Site icon Vistara News

ವಿಸ್ತಾರ Money Guide| ಪ್ರಮುಖ ಬ್ಯಾಂಕ್‌ಗಳಲ್ಲಿ ಎಫ್‌ಡಿ ಬಡ್ಡಿ ದರ ಎಷ್ಟಿದೆ, ಎಲ್ಲಿ ಹೆಚ್ಚು?

RBI

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ರೆಪೊ ದರವನ್ನು ಏರಿಸಿದ ಬಳಿಕ ಪ್ರಮುಖ ಬ್ಯಾಂಕ್‌ಗಳ ಸಾಲದ ಬಡ್ಡಿ ದರಗಳು ಏರಿಕೆಯಾಗಿವೆ. ಗೃಹ ಸಾಲದ ಇಎಂಐ ಸಂಖ್ಯೆ ಹೆಚ್ಚಳವಾಗಿದೆ. ಇದೇ ವೇಳೆ ಠೇವಣಿದಾರರಿಗೆ ನಿಶ್ಚಿತ ಠೇವಣಿಗಳ ಮೇಲಿನ (Fixed deposit) ಬಡ್ಡಿ ದರದಲ್ಲೂ ಅಲ್ಪ ಪ್ರಮಾಣದ ಏರಿಕೆಯಾಗಿದೆ. ಹಾಗಾದರೆ ಪ್ರಮುಖ ಬ್ಯಾಂಕ್‌ಗಳಲ್ಲಿ ಎಫ್‌ಡಿ ಬಡ್ಡಿ ದರ ಈಗ ಎಷ್ಟಿದೆ? ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ (ಎಸ್‌ಬಿಐ) ಭಿನ್ನ ಅವಧಿಗಳ ನಿಶ್ಚಿತ ಠೇವಣಿಗೆ ಬಡ್ಡಿ ದರ ಇಂತಿದೆ.

೧ ವರ್ಷದೊಳಗಿನ ನಿಶ್ಚಿತ ಠೇವಣಿಗೆ ಬಡ್ಡಿ: ೪.೫೦%

೨ ವರ್ಷದೊಳಗಿನ ಠೇವಣಿ : ೫.೩೫%

೫-೧೦ ವರ್ಷದ ಠೇವಣಿ : ೫.೫೦%

೫-೧೦ ವರ್ಷಕ್ಕೆ ಹಿರಿಯ ನಾಗರಿಕರಿಗೆ : ೬.೩೦%

ಕೆನರಾ ಬ್ಯಾಂಕ್‌

೧೮೦-೨೬೯ ದಿನಗಳಿಗೆ ಎಫ್‌ಡಿ ಬಡ್ಡಿ ದರ: ೪.೫೦%

೨೭೦-೧ ವರ್ಷ : ೪.೫೫%

೧ ವರ್ಷಕ್ಕೆ ಮಾತ್ರ: ೫.೩೦%

೩-೫ ವರ್ಷ : ೫.೭೦%

೫-೧೦ ವರ್ಷ : ೫.೭೫

೫-೧೦ ವರ್ಷ ಅವಧಿಗೆ ಹಿರಿಯ ನಾಗರಿಕರಿಗೆ: ೬.೨೫%

ಬ್ಯಾಂಕ್‌ ಆಫ್‌ ಬರೋಡಾ (೨ ಕೋಟಿ ರೂ.ಗಿಂತ ಕಡಿಮೆ ಠೇವಣಿಗೆ)

೨೭೧ ರಿಂದ ೧ ವರ್ಷಕ್ಕೆ: ೪.೪೦%

೧ ವರ್ಷಕ್ಕೆ: ೫%

೨-೩ ವರ್ಷಕ್ಕೆ: ೫.೫೦%

೩-೫ ವರ್ಷಕ್ಕೆ: ೫.೩೫%

೫-೧೦ ವರ್ಷಕ್ಕೆ: ೫.೩೫%

೫-೧೦ ವರ್ಷ, ಹಿರಿಯ ನಾಗರಿಕರಿಗೆ: ೬.೩೫%

ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಫ್‌ಡಿ ಬಡ್ಡಿ ದರ (2 ಕೋಟಿ ರೂ.ಗಿಂತ ಕಡಿಮೆ ಠೇವಣಿಗೆ)

೧ ವರ್ಷ ಅವಧಿಯ ನಿಶ್ಚಿತ ಠೇವಣಿಗೆ ಬಡ್ಡಿ ದರ: ೫.೧೦%

೧-೨ ವರ್ಷಕ್ಕೆ: ೫.೧೦%

೩-೫ ವರ್ಷಕ್ಕೆ: ೫.೬೦%

೫-೧೦ ವರ್ಷಕ್ಕೆ: ೫.೭೫%

೫-೧೦ ವರ್ಷಕ್ಕೆ ಹಿರಿಯ ನಾಗರಿಕರಿಗೆ ಬಡ್ಡಿ: ೬.೫೦%

ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ನಲ್ಲಿ ಎಫ್‌ಡಿ ಬಡ್ಡಿ ( ೫ ಕೋಟಿ ರೂ.ಗಿಂತ ಕಡಿಮೆ ಠೇವಣಿಗೆ)

೨೯೦ ದಿನಗಳಿಂದ ೧ ವರ್ಷದ ಅವಧಿಗೆ: ೪.೬೫%

೨-೩ ವರ್ಷಕ್ಕೆ : ೫.೫೦%

೩-೫ ವರ್ಷ : ೫.೭೦%

೫-೧೦ ವರ್ಷ : ೫.೭೫%

೫-೧೦ ವರ್ಷ ಅವಧಿಗೆ, ಹಿರಿಯ ನಾಗರಿಕರಿಗೆ-೬.೨೦%

ಎಕ್ಸಿಸ್‌ ಬ್ಯಾಂಕ್ ‌(೨ ಕೋಟಿ ರೂ.ಗಿಂತ ಕಡಿಮೆ ಠೇವಣಿ)

೧ ವರ್ಷ ಅವಧಿಯ ಠೇವಣಿಗೆ: ೫.೪೫%

೨ ವರ್ಷಕ್ಕೆ: ೫.೭೦%

೩ ವರ್ಷಕ್ಕೆ: ೫.೭೦

೫-೧೦ ವರ್ಷಕ್ಕೆ: ೫.೭೫

ಕರ್ಣಾಟಕ ಬ್ಯಾಂಕ್‌ (೨ ಕೋಟಿ ರೂ.ಗಿಂತ ಕಡಿಮೆ ಠೇವಣಿ)

೯೧ ದಿನಗಳಿಂದ ೩೬೪ ದಿನಗಳಿಗೆ: ೫%

೧-೨ ವರ್ಷ : ೫.೩೫%

೨-೫ ವರ್ಷ : ೫.೫೦%

೫-೧೦ ವರ್ಷ : ೫.೫೦%

೧ ವರ್ಷ ಅವಧಿಯ ಎಫ್‌ಡಿಗೆ ಹೆಚ್ಚು ಬಡ್ಡಿ ಎಲ್ಲಿ?

ಆರ್‌ಬಿಎಲ್‌ ಬ್ಯಾಂಕ್:‌ ೬.೨೫%

ಡಿಸಿಬಿ ಬ್ಯಾಂಕ್:‌ ೬.೧೦%

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್:‌ ೬%

ಇಂಡಸ್‌ಇಂಡ್ ಬ್ಯಾಂಕ್:‌ ೬%

ಬಂಧನ್‌ ಬ್ಯಾಂಕ್:‌ ೫.೭೫%

೫ ವರ್ಷ ಅವಧಿಯ ಎಫ್‌ಡಿಗೆ ಹೆಚ್ಚು ಬಡ್ಡಿ ಎಲ್ಲಿ?

ಡಿಸಿಬಿ ಬ್ಯಾಂಕ್:‌ ೬.೬೦%

ಇಂಡಸ್‌ಇಂಡ್:‌ ೬.೫೦%

ಆರ್‌ಬಿಎಲ್‌ ಬ್ಯಾಂಕ್:‌ ೬.೩೦%

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್:‌ ೬.೨೫%

ಕೋಟಕ್‌ ಮಹೀಂದ್ರಾ ಬ್ಯಾಂಕ್:‌ ೫.೯೦%

ಇದನ್ನೂ ಓದಿ: ವಿಸ್ತಾರ Money Guide | ಬೇಕಾದಾಗ ದುಡ್ಡು ತೆಗೆಯಿರಿ, ಉಳಿತಾಯ ಖಾತೆಗಿಂತ ಹೆಚ್ಚು ಬಡ್ಡಿ ಪಡೆಯಿರಿ, ಡಬಲ್‌ ಬೆನಿಫಿಟ್‌ ಕೊಡೊ ಸ್ವೀಪ್‌ ಇನ್‌ ಎಫ್‌ಡಿ ಬಗ್ಗೆ ನಿಮಗೆ ಗೊತ್ತೇ?

Exit mobile version