Site icon Vistara News

Chinese brands| ಚೀನಿ ಸ್ಮಾರ್ಟ್‌ಫೋನ್‌ಗಳಿಗೆ ಅಂಕುಶ, ಮಾಸ್ಟರ್‌ ಪ್ಲಾನ್‌ನಲ್ಲಿ ಏನೇನಿದೆ?

smartphone

ನವ ದೆಹಲಿ: ಚೀನಾ ಮೂಲದ ೧೨,೦೦೦ ರೂ. ಒಳಗಿನ ಸ್ಮಾರ್ಟ್‌ಫೋನ್‌ ಮಾರಾಟಕ್ಕೆ (Chinese brands) ನಿರ್ಬಂಧ ವಿಧಿಸಲು ನಾನಾ ಮಾರ್ಗೋಪಾಯಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ಟೆಲಿಕಾಂ ಉದ್ಯಮದ ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ. ಅಂಥ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಗೆ ಕಡ್ಡಾಯವಾಗಿ ಸ್ಥಳೀಯ ಉತ್ಪಾದಕರ ಜತೆಗೆ ಜಂಟಿ ಸಹಭಾಗಿತ್ವದ ಒಪ್ಪಂದ, ವಿಶ್ವಾಸಾರ್ಹ ಮೂಲಗಳ ಪಟ್ಟಿ ರಚನೆಯ ಸಲಹೆಗಳನ್ನು ನೀಡಲಾಗಿದೆ.‌ ಉದ್ದಿಮೆ ವಲಯದ ತಜ್ಞರು ವಿವರವಾದ ಮಾಸ್ಟರ್‌ ಪ್ಲಾನ್‌ಗಳನ್ನು ಸರ್ಕಾರಕ್ಕೆ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸಲ್ಲಿಸುವ ನಿರೀಕ್ಷೆ ಇದೆ.

ಚೀನಾ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳಿಗೆ ನಿಷೇಧ ಇಲ್ಲ: ಸರ್ಕಾರ ೧೨,೦೦೦ ರೂ. ಸೇರಿದಂತೆ ಯಾವುದೇ ಸ್ಮಾರ್ಟ್‌ಫೋನ್‌ ದರ ಶ್ರೇಣಿಯಲ್ಲಿ ಚೀನಿ ಕಂಪನಿಗಳಿಗೆ ನಿಷೇಧ ವಿಧಿಸುವ ಪ್ರಸ್ತಾಪ ಇಲ್ಲ ಎಂದಿದೆ. ಕಂಪನಿಗಳನ್ನು ನಿಷೇಧಿಸುವುದು ಪರಿಹಾರವಲ್ಲ ಎಂದು ತಜ್ಞರು ಕೂಡ ಹೇಳಿದ್ದಾರೆ.

ಎಫ್‌ಡಿಐ ನೀತಿಗೆ ತಿದ್ದುಪಡಿ ತರಲು ಸಲಹೆ

ಚೀನಿ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಗಳು ಭಾರತದಲ್ಲಿ ಸ್ಥಳೀಯ ಕಂಪನಿಗಳ ಜತೆಗೆ ಸಹಭಾಗಿತ್ವದಲ್ಲಿ ಸ್ಥಳೀಯವಾಗಿಯೇ ಉತ್ಪಾದಿಸಲು ಪೂರಕವಾಗಿ ವಿದೇಶಿ ನೇರ ಬಂಡವಾಳ ಕಾನೂನುಗಳಲ್ಲಿ ತಿದ್ದುಪಡಿ ಮಾಡಬೇಕು. ಚೀನಿ ಬ್ರಾಂಡ್‌ಗಳು ಭಾರತದಲ್ಲಿ ೧೨,೦೦೦ ರೂ. ಒಳಗಿನ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಬಹುದು. ಆದರೆ ಅದು ರಫ್ತು ಉದ್ದೇಶಕ್ಕೆ ಮಾತ್ರ ಎಂಬ ನಿಯಮ ತರಬೇಕು ಎಂದು ಟೆಲಿಕಾಂ ಉದ್ದಿಮೆ ಸಲಹೆ ನೀಡಿದೆ.

ತಂತ್ರಜ್ಞಾನ ಕಂಪನಿಗಳ ಜತೆ ಒಪ್ಪಂದ: ಒಂದು ಕಡೆ ಚೀನಾ ಮೂಲದ ಕಂಪನಿಗಳ ಸ್ಮಾರ್ಟ್‌ಫೋನ್‌ಗಳನ್ನು ನಿರ್ಬಂಧಿಸುವುದು, ಎರಡನೆಯದಾಗಿ ಜಾಗತಿಕ ತಂತ್ರಜ್ಞಾನ ದಿಗ್ಗಜಗಳಾದ ಗೂಗಲ್‌, ಮೈಕ್ರೊಸಾಫ್ಟ್‌, ಮೆಟಾ ಜತೆಗೆ ಒಪ್ಪಂದದ ಮೂಲಕ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌ ಅನ್ನು ಅಭಿವೃದ್ಧಿಪಡಿಸಬೇಕು. ಭಾರತೀಯ ಆ್ಯಪ್‌ಗಳನ್ನು ಮತ್ತು ಕಂಟೆಂಟ್‌ ಸರ್ವೀಸ್‌ಗಳನ್ನು ವಿಕಾಸಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ.

ರಫ್ತು ಮತ್ತು ಜೆವಿಗೆ ಆದ್ಯತೆ

ಸರ್ಕಾರವು ೧೨,೦೦೦ ರೂ. ದರ ಶ್ರೇಣಿಯಲ್ಲಿ ಚೀನಾದ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳ ಪ್ರಾಬಲ್ಯವನ್ನು ಹತ್ತಿಕ್ಕಲು ಯತ್ನಿಸಲಿದೆ. ಇದರಿಂದ ಲಾವಾ ಮತ್ತು ಮೈಕ್ರೊಮ್ಯಾಕ್ಸ್‌ನಂಥ ಸ್ಥಳೀಯ ಕಂಪನಿಗಳಿಗೆ ಅನುಕೂಲವಾಗಲಿದೆ. ಕಳೆದ ೭ ವರ್ಷಗಳಿಂದೀಚೆಗೆ ಶ್ರೀಮಂತ ಬಂಡವಾಳ ಹೊಂದಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳಿಂದ ಭಾರತೀಯ ಮೂಲದ ಈ ಕಂಪನಿಗಳು ನೇಪಥ್ಯಕ್ಕೆ ಸರಿದಿವೆ.

Exit mobile version