Site icon Vistara News

WFH New Rule| ವಿಶೇಷ ವಿತ್ತ ವಲಯದಲ್ಲಿ 50% ವರ್ಕ್‌ ಫ್ರಮ್‌ ಹೋಮ್‌ಗೆ ಸಮ್ಮತಿ

work from home

ನವದೆಹಲಿ: ವಿಶೇಷ ವಿತ್ತ ವಲಯಗಳಲ್ಲಿ (SEZs) ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ತಮ್ಮ ಒಟ್ಟು ಉದ್ಯೋಗಿಗಳಲ್ಲಿ ೫೦% ಮಂದಿಗೆ ಮನೆಯಿಂದಲೇ ಕೆಲಸ (Work from home-WFH) ಪದ್ಧತಿಯನ್ನು ಗರಿಷ್ಠ ೧ ವರ್ಷದ ಅವಧಿಗೆ ಕಲ್ಪಿಸಬಹುದು ಎಂದು ಕೇಂದ್ರ ವಾಣಿಜ್ಯ ಇಲಾಖೆ ತಿಳಿಸಿದೆ.

ಈ ಸಂಬಂಧ ಹೊಸ ಅಧಿಸೂಚನೆಯನ್ನು ಜುಲೈ ೧೯ರಂದು ಪ್ರಕಟಿಸಲಾಗಿದೆ. ಉದ್ಯಮ ವಲಯದ ಬೇಡಿಕೆಯ ಅನ್ವಯ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ೫೦% ಉದ್ಯೋಗಿಗಳಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿಯೂ ಸೇರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವರ್ಕ್‌ ಫ್ರಮ್‌ ಹೋಮ್‌ ಪದ್ಧತಿಗೆ ಸಂಬಂಧಿಸಿ ದೇಶಾದ್ಯಂತ ಎಲ್ಲ ವಿಶೇಷ ವಿತ್ತ ವಲಯಗಳಲ್ಲಿ ಏಕರೂಪದ ನೀತಿಯನ್ನು ಜಾರಿಗೊಳಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ವಿಶೇಷ ವಿತ್ತ ವಲಯಗಳಲ್ಲಿ ಹೊಸ ವರ್ಕ್‌ ಫ್ರಮ್‌ ಹೋಮ್‌ ನಿಯಮಾವಳಿ ಮುಖ್ಯಾಂಶ

Exit mobile version