ನವ ದೆಹಲಿ: ದೇಶದಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿನ ದರಗಳಲ್ಲಿ ಏರಿಕೆ (Wheat price) ಆಗಿರುವ ಹಿನ್ನೆಲೆಯಲ್ಲಿ ದರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲಿದೆ.
ಸರ್ಕಾರವು ಗೋಧಿ ಮತ್ತು ಗೋಧಿ ಹಿಟ್ಟಿನ ದರದ ಮೇಲೆ ನಿಗಾ ವಹಿಸಿದ್ದು, ದರವನ್ನು ತಗ್ಗಿಸಲು ಎಲ್ಲ ಆಯ್ಕೆಗಳೂ ಮುಕ್ತವಾಗಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಛೋಪ್ರಾ ತಿಳಿಸಿದ್ದಾರೆ.
ಗೋಧಿ ಹಿಟ್ಟಿನ ದರ ಪ್ರತಿ ಕೆಜಿಗೆ 38 ರೂ.ಗೆ ಏರಿಕೆಯಾಗಿದೆ. 2021-22ರಲ್ಲಿ ಭಾರತದ ಗೋಧಿಯ ಉತ್ಪಾದನೆ 10.684 ಕೋಟಿ ಟನ್‌ಗೆ ವೃದ್ಧಿಸಿತ್ತು. ಗೋಧಿ ಬೆಳೆಯುವ ರಾಜ್ಯಗಳಲ್ಲಿ ಬಿಸಿ ಗಾಳಿಯಿಂದ ಬೆಳೆಗೆ ಹಾನಿಯಾಗಿತ್ತು.