Site icon Vistara News

Safe investment : ಹೆಚ್ಚು ಸುರಕ್ಷಿತ ಹೂಡಿಕೆಗಳು ಯಾವುವು? ರಿಸ್ಕ್‌ ಏಕೆ ಅಗತ್ಯ?

investment

ಚಿನ್ನ, ರಿಯಲ್‌ ಎಸ್ಟೇಟ್‌, ಫಿಕ್ಸೆಡ್‌ ಡಿಪಾಸಿಟ್‌, ಷೇರು, ಮ್ಯೂಚುವಲ್‌ ಫಂಡ್‌, ಬಾಂಡ್‌ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ, ( Safe investment ) ಸುರಕ್ಷತೆ ನಿರ್ಣಾಯಕ ಅಂಶವಾಗಿರುತ್ತದೆ. ಸಹಜವಾಗಿ ಸರ್ಕಾರಿ ಮೂಲದ ಇನ್ವೆಸ್ಟ್‌ಮೆಂಟ್‌ ಅಸೆಟ್‌ಗಳು ಹೆಚ್ಚು ಸುರಕ್ಷಿತವಾಗಿರುತ್ತದೆ. ಉದಾಹರಣೆಗೆ ನ್ಯಾಶನಲ್‌ ಪೆನ್ಷನ್‌ ಸ್ಕೀಮ್‌, ಅಟಲ್‌ ಪೆನ್ಷನ್‌ ಸ್ಕೀಮ್‌, ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌, ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌, ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಮ್‌, ಸುಕನ್ಯಾ ಸಮೃದ್ಧಿ ಇತ್ಯಾದಿಗಳು ಸರ್ಕಾರಿ ಮೂಲದ ಯೋಜನೆಗಳಾಗಿದ್ದು ಸುರಕ್ಷಿತವಾಗಿವೆ.

ಕಾರ್ಪೊರೇಟ್‌ ವಲಯದಲ್ಲಿ ಸಾರ್ವಜನಿಕ ವಲಯದ ಕಂಪನಿಗಳ ಫಿಕ್ಸೆಡ್‌ ಡಿಪಾಸಿಟ್‌ ಸ್ಕೀಮ್‌ಗಳು ಸೇಫ್‌ ಎನ್ನಿಸಿವೆ. ಡಿಬೆಂಚರ್‌ಗಳು ನಂತರದ ಸ್ಥಾನದಲ್ಲಿ ಬರುತ್ತವೆ. ಬಳಿಕ ಹೇಳುವುದಿದ್ದರೆ ಖಾಸಗಿ ಕಂಪನಿಗಳ ಫಿಕ್ಸೆಡ್‌ ಡಿಪಾಸಿಟ್‌ಗಳನ್ನು ಪರಿಗಣಿಸಬಹುದು. ಸುರಕ್ಷತೆಯ ನಿಟ್ಟಿನಲ್ಲಿ ಷೇರು ಕೊನೆಯ ಸ್ಥಾನದಲ್ಲಿದೆ.

ಷೇರುಗಳಲ್ಲಿ ಕೂಡ ಎಲ್ಲ ಕಂಪನಿಯ ಷೇರುಗಳೂ ಭಾರಿ ರಿಸ್ಕ್‌ ಅಂತ ಅಲ್ಲ. ಬ್ಲೂ ಚಿಪ್‌ ಕಂಪನಿಗಳ ಸುರಕ್ಷತೆಗೆ ಖ್ಯಾತಿ ಗಳಿಸಿವೆ. ಬ್ಲೂ ಚಿಪ್‌ ಕಂಪನಿ ಎಂದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರುವ, ಆರ್ಥಿಕವಾಗಿ ಬಲಾಢ್ಯವಾಗಿರುವ ಕಂಪನಿ. ಷೇರು-ಮ್ಯೂಚುವಲ್‌ ಫಂಡ್‌ ಯೋಜನೆಗಳು ಮಾರುಕಟ್ಟೆಯ ಏರಿಳಿತದ ಅಪಾಯಗಳನ್ನು ಒಳಗೊಂಡಿದ್ದರೂ, ಹೂಡಿಕೆದಾರರಿಗೆ ಲಾಭದಾಯಕವಾಗಿಯೂ ಪರಿಣಮಿಸಿದೆ. ಹೀಗಾಗಿ ಅರಿತುಕೊಂಡು ರಿಸ್ಕ್‌ ತೆಗೆದುಕೊಳ್ಳುವುದು ಕೂಡ ಅಗತ್ಯವಾಗಿರುತ್ತದೆ.

ಇದನ್ನೂ ಓದಿ: Money Guide: ಹೋಮ್‌ಲೋನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

ಜನ ಏಕೆ ಬಂಗಾರದಲ್ಲಿ ಹೂಡಿಕೆ ಮಾಡಬೇಕು? ಜನ ಹಲವಾರು ಕಾರಣಗಳಿಗೋಸ್ಕರ ಬಂಗಾರದಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಅದು ಸರಿಯಾಗಿರಬೇಕು. ಬಂಗಾರದಲ್ಲಿ ಹೂಡಿಕೆ ಮಾಡಲು ಐದು ಸರಿಯಾದ ಕಾರಣಗಳನ್ನು ನೋಡೋಣ.

ಹಣದುಬ್ಬರ ಅಥವಾ ಬೆಲೆ ಏರಿಕೆಯನ್ನು ಎದುರಿಸಲು ಬಂಗಾರದಲ್ಲಿ ಹೂಡಿಕೆ ಮಾಡಬಹುದು. ಏಕೆಂದರೆ ದೀರ್ಘಾವಧಿಗೆ ವಿಶ್ವದ ಬಹುತೇಕ ಎಲ್ಲ ಕರೆನ್ಸಿಗಳು ತಮ್ಮ ಮೌಲ್ಯವನ್ನು ಕಳೆದುಕೊಂಡಿವೆ. ಆದರೆ ಚಿನ್ನ ಹಾಗಲ್ಲ, ಅದರ ಮೌಲ್ಯ ವೃದ್ಧಿಸಿದೆ. ರಿಯಲ್‌ ಎಸ್ಟೇಟ್‌ಗೆ ಹೋಲಿಸಿದರೆ ಚಿನ್ನದ ಖರೀದಿ ಸುಲಭ.

ಬಂಗಾರದ ಬೆಲೆ ಇಳಿಯುವುದು ಕಡಿಮೆ. ಹೀಗಾಗಿ ನಿಮ್ಮ ಹೂಡಿಕೆಯ ಖಾತೆಯಲ್ಲೊಂದು ಉತ್ತಮ ಆಯ್ಕೆ ಇದಾಗಿದೆ. ಯುದ್ಧ, ಸಾಂಕ್ರಾಮಿಕ ರೋಗ ಇತ್ಯಾದಿ ಬಿಕ್ಕಟ್ಟುಗಳ ಸಂದರ್ಭ ಬಹುತೇಕ ಎಲ್ಲ ಅಸೆಟ್‌ಗಳ ಮೌಲ್ಯ ತಗ್ಗುತ್ತದೆ. ಆದರೆ ಅಂಥ ಸಂದರ್ಭ ಬಂಗಾರದ ದರ ಹೆಚ್ಚುತ್ತದೆ. ಏಕೆಂದರೆ ಹೂಡಿಕೆದಾರರು ಆಗ ಚಿನ್ನವನ್ನು ಹೂಡಿಕೆಗೆ ಸುರಕ್ಷಿತ ಎಂದು ಪರಿಗಣಿಸುತ್ತಾರೆ. ಕೊನೆಯದಾಗಿ ನಿಮ್ಮ ಒಟ್ಟು ಪೋರ್ಟ್‌ ಫೋಲಿಯೊದಲ್ಲಿ ಚಿನ್ನದ ಮೇಲಿನ ಹೂಡಿಕೆ 5ರಿಂದ 10 ಪರ್ಸೆಂಟ್‌ನಷ್ಟಿದ್ದರೆ ಸಾಕು. ಅದನ್ನೂ ಮೀರುವುದು ಬೇಡ ಎನ್ನುತ್ತಾರೆ ತಜ್ಞರು.

Exit mobile version