Site icon Vistara News

ಸಗಟು ಹಣದುಬ್ಬರ ಶೇ.15.08 ಕ್ಕೆ ಏರಿಕೆ

INFLATION

ಹೊಸದಿಲ್ಲಿ: ಕಳೆದ ಏಪ್ರಿಲ್‌ನಲ್ಲಿ ಭಾರತದ ಸಗಟು ಹಣದುಬ್ಬರ (Wholesale Inflation) ಶೇ15.08ಕ್ಕೆ ಜಿಗಿದಿದೆ.
ತೈಲ ಮತ್ತು ಇಂಧನ ದರದಲ್ಲಿ ಉಂಟಾಗಿರುವ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕೈಗಾರಿಕೆ ಮತ್ತು ವ್ಯಾಪಾರ ಅಭಿವೃದ್ಧಿ ಇಲಾಖೆಯ (ಡಿಪಿಐಐಟಿ) ಅಂಕಿ ಅಂಶಗಳು ತಿಳಿಸಿವೆ. ಏಕೆಂದರೆ ತೈಲ ಮತ್ತು ಇಂಧನ ದರ ಹೆಚ್ಚಳದ ಪ್ರಭಾವದಿಂದ ಇತರ ಬಹುತೇಕ ವಸ್ತುಗಳು ಮತ್ತು ಸೇವೆಗಳ ದರಗಳಲ್ಲಿ ಏರಿಕೆ ಉಂಟಾಗಿದೆ.

ಕಳೆದ ಮಾರ್ಚ್‌ನಲ್ಲಿ ಸಗಟು ಹಣದುಬ್ಬರ ಶೇ.14.55 ಇತ್ತು. 2021ರ ಏಪ್ರಿಲ್‌ನಲ್ಲಿ ಶೇ.10.71 ರಷ್ಟಿತ್ತು. ಸತತ 13 ತಿಂಗಳಿನಿಂದ ಸಗಟು ಹಣದುಬ್ಬರ ಎರಡಂಕಿಗಿಂತ ಮೇಲಿನ ಮಟ್ಟದಲ್ಲಿದೆ.

ಪೆಟ್ರೋಲ್‌, ಡೀಸೆಲ್‌ ಮತ್ತು ಇತರ ತೈಲಗಳು, ಲೋಹ, ಆಹಾರ ಪದಾರ್ಥಗಳು, ರಾಸಾಯನಿಕ ವಸ್ತುಗಳು ದುಬಾರಿಯಾಗಿರುವುದು, ಸಾಗಣೆ ವೆಚ್ಚದಲ್ಲಿ ಹೆಚ್ಚಳ, ರಷ್ಯಾ-ಉಕ್ರೇನ್‌ ಸಂಘರ್ಷ ಬೆಲೆ ಏರಿಕೆಗೆ ಕಾರಣವಾಗಿದೆ. ತರಕಾರಿ, ಗೋಧಿ, ಹಣ್ಣುಗಳು, ಆಲೂಗಡ್ಡೆ ದರದಲ್ಲಿ ಏರಿಕೆಯಾಗಿದೆ.
ಬೆಲೆ ಏರಿಕೆ ಅಥವಾ ಹಣದುಬ್ಬರವನ್ನು ತಗ್ಗಿಸಲು ಆರ್‌ಬಿಐ ತನ್ನ ರೆಪೊ ದರವನ್ನು ಇತ್ತೀಚೆಗೆ ಎರಡು ಸಲ ಏರಿಕೆ ಮಾಡಿದೆ. ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಏರಿಸಿವೆ.

ಏಪ್ರಿಲ್‌ನಲ್ಲಿ ಯಾವುದು ಎಷ್ಟು ದುಬಾರಿ?

ಆಹಾರ ಪದಾರ್ಥಗಳುಶೇ.8.35
ತರಕಾರಿಗಳುಶೇ.23.24
ಇಂಧನ ಮತ್ತು ವಿದ್ಯುತ್ ಶೇ.38.66
ಉತ್ಪಾದಿಸುವ ವಸ್ತುಗಳು ಶೇ.10.85
ಮೊಟ್ಟೆ, ಮಾಂಸ, ಮೀನುಶೇ.9.2

ಇದನ್ನೂ ಓದಿ: Explainer: ಬೆಲೆ ಏರಿಕೆ ಬಿಸಿ ಹೆಚ್ಚಿಸುತ್ತಿರುವ ಆಮದು!

Exit mobile version