Site icon Vistara News

Post office savings : ಅಂಚೆ ಇಲಾಖೆಯ ಉಳಿತಾಯ ಖಾತೆಗಳಲ್ಲಿ 3 ಬದಲಾವಣೆ ಯಾವುದು?

post office

ಸರ್ಕಾರ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಈ ಮೂರು ಬದಲಾವಣೆಗಳನ್ನು ಮಾಡಲಿದೆ. ಪ್ರತಿಯೊಬ್ಬ ಖಾತೆದಾರರೂ ಇದನ್ನು ತಿಳಿದುಕೊಳ್ಳಬೇಕು. ಆರ್ಥಿಕ ವ್ಯವಹಾರಗಳ ಸಚಿವಾಲಯದ ಇ-ಗ್ಯಾಜೆಟ್‌ ಮೂಲಕ ಈ ಬದಲಾವಣೆಗಳನ್ನು 2023ರ ಜುಲೈ 3ರಂದು ಘೋಷಿಸಲಾಗಿದೆ. ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌ (ಅಮೆಂಡ್‌ಮೆಂಟ್)‌ ಸ್ಕೀಮ್‌ 2023 ಅಡಿಯಲ್ಲಿ ಬದಲಾವಣೆ ತರಲಾಗಿದೆ. ಹಾಗಾದರೆ ಏನಿದು ಬದಲಾವಣೆ?

ಖಾತೆದಾರರ ಸಂಖ್ಯೆಯಲ್ಲಿ ಬದಲಾವಣೆ: Change in number of account holders: ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿ ಇದುವರೆಗೆ ಗರಿಷ್ಠ 2 ಜಂಟಿ ಖಾತೆದಾರರನ್ನು ಹೊಂದಬಹುದಿತ್ತು. ಅದನ್ನು ಈಗ ಮೂರಕ್ಕೆ ಏರಿಸಲಾಗಿದೆ. ಅಂದರೆ ಮೂವರು ವಯಸ್ಕರು ಜಂಟಿಯಾಗಿ ಅಂಚೆ ಇಲಾಖೆಯ ಉಳಿತಾಯ ಖಾತೆಯನ್ನು ಹೊಂದಬಹುದು.

ಖಾತೆಯಿಂದ ವಿತ್‌ ಡ್ರಾವಲ್ಸ್‌ : Withdrawals from the account: ಸರ್ಕಾರ ಅಂಚೆ ಇಲಾಖೆಯ ಉಳಿತಾಯ ಖಾತೆಯ ವಿತ್‌ ಡ್ರಾವಲ್ಸ್‌ ಫಾರ್ಮ್‌ 2 ಅನ್ನು ಫಾರ್ಮ್‌ 3ಕ್ಕೆ ಬದಲಾಯಿಸಿದೆ. 50 ರೂ.ಗಿಂತ ಮೇಲ್ಪಟ್ಟ ಹಣದ ವಿತ್‌ ಡ್ರಾವಲ್ಸ್‌ಗೆ ಇದು ಅನ್ವಯ. ಪಾಸ್‌ಬುಕ್‌ ನೀಡಿ ಈ ವಿತ್‌ ಡ್ರಾವಲ್ಸ್‌ ಮಾಡಬಹುದು. ಈ ಹಿಂದೆ ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌ ಸ್ಕೀಮ್‌ 2019 ಅಡಿಯಲ್ಲಿ ಫಾರ್ಮ್‌ -2 ಮೂಲಕ 50 ರೂ.ಗೂ ಕಡಿಮೆ ಇಲ್ಲದ ಮೊತ್ತವನ್ನು ವಿತ್‌ ಡ್ರಾವಲ್ಸ್‌ ಮಾಡಬಹುದಿತ್ತು.

ಠೇವಣಿಗಳಿಗೆ ಬಡ್ಡಿ ದರ : Interest on deposits in an account: ಉಳಿತಾಯ ಖಾತೆಯಲ್ಲಿ ಹತ್ತನೇ ದಿನದ ಮುಕ್ತಾಯ ಮತ್ತು ತಿಂಗಳಿನ ಅಂತ್ಯಕ್ಕೆ ವಾರ್ಷಿಕ 4% ಬಡ್ಡಿ ದರವನ್ನು ನೀಡಲು ಅನುಮತಿ ಇದೆ. ಈ ಲೆಕ್ಕಾಚಾರದಲ್ಲಿ ಪ್ರತಿ ವರ್ಷದ ಅಂತ್ಯಕ್ಕೆ ಬಡ್ಡಿಯನ್ನು ನೀಡಲಾಗುವುದು. ಈ ಪದ್ಧತಿಯಲ್ಲಿ ಒಂದು ವೇಳೆ ಖಾತೆದಾರ ಮೃತಪಟ್ಟ ಸಂದರ್ಭ ಆ ತಿಂಗಳ ಅಂತ್ಯಕ್ಕೆ ಅಕೌಂಟ್‌ ಕ್ಲೋಸ್‌ ಮಾಡಿ ಬಡ್ಡಿ ನೀಡಬೇಕಾಗುತ್ತದೆ.

ಅಂಚೆ ಇಲಾಖೆ ಸಣ್ಣ ಉಳಿತಾಯಗಾರರಿಗೆ ಒಟ್ಟು 8 ಡೆಪಾಸಿಟ್‌ ಆಯ್ಕೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಅದನ್ನು ಪೋಸ್ಟ್‌ ಆಫೀಸ್‌ ಸೇವಿಂಗ್‌ ಸ್ಕೀಮ್ಸ್‌ ಎನ್ನುತ್ತಾರೆ. ಈ ಎಂಟು ಸಣ್ಣ ಉಳಿತಾಯ ಸ್ಕೀಮ್‌ಗಳಲ್ಲಿ ಪಬ್ಲಿಕ್‌ ಪ್ರಾವಿಡೆಂಟ್‌, ಸುಕನ್ಯಾ ಸಮೃದ್ಧಿ ಯೋಜನೆ, ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌, ಪೋಸ್ಟ್‌ ಆಫೀಸ್‌ ಟೈಮ್‌ ಡೆಪಾಸಿಟ್‌, (5 ವರ್ಷ), ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ ಇದೆ. ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ಗೆ 7.1% ಬಡ್ಡಿ ದರ ಇದೆ.

ಇದನ್ನೂ ಓದಿ: Twitter Monetization: ವೆರಿಫೈಡ್ ಕಂಟೆಂಟ್ ಕ್ರಿಯೇಟರ್ಸ್‌ಗೆ ಇನ್ನು ಹಣ ನೀಡಲಿದೆ ಟ್ವಿಟರ್!

ಹಿರಿಯ ನಾಗರಿಕರು (60 ವರ್ಷ ಮೇಲ್ಪಟ್ಟವರು) 30 ಲಕ್ಷ ರೂ. ತನಕ ಡೆಪಾಸಿಟ್‌ಗೆ 8.2% ಬಡ್ಡಿ ಪಡೆಯಬಹುದು. ಜನಪ್ರಿಯ ಹೆಣ್ಣು ಮಗುವಿನ ಉಳಿತಾಯ ಯೋಜನೆಯಲ್ಲಿ 8% ಬಡ್ಡಿ ಪಡೆಯಬಹುದು. ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ನಲ್ಲಿ 5 ವರ್ಷಕ್ಕೆ 7.7% ಬಡ್ಡಿ ಪಡೆಯಬಹುದು. ಪೋಸ್ಟ್‌ ಆಫೀಸ್‌ ಮಾಸಿಕ ಆದಾಯ ಯೋಜನೆ ಅಡಿಯಲ್ಲಿ 7.4% ಬಡ್ಡಿ ಪಡೆಯಬಹುದು. ಕಿಸಾನ್‌ ವಿಕಾಸ ಪತ್ರದ ಅಡಿಯಲ್ಲಿ 7.5% ಬಡ್ಡಿ ಗಳಿಸಬಹುದು.

Exit mobile version