Site icon Vistara News

China iPhone factory | ಚೀನಾದ ಐಫೋನ್‌ ಕಾರ್ಖಾನೆಯಲ್ಲಿ ಕಾರ್ಮಿಕರ ಮುಷ್ಕರ

china iphone

ಬೀಜಿಂಗ್:‌ ಚೀನಾದಲ್ಲಿ ಆ್ಯಪಲ್‌ ಐಫೋನ್‌ನ ಅತಿ ದೊಡ್ಡ ಕಾರ್ಖಾನೆಯಲ್ಲಿ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಗುತ್ತಿಗೆ ವಿಚಾರದಲ್ಲಿ ಕಾರ್ಮಿಕರು ತೀವ್ರ ಮುಷ್ಕರ ನಡೆಸುತ್ತಿದ್ದು, (China iPhone factory) ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲಾಗಿದೆ. ಹಲವರನ್ನು ಸ್ಥಳೀಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೋವಿಡ್-‌19 ಬಿಕ್ಕಟ್ಟು ಹಿನ್ನೆಲೆಯಲ್ಲಿ ಚೀನಾ ಕಠಿಣ ನಿಯಂತ್ರಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಾರ್ಮಿಕರು ಇದರ ವಿರುದ್ಧ ಸಿಡಿದೇಳುತ್ತಿದ್ದಾರೆ. ಜತೆಗೆ ಗುತ್ತಿಗೆ ಒಪ್ಪಂದಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ ಎಂದು ವರದಿಯಾಗಿದೆ.

ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಮುಷ್ಕರ ನಿರತರ ವಿಡಿಯೊ ದೃಶ್ಯಾವಳಿಗಳು ಹರಿದಾಡುತ್ತಿದ್ದು, ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ತೈವಾನ್‌ ಮೂಲದ ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್‌ ಚೀನಾದಲ್ಲಿ ಐಫೋನ್‌ ಉತ್ಪಾದಿಸುವ ಅತಿ ದೊಡ್ಡ ಕಾರ್ಖಾನೆಯನ್ನು ನಡೆಸುತ್ತಿದೆ. 2 ಲಕ್ಷ ಮಂದಿ ಉದ್ಯೋಗಿಗಳು ಈ ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ.

ಚೀನಾ ಸರ್ಕಾರದ ಪ್ರಕಾರ ಕಳೆದ ಮೂರು ವಾರಗಳಲ್ಲಿ 2.53 ಲಕ್ಷ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಪ್ರತಿ ದಿನವೂ ಹೆಚ್ಚುತ್ತಿದೆ. ಆದರೆ ಸರ್ಕಾರದ ಕಠಿಣ ನಿಯಂತ್ರಕ ಕ್ರಮಗಳಿಗೆ ಜನತೆ ಸಂಕಷ್ಟಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ.

Exit mobile version