Site icon Vistara News

WPI Inflation : ಸಗಟು ಹಣದುಬ್ಬರ ಫೆಬ್ರವರಿಯಲ್ಲಿ 3.85%ಕ್ಕೆ ಇಳಿಕೆ, 2 ವರ್ಷಗಳಲ್ಲಿಯೇ ಕನಿಷ್ಠ

inflation

ನವ ದೆಹಲಿ: ಭಾರತದ ಸಗಟು ದರ ಆಧಾರಿತ ಹಣದುಬ್ಬರ (WPI Inflation ) ಕಳೆದ ಎರಡು ವರ್ಷಗಳಲ್ಲಿಯೇ ಫೆಬ್ರವರಿಯಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಉತ್ಪಾದಕರಿಗೆ ಒಟ್ಟಾರೆ ವೆಚ್ಚದಲ್ಲಿ ಇಳಿಕೆಯಾಗಿರುವುದು, ಸರಕುಗಳ ಬೆಲೆ ತಗ್ಗಿರುವುದು ಪ್ರಭಾವ ಬೀರಿದೆ. ಜನವರಿಯಲ್ಲಿ ಹಣದುಬ್ಬರ 4.73% ಇತ್ತು. 2021ರ ಜನವರಿಯಲ್ಲಿ 4%ರಷ್ಟಿತ್ತು.

ಫೆಬ್ರವರಿಯಲ್ಲಿ ಆಹಾರ ವಲಯದ ಇಂಡೆಕ್ಸ್‌ 2.76% ಏರಿತ್ತು. ಇಂಧನ ಮತ್ತು ವಿದ್ಯುತ್‌ ವಲಯದ ಸೂಚ್ಯಂಕ 14.82% ರಿಂದ 15.15% ಕ್ಕೆ ವೃದ್ಧಿಸಿತ್ತು.

ಫೆಬ್ರವರಿಯಲ್ಲಿ ರಿಟೇಲ್‌ ಹಣದುಬ್ಬರ 6.44% ದಾಖಲಾಗಿತ್ತು. ಕೆಲ ಆಹಾರ ವಸ್ತುಗಳಲ್ಲಿನ ದರ ಇಳಿಕೆ ಪ್ರಭಾವ ಬೀರಿತ್ತು. ಹೀಗಿದ್ದರೂ, ಆರ್‌ಬಿಐನ ಸುರಕ್ಷತಾ ಮಟ್ಟಕ್ಕೆ ಇನ್ನೂ ಇಳಿದಿಲ್ಲ. ಆರ್‌ಬಿಐ ಪ್ರಕಾರ ರಿಟೇಲ್‌ ಹಣದುಬ್ಬರ ಗರಿಷ್ಠ 6% ಇರಬಹುದು. ಅದಕ್ಕಿಂತ ಹೆಚ್ಚು ಇರುವಂತಿಲ್ಲ. ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಆರ್‌ಬಿಐ ಕಳೆದ ವರ್ಷ ಮೇನಿಂದ 2.50% ರಷ್ಟು ಬಡ್ಡಿ ದರ ಏರಿಸಿತ್ತು. ಈಗ ರೆಪೊ ದರ 6.50%ಕ್ಕೆ ಏರಿತ್ತು. ಇದರ ಪರಿಣಾಮ ಗೃಹ ಸಾಲದ ಬಡ್ಡಿ ದರಗಳು ಹೆಚ್ಚಳವಾಗಿದೆ.

Exit mobile version