Site icon Vistara News

Battle of billionaires : ಎಲಾನ್‌ ಮಸ್ಕ್‌ ಸಾರಥ್ಯದ ನೆಟ್‌ ಕಂಪನಿ ಸ್ಟಾರ್‌ಲಿಂಕ್‌ ಭಾರತ ಪ್ರವೇಶಕ್ಕೆ ಅಂಬಾನಿ ವಿರೋಧ ಏಕೆ?

Musk and Ambani

ನವ ದೆಹಲಿ: ಜಗತ್ತಿನ ನಂ.1 ಸಿರಿವಂತ ಉದ್ಯಮಿ ಎಲಾನ್‌ ಮಸ್ಕ್‌ ಅವರ ಸ್ಯಾಟಲೈಟ್‌ ಬ್ರಾಡ್‌ ಬ್ಯಾಂಡ್‌ ಕಂಪನಿ ಸ್ಟಾರ್‌ಲಿಂಕ್‌, ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಉತ್ಸುಕವಾಗಿದೆ. ಆದರೆ ಇದಕ್ಕೆ ಏಷ್ಯಾದ ನಂ.1 ಉದ್ಯಮಿ, ರಿಲಯನ್ಸ್‌ ಜಿಯೊದ ಸ್ಥಾಪಕಾಧ್ಯಕ್ಷ ಮುಕೇಶ್‌ ಅಂಬಾನಿ ತೀವ್ರ ವಿರೋಧಿಸುತ್ತಿದ್ದಾರೆ. (Battle of billionaires) ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ವೇಳೆ ಮಂಗಳವಾರ ಎಲಾನ್‌ ಮಸ್ಕ್‌ ಅವರು ತಮ್ಮ ಇಂಟರ್‌ನೆಟ್‌ ಬ್ರಾಡ್‌ ಬ್ಯಾಂಡ್‌ ಕಂಪನಿ ಸ್ಟಾರ್‌ಲಿಂಕ್‌ ವಹಿವಾಟನ್ನು ಭಾರತಕ್ಕೆ ವಿಸ್ತರಿಸಲು ಬಯಸಿದ್ದಾರೆ. ಇದರಿಂದ ಇಂಟರ್‌ನೆಟ್‌ ಸಂಪರ್ಕ ಇಲ್ಲದಿರುವ ಅಥವಾ ಹೈಸ್ಪೀಡ್‌ ಇಂಟರ್‌ನೆಟ್‌ ಸೇವೆ ಇಲ್ಲದಿರುವ ಕಡೆಗಳಲ್ಲೂ ಒದಗಿಸಬಹುದು.

ಮೋದಿ-ಮಸ್ಕ್‌ ಮಾತುಕತೆಯ ವೇಳೆ, ಈ ವಿಚಾರದಲ್ಲಿ ಮುಕೇಶ್‌ ಅಂಬಾನಿಯವರ ಆಕ್ಷೇಪ ಇದೆ ಎಂಬುದು ಪ್ರಸ್ತಾಪವಾಗಿಲ್ಲ. ಇದರೊಂದಿಗೆ ಭಾರತದಲ್ಲಿ ಬ್ರಾಡ್‌ ಬ್ಯಾಂಡ್‌ ಇಂಟರ್‌ನೆಟ್‌ ಸೇವೆ ಬಿಸಿನೆಸ್‌ ವಲಯದಲ್ಲಿ ಅಂಬಾನಿಯವರ ರಿಲಯನ್ಸ್‌ ಜಿಯೊ ಮತ್ತು ಮಸ್ಕ್‌ ಅವರ ಸ್ಟಾರ್‌ ಲಿಂಕ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಭಾರತದದಲ್ಲಿ ಸ್ಪೆಕ್ಟ್ರಮ್‌ ಅನ್ನು ಹರಾಜು ಮಾಡಬಾರದು. ಅದು ನಿಸರ್ಗದ ಸಂಪತ್ತಾಗಿರುವುದರಿಂದ ಕಂಪನಿಗಳ ನಡುವೆ ಹಂಚಬೇಕು. ಕಂಪನಿಗಳಿಗೆ ಲೈಸೆನ್ಸ್‌ ಮಾತ್ರ ವಿತರಿಸಬೇಕು ಎಂದು ಸ್ಟಾರ್‌ಲಿಂಕ್‌ ಪ್ರತಿಪಾದಿಸಿದೆ. ಸ್ಪೆಕ್ಟ್ರಮ್‌ ಹರಾಜಿನಿಂದ ಕಂಪನಿಗಳಿಗೆ ಟೆಲಿಕಾಂ ಸೇವೆ ದುಬಾರಿಯಾಗುತ್ತದೆ. ಭೌಗೋಳಿಕ ಮಿತಿ ಹಾಕಿದಂತಾಗುತ್ತದೆ ಎಂದು ಸ್ಟಾರ್‌ಲಿಂಕ್‌ ಹೇಳಿದೆ. ಆದರೆ ಇದಕ್ಕೆ ರಿಲಯನ್ಸ್‌ ಜಿಯೊ ಆಕ್ಷೇಪ ವ್ಯಕ್ತಪಡಿಸಿದೆ.

ವಿದೇಶಿ ಟೆಲಿಕಾಂ ಕಂಪನಿ ಮಾರುಕಟ್ಟೆಗೆ ಬಂದರೆ ಮುಕೇಶ್‌ ಅಂಬಾನಿಯವರ ರಿಲಯನ್ಸ್‌ ಜಿಯೊಗೆ ಪ್ರತಿಸ್ಪರ್ಧೆ ಸೃಷ್ಟಿಯಾಗಲಿದೆ. ರಿಲಯನ್ಸ್‌ ಜಿಯೊ 43 ಕೋಟಿ ಬಳಕೆದಾರರನ್ನು ಹೊಂದಿದೆ. 80 ಲಕ್ಷ ವೈರ್ಡ್‌ ಬ್ರಾಡ್‌ ಬ್ಯಾಂಡ್‌ ಸಂಪರ್ಕಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ 25% ಪಾಲನ್ನು ತನ್ನದಾಗಿಸಿದೆ.

ಇದನ್ನೂ ಓದಿElon Musk : ಮೋದಿ ಸರ್ಕಾರ ವಿರುದ್ಧದ ಜಾಕ್‌ ಡೋರ್ಸೆ ಹೇಳಿಕೆ ಬಗ್ಗೆ ಮೌನ ಮುರಿದ ಎಲಾನ್‌ ಮಸ್ಕ್

Exit mobile version