Site icon Vistara News

Wipro share buyback : ವಿಪ್ರೊದಿಂದ ಏಪ್ರಿಲ್‌ 27ಕ್ಕೆ ಷೇರುಗಳ ಮರು ಖರೀದಿ, ದರ ಎಷ್ಟು?

Wipro Q4 Results Rs 12,000 crore share buyback from Wipro

Wipro Q4 Results Rs 12,000 crore share buyback from Wipro

ಬೆಂಗಳೂರು: ಐಟಿ ದಿಗ್ಗಜ ವಿಪ್ರೊ (wipro) ಏಪ್ರಿಲ್‌ 27ರಂದು ತನ್ನ ಷೇರುಗಳ ಮರು ಖರೀದಿಯನ್ನು ನಡೆಸಲಿದೆ. ಜನವರಿ-ಮಾರ್ಚ್‌ ಅವಧಿಯ ತ್ರೈಮಾಸಿಕ ಫಲಿತಾಂಶವನ್ನು ಕೂಡ ಪ್ರಕಟಿಸಲಿದೆ. ಸೆಬಿಗೆ ಸಲ್ಲಿಸಿರುವ ವರದಿಯಲ್ಲಿ ವಿಪ್ರೊ, ಷೇರುಗಳ ಮರು ಖರೀದಿಗೆ ನಿರ್ದೇಶಕರುಗಳ ( Wipro share buyback) ಮಂಡಳಿ ಪರಿಶೀಲಿಸಿದೆ ಎಂದು ತಿಳಿಸಿದೆ. ಈ ಬಗ್ಗೆ 2023ರ ಏಪ್ರಿಲ್‌ 26-27ರಂದು ಸಭೆ ನಡೆಯಲಿದೆ.

ವಿಪ್ರೊ ಈ ಹಿಂದೆ 2020-21ರಲ್ಲಿ ಷೇರುಗಳ ಮರು ಖರೀದಿ ನಡೆಸಿತ್ತು. 22.89 ಕೋಟಿ ಷೇರುಗಳನ್ನು 9,156 ಕೋಟಿ ರೂ.ಗೆ ಮರು ಖರೀದಿಸಿತ್ತು. ಪ್ರತಿ ಷೇರಿಗೆ 400 ರೂ.ಗಳಂತೆ ಇದು ನಡೆದಿತ್ತು. ಬಿಎಸ್‌ಇನಲ್ಲಿ ಶುಕ್ರವಾರ ಪ್ರತಿ ಷೇರಿನ ದರ 368 ರೂ. ಇತ್ತು. ಸದ್ಯಕ್ಕೆ ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕತೆ ಮಂದಗತಿಯಲ್ಲಿ ಇರುವುದರಿಂದ ತಂತ್ರಜ್ಞಾನ ಷೇರುಗಳ ದರ ಕುಸಿದಿದೆ. ವಿಪ್ರೊ ಷೇರು ದರವು ಕಳೆದ 52 ವಾರಗಳ ಗರಿಷ್ಠ ಮಟ್ಟದಿಂದ 32% ಇಳಿದಿದೆ.

ಷೇರು ಮರು ಖರೀದಿ ಎಂದರೇನು? ಏಕೆ?

ಷೇರುಗಳ ಮರು ಖರೀದಿಯಲ್ಲಿ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಷೇರುಗಳನ್ನು ತಾವೇ ಖರೀದಿಸುತ್ತವೆ. ಕಂಪನಿಗಳು ತಮ್ಮ ಲಾಭಾಂಶವನ್ನು ಡಿವಿಡೆಂಡ್‌ ಅಥವಾ ಷೇರುಗಳ ಮರು ಖರೀದಿ ಮೂಲಕ ಷೇರುದಾರರಿಗೆ ವಿತರಿಸಬಹುದು. ಷೇರುಗಳ ದರ ತೀವ್ರ ಕುಸಿದರೆ, ಷೇರುದಾರರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಕೂಡ ಮರು ಖರೀದಿಸಬಹುದು. ಷೇರುಗಳನ್ನು ಮಾರುಕಟ್ಟೆಯಿಂದ ನೇರವಾಗಿ ಖರೀದಿಸಬಹುದು. ಅಥವಾ ನಿರ್ದಿಷ್ಟ ದರವನ್ನು ನಿಗದಿಪಡಿಸಿ ಷೇರುದಾರರಿಂದ ಪಡೆಯಬಹುದು.

ಐಟಿ ದಿಗ್ಗಜ ವಿಪ್ರೊ ಕಳೆದ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ 3,053 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2.8% ಹೆಚ್ಚಳವಾಗಿದೆ. (Wipro) ನಿರೀಕ್ಷೆಗೂ ಮೀರಿ ಕಂಪನಿ ಲಾಭ ಗಳಿಸಿತ್ತು.

Exit mobile version