ನೀವು 100 ರೂ. ಫಿಕ್ಸೆಡ್ ಡಿಪಾಸಿಟ್ ಇಟ್ಟಿದ್ದೀರಿ ಎಂದಿಟ್ಟುಕೊಳ್ಳೋಣ. ವಾರ್ಷಿಕ 10% ಬಡ್ಡಿ ದರ ಇದ್ದರೆ, ನೀವು 10 ರೂ. ಗಳಿಸುತ್ತೀರಿ. ನೀವು ಆ 10 ರೂ.ಗಳನ್ನು ಖರ್ಚಿಗೆ ಹಿಂತೆಗೆದುಕೊಂಡರೆ ( Compound interest ) ಅಸಲು 100 ರೂ. ಹಾಗೆಯೇ ಇರುತ್ತದೆ. ಪ್ರತಿ ವರ್ಷ 10 ರೂ. ಪಡೆಯಬಹುದು. ಇದು ಸರಳ ಬಡ್ಡಿ.
ಆದರೆ ನೀವು ಒಂದು ವರ್ಷದ ಬಡ್ಡಿ 10 ರೂ.ಗಳನ್ನು ಬ್ಯಾಂಕ್ ಖಾತೆಯಲ್ಲಿಯೇ ಇಟ್ಟರೆ ನಿಮ್ಮ ಕ್ಲೋಸಿಂಗ್ ಬ್ಯಾಲೆನ್ಸ್ 110 ರೂ. ಮುಂದಿನ ವರ್ಷ ನೀವು 110 ರೂ. ಮೇಲೆ 10% ಅಂದರೆ 11 ರೂ. ಬಡ್ಡಿ ಸಿಗುತ್ತದೆ. ಆ ಬಡ್ಡಿಯನ್ನೂ ಮುಟ್ಟದಿದ್ದರೆ, ನೀವು ಮುಂದಿನ ವರ್ಷ 121 ರೂ. ಮೇಲೆ 10% ಅಂದರೆ 12.1 ರೂ. ಬಡ್ಡಿ ಗಳಿಸುತ್ತೀರಿ. ನೀವು ಅಸಲಿನ ಜತೆಗೆ ಬಡ್ಡಿಯ ಮೇಲೆಯೂ ಬಡ್ಡಿ ಗಳಿಸಿದರೆ ಕಂಪೌಂಡ್ ಇಂಟ್ರೆಸ್ಟ್ ಅಥವಾ ಚಕ್ರಬಡ್ಡಿ ಎನ್ನುತ್ತಾರೆ.
ನೀವು ಬ್ಯಾಂಕ್‌ನಲ್ಲಿ 100 ರೂ.ಗಳನ್ನು 10 ವರ್ಷಗಳ ಅವಧಿಗೆ 10% ಸರಳ ಬಡ್ಡಿಯಲ್ಲಿ ಠೇವಣಿ ಇಟ್ಟರೆ, ಅವಧಿಯ ಕೊನೆಯಲ್ಲಿ 100 ರೂ. ಗಳಿಸುತ್ತೀರಿ. ಆದರೆ ಚಕ್ರ ಬಡ್ಡಿ ಗಳಿಸಿದರೆ 160 ರೂ. ಗಳಿಸುತ್ತೀರಿ. ಈ ಉದಾಹರಣೆಯಲ್ಲಿ ಸಾಮಾನ್ಯ ಬಡ್ಡಿ ದರ ಹಾಗೂ ಚಕ್ರಬಡ್ಡಿಯ ನಡುವಣ ವ್ಯತ್ಯಾಸ ಅಂಥ ಆಕರ್ಷಿಸದಿದ್ದರೂ, ದೀರ್ಘಕಾಲೀನವಾಗಿ ಲಾಭದಾಯಕ ಮತ್ತು ಆಕರ್ಷಕವಾಗುತ್ತದೆ. ಚಕ್ರಬಡ್ಡಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದಲ್ಲಿ ಲೆಕ್ಕಾಚಾರ ಹಾಕುವ ಪದ್ಧತಿ ಇದೆ.
ಗಳಿಕೆ
ಹೂಡಿಕೆಯ ಮೊತ್ತ-10000 | ಸರಳ ಬಡ್ಡಿ | ವಾರ್ಷಿಕ ಕಂಪೌಂಡಿಂಗ್ | ಮಾಸಿಕ ಕಂಪೌಂಡಿಂಗ್ |
ವರ್ಷ 1 | 1000 | 1000 | 1047 |
ವರ್ಷ 10 | 10,000 | 16,000 | 17,000 |
ವರ್ಷ 25 | 25,000 | 98,300 | 1,10,500 |
ವರ್ಷ 40 | 40,000 | 4,42,600 | 5,27,000 |
ವರ್ಷ 50 | 50,000 | 11,63,900 | 14,43,700 |
ವರ್ಷ 60 | 60,000 | 30,34,800 | 39,25,200 |
ಚಕ್ರಬಡ್ಡಿಯಿಂದ ದೀರ್ಘಕಾಲೀನವಾಗಿ ದೊರೆಯುವ ಭಾರಿ ಪ್ರತಿಫಲದ ಪರಿಣಾಮ, ಅದನ್ನು ಜಗತ್ತಿನ ಎಂಟನೇ ಅದ್ಭುತ ಎನ್ನುತ್ತಾರೆ. ಆದರೆ ಕಂಪೌಂಡಿಂಗ್‌ನ ಪ್ರಯೋಜನವನ್ನು ಹೆಚ್ಚು ಗಳಿಸಲು ಹೂಡಿಕೆಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಆರಂಭಿಸಬೇಕು. ಎರಡನೆಯದಾಗಿ ನಿಯಮಿತವಾಗಿ ಹೂಡಿಕೆಯನ್ನು ಮಾಡಬೇಕು. ಸಮಸ್ಯೆ ಏನೆಂದರೆ ಮೊದಲ ಕೆಲವು ವರ್ಷಗಳ ತನಕ ಕಂಪೌಂಡಿಂಗ್ ಇಂಟರೆಸ್ಟ್‌ನ ಪರಿಣಾಮ ಅಷ್ಟಾಗಿ ಕಂಡು ಬರುವುದಿಲ್ಲ. 15-30ನೇ ವರ್ಷದ ಬಳಿಕ ದೊಡ್ಡ ಮೊತ್ತ ಸೇರ್ಪಡೆಯಾಗುವುದನ್ನು ಕಾಣಬಹುದು.
ಚಕ್ರಬಡ್ಡಿ ಅಥವಾ ಕಂಪೌಂಡಿಂಗ್ ಇಂಟರೆಸ್ಟ್ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೊಂದು ಉದಾಹರಣೆ ನೋಡೋಣ. ಕೀರ್ತಿ ಎಂಬುವರು ತಮ್ಮ 40ನೇ ವಯಸ್ಸಿನಲ್ಲಿ ಪ್ರತಿ ತಿಂಗಳು 1000 ರೂ. ಹೂಡಿಕೆ ಆರಂಭಿಸುತ್ತಾರೆ. ವಾರ್ಷಿಕ 8% ಬಡ್ಡಿ ಪಡೆಯುತ್ತಾರೆ. ತಮ್ಮ 65ನೇ ವಯಸ್ಸಿನಲ್ಲಿ ಅವರು 9,57,367 ರೂ. ಗಳಿಸುತ್ತಾರೆ. ಅವರ ಒಟ್ಟು ಹೂಡಿಕೆ 3,00,000 ರೂ. ಆಗಿರುತ್ತದೆ.
ಇದನ್ನೂ ಓದಿ: Term Insurance : 1 ಸಾವಿರಕ್ಕೆ 1 ಕೋಟಿ ಇನ್ಷೂರೆನ್ಸ್! ಫುಲ್ ಡಿಟೇಲ್ಸ್, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ನೀತಾ ಅವರು ತಮ್ಮ 25ನೇ ವಯಸ್ಸಿನಲ್ಲಿ ಪ್ರತಿ ತಿಂಗಳು 1,000 ರೂ. ಹೂಡಿಕೆಯನ್ನು ಆರಂಭಿಸುತ್ತಾರೆ. ಹಾಗೂ ತನ್ನ 40ನೇ ವರ್ಷದ ತನಕ ಮುಂದುವರಿಸುತ್ತಾರೆ. ವಾರ್ಷಿಕ 8% ಬಡ್ಡಿ ಗಳಿಸುತ್ತಾರೆ. ಆಕೆಗೆ 65 ವರ್ಷ ವಯಸ್ಸಾಗುವಾಗ ಬ್ಯಾಂಕ್ ಬ್ಯಾಲೆನ್ಸ್ 25,57,000 ರೂ. ಆಗಿರುತ್ತದೆ. ಆಕೆಯ ಒಟ್ಟು ಹೂಡಿಕೆ 1,80,000 ರೂ. ಆಗಿರುತ್ತದೆ. ಇಲ್ಲಿ ಗಮನಿಸಬೇಕಾದ್ದೇನೆಂದರೆ ಕೀರ್ತಿ 25 ವರ್ಷ ಹಾಗೂ ನೀತಾ ಕೇವಲ 15 ವರ್ಷ ಹೂಡಿಕೆ ಮಾಡುತ್ತಾರೆ. ಆದರೆ ನಿವೃತ್ತಿಯ ವೇಳೆಗೆ ನೀತಾ ಅವರು ಕೀರ್ತಿ ಅವರಿಗಿಂತ ಸುಮಾರು ಮೂರು ಪಟ್ಟು ಹೆಚ್ಚು ಗಳಿಸುತ್ತಾರೆ.
ಪೋಷಕರು ಏನು ಮಾಡಬೇಕು? ಪೋಷಕರು ಮಗು ಹುಟ್ಟಿದ ಒಡನೆಯೇ ಮಗುವಿನ ಹೆಸರಿನಲ್ಲಿ ಉಳಿತಾಯ ಆರಂಭಿಸಬೇಕು. ಮಗುವಿಗೆ ಉಳಿತಾಯಕ್ಕೆ 60 ವರ್ಷ ಅವಧಿ ಇದೆ ಎಂದಿಟ್ಟುಕೊಳ್ಳಿ. ಮಗುವಿಗೆ 18 ವರ್ಷ ಆಗುವಾಗಲೇ ಅಷ್ಟು ವರ್ಷದ ಉಳಿತಾಯ ಕೂಡ ಆಗಿರುತ್ತದೆ. ಅಂಥ ಮಗು ನಿವೃತ್ತಿಯಾಗುವ ಕಾಲಕ್ಕೆ, ಅವರ ಬ್ಯಾಂಕ್ ಖಾತೆಯಕಲ್ಲಿರುವ ಹಣವೊಂದೇ ಅವರ ಉಳಿದ ಜೀವನದ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಸಾಕಾಗುತ್ತದೆ.