Site icon Vistara News

PM Kisan Samman Nidhi Yojana : ಕಿಸಾನ್‌ ಸಮ್ಮಾನ್‌ ಯೋಜನೆಯ 14ನೇ ಕಂತು ಯಾವಾಗ? ವಿವರ ತಿಳಿಯುವುದು ಹೇಗೆ?

PM Kisan

ನವ ದೆಹಲಿ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ (PM- Kisan Samman Nidhi Yojana) 13ನೇ ಕಂತು ಇತ್ತೀಚೆಗೆ ಬಿಡುಗಡೆಯಾಗಿದೆ. (PM-KISAN) ಫಲಾನುಭವಿ ರೈತರು ಈಗ ಮುಂದಿನ ಕಂತಿನ ನಿರೀಕ್ಷೆಯಲ್ಲಿ ಇದ್ದಾರೆ. ಕೇಂದ್ರ ಸರ್ಕಾರ 14ನೇ ಕಂತನ್ನು 2023ರ ಏಪ್ರಿಲ್‌ ಮತ್ತು ಜುಲೈ ನಡುವೆ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಪಿಎಂ-ಕಿಸಾನ್‌ ಯೋಜನೆಯಲ್ಲಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6,000 ರೂ. ಹಣಕಾಸು ನೆರವು ಸಿಗುತ್ತದೆ. 2,000 ರೂ. ಗಳ ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ.

ಈ ಹಣವನ್ನು ಪಡೆಯಲು ರೈತರು ಪಿಎಂ ಕಿಸಾನ್‌ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದನ್ನು ಆನ್‌ ಲೈನ್‌ ಇಲ್ಲವೇ ಆಫ್‌ಲೈನ್‌ ಮೂಲಕ ಮಾಡಬಹುದು. ಒಂದು ವೇಳೆ ಪಿಎಂ ಕಿಸಾನ್‌ ನಿಧಿ ಲಭಿಸದಿದ್ದರೆ ಕೆಳಕಂಡ ಇ-ಮೇಲ್‌ ಐಡಿ ಅಥವಾ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ನಾಲ್ಕು ತಿಂಗಳಿಗೊಮ್ಮೆ ವಿತರಣೆಯಾಗುತ್ತದೆ. ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆಯಾಗುತ್ತದೆ.

ಪಿಎಂ ಕಿಸಾನ್‌ ಫಲಾನುಭವಿಗಳ ಸ್ಟೇಟಸ್‌ ತಿಳಿಯುವುದು ಹೇಗೆ?

2019ರ ಫೆಬ್ರವರಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ದಿಲ್ಲಿಯಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ಸಮ್ಮೇಳನದಲ್ಲಿ 12ನೇ ಕಂತನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದರು.

ಪಿಎಂ ಕಿಸಾನ್‌ ಸ್ಕೀಮ್‌ಗೆ ಯಾರು ಅರ್ಜಿ ಸಲ್ಲಿಸಬಹುದು?

ಯಾವುದೇ ಸರ್ಕಾರದ ಯೋಜನೆಯಲ್ಲಿ ಫಲ ಪಡೆಯಲು ನಿರ್ದಿಷ್ಟ ಅರ್ಹತೆ ಇರುತ್ತದೆ. ಅದರ ಆಧಾರದಲ್ಲಿ ಸೌಲಭ್ಯ ಬಿಡುಗಡೆಯಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಸಣ್ಣ ಮತ್ತು ಮಧ್ಯಮ ರೈತರು ಪ್ರಯೋಜನ ಪಡೆಯಬಹುದು.

ಬೇಕಾಗುವ ದಾಖಲೆಗಳು:

ಪಿಎಂ ಕಿಸಾನ್‌ ಯೋಜನೆಯ ಸೌಲಭ್ಯಗಳನ್ನು ಪಡೆಯಲು ರೈತರು ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಹೆಸರು, ವಯಸ್ಸು, ಲಿಂಗ ಮತ್ತು ಎಸ್‌ಸಿ/ಎಸ್‌ಟಿ ಕೆಟಗರಿ ಕುರಿತ ದಾಖಲೆಗಳನ್ನು ನೀಡಬೇಕಾಗುತ್ತದೆ. ಆಧಾರ್‌ ಸಂಖ್ಯೆಯನ್ನೂ ಕೊಡಬೇಕಾಗುತ್ತದೆ. ಭೂಮಿಯ ಮಾಲಿಕತ್ವ ದಾಖಲೆ, ಬ್ಯಾಂಕ್‌ ಖಾತೆ ವಿವರಗಳನ್ನೂ ನೀಡಬೇಕಾಗುತ್ತದೆ.

ಇಕೆವೈಸಿ ಕಡ್ಡಾಯ:

ಸರ್ಕಾರ ಪಿಎಂ-ಕಿಸಾನ್‌ ಅಡಿಯಲ್ಲಿ ಇ-ಕೆವೈಸಿಯನ್ನು (eKYC) ಕಡ್ಡಾಯಗೊಳಿಸಿದೆ. OTP ಆಧಾರಿತ eKYC ಅನ್ನೂ ಕಲ್ಪಿಸಲಾಗಿದೆ. ಆದ್ದರಿಂದ ಇ-ಕೆವೈಸಿಯನ್ನು ಪೂರ್ಣಗೊಳಿಸದಿದ್ದರೆ, ಪೂರ್ಣಗೊಳಿಸುವುದು ಒಳಿತು. ತಪ್ಪಿದರೆ ಯೋಜನೆಯ ಅನುಕೂಲಗಳು ಸಿಗದು.

PM – Kisan ಯೋಜನೆಗೆ ಯಾರು ಅರ್ಜಿ ಸಲ್ಲಿಸಬಾರದು?

ಪಿಎಂ ಕಿಸಾನ್‌ ವೆಬ್‌ಸೈಟ್‌ ಪ್ರಕಾರ (PM-Kisan Website) ಕೆಳಕಂಡ ಕೆಟಗರಿಯಲ್ಲಿ ಇರುವವರು ಯೋಜನೆಗೆ ಅರ್ಜಿ ಸಲ್ಲಿಸಬಾರದು.

ಎಲ್ಲ ಸಾಂಸ್ಥಿಕ ಭೂ ಮಾಲೀಕರು ( Institutional Land holders)̧, ಕುಟುಂಬದಲ್ಲಿ ಒಬ್ಬರು ಅಥವಾ ಹೆಚ್ಚು ಸದಸ್ಯರು ಸಾಂವಿಧಾನಿಕ ಹುದ್ದೆಯಲ್ಲಿದ್ದರೆ ಯೋಜನೆಯ ಸೌಲಭ್ಯ ಸಿಗದು. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ತು, ಮುನಿಸಿಪಲ್‌ ಕಾರ್ಪೊರೇಷನ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಲಿ ಅಥವಾ ಮಾಜಿಗಳಾಗಿದ್ದರೂ ಅರ್ಜಿ ಸಲ್ಲಿಸುವಂತಿಲ್ಲ. ಕೇಂದ್ರ-ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳು ಅರ್ಜಿ ಹಾಕುವಂತಿಲ್ಲ. ಮಾಸಿಕ 10,000 ರೂ. ಅಥವಾ ಹೆಚ್ಚು ಪಿಂಚಣಿ ಪಡೆಯುವವರು, ಆದಾಯ ತೆರಿಗೆದಾರರು, ವೈದ್ಯರು, ಪ್ರೊಫೆಸರ್‌, ಎಂಜಿನಿಯರ್‌ ಇತ್ಯಾದಿ ವೃತ್ತಿಪರರು ಅರ್ಜಿ ಸಲ್ಲಿಸುವಂತಿಲ್ಲ.

Exit mobile version