ಮುಂಬಯಿ: ಬೈಕ್ ಮತ್ತು ಸ್ಕೂಟರ್‌ಗಳ ದಿಗ್ಗಜ ಉತ್ಪಾದಕ ಹೀರೊ ಮೊಟೊಕಾರ್ಪ್ (Hero MotoCorp) ಬುಧವಾರ ಸ್ವಯಂ ನಿವೃತ್ತಿ ಯೋಜನೆಯನ್ನು (voluntary retirement scheme) ಅನ್ನು ತನ್ನ ಸಿಬ್ಬಂದಿಗೆ ಘೋಷಿಸಿದೆ. ಕಂಪನಿಯನ್ನು ಭವಿಷ್ಯದ ದಿನಗಳಲ್ಲಿ ಡೈನಾಮಿಕ್ ಆಗಿ ರೂಪಿಸುವ ನಿಟ್ಟಿನಲ್ಲಿ, ಕಾರ್ಯದಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೀರೊಮೊಟೊ ಕಾರ್ಪ್ ತಿಳಿಸಿದೆ.
ಭವಿಷ್ಯದ ಹಿತ ದೃಷ್ಟಿಯಿಂದ ಕಂಪನಿಯ ಸಂಘಟನೆಯ ಸ್ವರೂಪವನ್ನು ಬಲಪಡಿಸಲಾಗುವುದು, ಹುದ್ದೆಗಳನ್ನು ಸಂಯೋಜಿಸಲಾಗುವುದು ಎಂದು ಹೀರೊ ಮೊಟೊಕಾರ್ಪ್ ತಿಳಿಸಿದೆ. ಇದರಿಂದ ಕಂಪನಿಯ ಉತ್ಪಾದಕತೆ ಮತ್ತಷ್ಟು ಹೆಚ್ಚಲಿದೆ ಎಂದಿದೆ.
ಈ ವಿಆರ್‌ಎಸ್ ಪ್ಯಾಕೇಜ್ ಎಲ್ಲ ಉದ್ಯೋಗಿಗಳಿಗೂ ಅನ್ವಯವಾಗಲಿದ್ದು, ವನ್ ಟೈಮ್ ಲಂಪ್ಸಮ್ ಮೊತ್ತ, ವೆರಿಯೆಬಲ್ ಪೇ, ಕೊಡುಗೆ, ಮೆಡಿಕಲ್ ಕವರೇಜ್, ಕಂಪನಿಯ ಕಾರನ್ನು ಬಳಸಲು ಕೊಡುವುದು, ಸ್ಥಳಾಂತರಕ್ಕೆ ಸಹಕಾರ, ಕರಿಯರ್ ಬೆಂಬಲ ಇತ್ಯಾದಿಯನ್ನು ಒಳಗೊಂಡಿದೆ.
ಮಾರ್ಚ್‌ನಲ್ಲಿ ಗ್ರಾಹಕರಲ್ಲಿ ವಿಶ್ವಾಸ ವೃದ್ಧಿಸಿದೆ. ಇದು ಮಾರುಕಟ್ಟೆಯಲ್ಲಿನ ವ್ಯಾಪಾರ ಚಟುವಟಿಕೆಗಳಲ್ಲಿ ಕಂಡುಬಂದಿದೆ. ಸರ್ಕಾರದ ರಚನಾತ್ಮಕ ನೀತಿಗಳು, ಸಾಮಾಜಿಕ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಸಕಾರಾತ್ಮಕ ಪ್ರಭಾವ ಬೀರಿವೆ ಎಂದು ಕಂಪನಿ ತಿಳಿಸಿದೆ.