಿ: Viral News : 5 ಕೋಟಿ ರೂಪಾಯಿ ಮೌಲ್ಯದ ರೈಲು ಎಂಜಿನ್​ ಅನ್ನೇ ಕದ್ದೊಯ್ದ ಕಳ್ಳರು!

ಹೀಗಿದ್ದಾಗ್ಯೂ, ಸ್ವಾತಂತ್ರ್ಯ ಪೂರ್ವ 1 ಪೌಂಡ್ ಮೌಲ್ಯ 13.37 ರೂ.ಗೆ ಸಮನಾಗಿತ್ತು. ಅದನ್ನೇ ಡಾಲರ್‌ಗೆ ಅನ್ವಯಿಸಿದರೆ ಆಗ ರೂಪಾಯಿ ಮೌಲ್ಯವು 4.16 ರೂ. ಆಗುತ್ತದೆ. ಆದಾಗ್ಯೂ, ಸ್ವಾತಂತ್ರ್ಯ ಸಮಯದಲ್ಲಿ 1 ಡಾಲರ್ ಮೌಲ್ಯವು ರೂ.3.3 ಸಮನಾಗಿತ್ತು ಎನ್ನುತ್ತವೆ ಕೆಲವು ವರದಿಗಳು.

ಡಾಲರ್ ಮತ್ತು ರೂಪಾಯಿ ನಡುವಿನ ವಿನಿಮಯ ದರದ ಇತಿಹಾಸವು ಬ್ರೆಟನ್ ವುಡ್ಸ್ ಒಪ್ಪಂದದ ಅಂಗೀಕಾರದೊಂದಿಗೆ 1944ರಲ್ಲಿ ಶುರುವಾಗುತ್ತದೆ. ಈ ಒಪ್ಪಂದವು ಜಾಗತಿಕ ಕರೆನ್ಸಿಗಳ ಮೌಲ್ಯವನ್ನು ಪ್ರಮಾಣೀಕರಿಸಿತು. ವೆಬ್‌ಸೈಟ್ ಪ್ರಕಾರ, ಸ್ವಾತಂತ್ರ್ಯದ ನಂತರ ರೂಪಾಯಿ ಮೌಲ್ಯವು ಸ್ಥಿರವಾಗಿ ಕುಸಿಯುತ್ತಾ ಸಾಗುತ್ತದೆ. ಆಧುನಿಕ ಮೆಟ್ರಿಕ್ ಮಾನದಂಡಗಳ ಪ್ರಕಾರ, 1913 ರಲ್ಲಿ 1 ಅಮೆರಿಕನ್ ಡಾಲರ್‌ ಮೌಲ್ಯವು 0.09 ರೂ. ಮತ್ತು 1970 ರ ಹೊತ್ತಿಗೆ 1 ಡಾಲರ್‌ಗೆ ರೂಪಾಯಿ ಮೌಲ್ಯವು 7.50 ರೂ.ಗೆ ತಲುಪಿತು. ಆದರೆ, ಅಧಿಕೃತ ದಾಖಲೆಗಳ ಪ್ರಕಾರ ಒಂದು ಅಮೆರಿಕನ್ ಡಾಲರ್ ಎಂದಿಗೂ ಒಂದು ರೂಪಾಯಿಗೆ ಸಮನಾಗಿರಲಿಲ್ಲ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version