ನವ ದೆಹಲಿ: ವಾಟ್ಸ್ಆ್ಯಪ್, ಭಾರತದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ 26.85 ಲಕ್ಷ ಖಾತೆಗಳನ್ನು ಕಳೆದ ಸೆಪ್ಟೆಂಬರ್‌ನಲ್ಲಿ (WhatsApp) ನಿಷೇಧಿಸಿದೆ.
ಕಳೆದ ಆಗಸ್ಟ್‌ನಲ್ಲಿ ವಾಟ್ಸ್ಆ್ಯಪ್, 23.28 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು. ಸರ್ಕಾರ ಕಳೆದ ವರ್ಷ ಕಠಿಣ ಐಟಿ ನಿಯಮಾವಳಿಗಳನ್ನು ಜಾರಿಗೊಳಿಸಿತ್ತು. ಅದರ ಪ್ರಕಾರ 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರನಮ್ನು ಹೊಂದಿರುವ ಡಿಜಿಟಲ್ ಜಾಲತಾಣಗಳು ಪ್ರತಿ ತಿಂಗಳು ವರದಿಯನ್ನು ಸಲ್ಲಿಸಬೇಕು. ನಕಲಿ ಖಾತೆಗಳನ್ನು ನಿರ್ಮೂಲನೆ ಮಾಡಬೇಕಾದ ಒತ್ತಡದಲ್ಲಿವೆ.
ವಾಟ್ಸ್ಆ್ಯಪ್ 666 ಅಹವಾಲುಗಳನ್ನು ಸೆಪ್ಟೆಂಬರ್‌ನಲ್ಲಿ ಬಳಕೆದಾರರಿಂದ ಸ್ವೀಕರಿಸಿತ್ತು. ಸುಳ್ಳು ಸುದ್ದಿ, ದ್ವೇಷಮಯ ಸಂದೇಶಗಳನ್ನು ಪ್ರಸಾರ ಮಾಡುವ ಖಾತೆಗಳನ್ನು ಕಂಪನಿ ನಿರ್ಬಂಧಿಸಬೇಕಾಗುತ್ತದೆ.