ನವ ದೆಹಲಿ: ಕೇಂದ್ರ ಸರ್ಕಾರ ರೇಷನ್ ಅಂಗಡಿಗಳ ಆಧುನೀಕರಣಕ್ಕೆ ಮಾರ್ಗೋಪಾಯಗಳನ್ನು ಪರಿಶೀಲಿಸುತ್ತಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಛೋಪ್ರಾ ತಿಳಿಸಿದ್ದಾರೆ. ನ್ಯಾಯಬೆಲೆ ಅಥವಾ ಪಡಿತರ ಅಂಗಡಿಗಳಲ್ಲಿ ಪಿಡಿಎಸ್ ಹೊರತುಪಡಿಸಿ ಇತರ ಉತ್ಪನ್ನಗಳು ಮತ್ತು ಸೇವೆಗಳನ್ನು ಜನತೆಗೆ ಪೂರೈಸಲು ಚಿಂತನೆ ನಡೆದಿದೆ. ನ್ಯಾಯಬೆಲೆ ಅಂಗಡಿಗಳನ್ನು ವಾಣಿಜ್ಯೋದ್ದೇಶದ ದೃಷ್ಟಿಯಿಂದ ಹೆಚ್ಚು ಸಶಕ್ತಗೊಳಿಸುವುದು ಹಾಗೂ ಆಕರ್ಷಕವಾಗಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ಪಡಿತರ ಅಂಗಡಿಗಳು ಈಗಿನ ಕಾಲಕ್ಕೆ ತಕ್ಕಂತೆ ಅಧುನೀಕರಣವಾಗಬೇಕು. ಅವುಗಳು ಕಾಮನ್ ಸರ್ವೀಸ್ ಸೆಂಟರ್ (common service centres) ಈಗಾಗಲೇ 60,000 ಡೀಲರ್‌ಗಳು ಸಿಎಸ್‌ಸಿಗಳಾಗಿ ಬದಲಾಗಿವೆ. ಅವುಗಳು ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳಾಗಿ ಬದಲಾಗಬಹುದು ಎಂದು ಸಂಜೀವ್ ಛೋಪ್ರಾ ತಿಳಿಸಿದ್ದಾರೆ.
ಪಡಿತರ ವಸ್ತುಗಳನ್ನು ಹೊರತುಪಡಿಸಿ ಇತರ ವಸ್ತುಗಳನ್ನು ರೇಷನ್ ಅಂಗಡಿಗಳಲ್ಲಿ ಮಾರಾಟ ಮಾಡಲು ಡೀಲರ್‌ಗಳಿಗೆ ಅನುಮತಿ ನೀಡುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಎಂಎಂಸಿಜಿ ಉತ್ಪನ್ನಗಳ ಮಾರಾಟಕ್ಕೆ ಹಲವು ರಾಜ್ಯಗಳು ಈಗಾಗಲೇ ಅನುಮತಿ ನೀಡಿವೆ ಎಂದರು. ದೇಶದಲ್ಲಿ 5.3 ಲಕ್ಷ ರೇಷನ್ ಅಂಗಡಿಗಳು ಇವೆ. 1 ಲಕ್ಷ ಅಂಗಡಿಗಳನ್ನು ಕೋಪರೇಟಿವ್ ಸೊಸೈಟಿಗಳು, ಸ್ವಸಹಾಯ ಗುಂಪುಗಳು ನಡೆಸುತ್ತಿವೆ. 10,000 ರೇಷನ್ ಶಾಪ್‌ಗಳನ್ನು ಪಂಚಾಯತಿಗಳು ನಡೆಸುತ್ತಿವೆ. ಖಾಸಗಿ ವ್ಯಕ್ತಿಗಳು 3 ಲಕ್ಷ ಶಾಪ್‌ಗಳನ್ನು ನಡೆಸುತ್ತಿದ್ದಾರೆ.