ನವ ದೆಹಲಿ: ಕೋವಿಡ್ ಮತ್ತೆ ಹರಡುವ ಭೀತಿ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಮ್ (work from home) ಪದ್ಧತಿ ಮರುಕಳಿಸುವ ಸಾಧ್ಯತೆ ಇದೆ. ಹೀಗಾಗಿ ಆಟೊ, ಹೋಟೆಲ್, ಟ್ರಾವೆಲ್ಸ್, ರಿಯಾಲ್ಟಿ ವಲಯ ಹೈ ಅಲರ್ಟ್ ಸ್ಥಿತಿಯಲ್ಲಿವೆ.
ದೇಶದಲ್ಲಿ ಕೋವಿಡ್‌ನ ನಾಲ್ಕನೇ ಅಲೆ ತೀವ್ರವಾದರೆ ವರ್ಕ್ ಫ್ರಮ್ ಹೋಮ್ ಮತ್ತೆ ಜಾರಿಯಾಗಬಹುದು. ನೇಮಕಾತಿ ಕುಂಠಿತವಾಗಿರುವ ಸಂದರ್ಭದಲ್ಲಿ ಕೋವಿಡ್ ಬಂದಿದೆ. ಪ್ರವಾಸೋದ್ಯಮ ಮತ್ತು ಹೋಟೆಲ್ ವಲಯದಲ್ಲಿ ಗ್ರಾಹಕರು ಮುನ್ನೆಚ್ಚರ ವಹಿಸುತ್ತಿದ್ದಾರೆ ಎಂದು ನೇಮಕಾತಿ ವಲಯದ ಸಂಸ್ಥೆ ಸ್ಟಾಂಟೋನ್ ಚೇಸ್‌ನ ವ್ಯವಸ್ಥಾಪಕ ಪಾಲುದಾರರಾದ ಮಾಲಾ ಚಾವ್ಲಾ ತಿಳಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕತೆಯ ಮಂದಗತಿಯ ಪರಿಣಾಮ ಇತ್ತೀಚೆಗೆ ನೇಮಕಾತಿ ಕೂಡ ಕಡಿಮೆಯಾಗಿದೆ. ಈ ಟ್ರೆಂಡ್ ಹೊಸ ವರ್ಷ ಕೂಡ ಮುಂದುವರಿಯುವ ಸಾಧ್ಯತೆ ಇದೆ ಎಂದು ಕೆರಿಯರ್‌ನೆಟ್‌ನ ಸಿಇಒ ಅಂಶುಮಾನ್ ದಾಸ್ ತಿಳಿಸಿದ್ದಾರೆ.
ಭಾರತದಲ್ಲಿ 196 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಕೇಸ್‌ಗಳ ಸಂಖ್ಯೆ 3,428ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಕೋವಿಡ್ ಮೊದಲ ಅಲೆ ಬಂದಾಗ ಕೂಡಲೇ ಕಾರ್ಪೊರೇಟ್ ವಲಯ ವರ್ಕ್ ಫ್ರಮ್ ಹೋಮ್ ಅನ್ನು ಜಾರಿಗೊಳಿಸಿತ್ತು.