ಬೆಂಗಳೂರು: ಅಕ್ಟೋಬರ್ 8ರಿಂದ 15ರವರೆಗೆ ನಡೆಯಲಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ (flipkart big billion days 2023) ಮಾರಾಟದ ವೇಳೆ ಫ್ರಾನ್ಸ್ ಮೂಲದ ಗ್ರಾಹಕ ಉಪಕರಣಗಳ ಬ್ರಾಂಡ್ ಥಾಮ್ಸನ್(Thomson), ತನ್ನ ಸ್ಮಾರ್ಟ್ ಟೀವಿಗಳು(Smart TV), ವಾಷಿಂಗ್ ಮಶೀನ್‌ಗಳು (Washing Machine) ಮತ್ತು ರೆಫ್ರಿಜರೇಟರ್‌ಗಳ (refrigerator) ಮೇಲೆ ಬಹುದೊಡ್ಡ ಡೀಲ್‌ಗಳನ್ನು ಪ್ರಕಟಿಸಿದೆ. ಇದು ತನ್ನ ಎಲ್ಲಾ ಉತ್ಪನ್ನಗಳ ಮೇಲೆ ವರ್ಷದಲ್ಲೇ ಘೋಷಿಸಲಾಗಿರುವ ಅತಿದೊಡ್ಡ ರಿಯಾಯಿತಿ ಮಾರಾಟವಾಗಿದೆ(world Cup Special Edition).
ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿರುವ ಬೆನ್ನಲ್ಲೇ ವರ್ಲ್ಡ್‌ಕಪ್ ವಿಶೇಷ ಆವೃತ್ತಿಯ ಟೀವಿಗಳನ್ನು ಕಂಪನಿ ಬಿಡುಗಡೆ ಮಾಡಿದೆ. ನೀಲಿ ಬಣ್ಣದ ಫ್ರೇಮ್‌ವುಳ್ಳ 43Alpha005BL ಟೀವಿಯನ್ನು 14,999 ರು. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ. ಜೊತೆಗೆ ಸೆಮಿ ಆಟೋಮೆಟಿಕ್ ವಾಷಿಂಗ್ ಮಶೀನ್ ಅನ್ನು 8,399 ರು.ಗೆ ಬಿಡುಗಡೆ ಮಾಡಲಿದೆ. ಇದು ನೀಲಿ ಮತ್ತು ಕೇಸರಿ ಬಣ್ಣಗಳಲ್ಲಿ ಲಭ್ಯವಿದ್ದು, ಟರ್ಬೋ ಎಕ್ಸೆಲ್ ಟೆಕ್ನಾಲಜಿಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.
ಥಾಮ್ಸನ್ ಆಂಡ್ರಾಯ್ಡ್ ಸ್ಮಾರ್ಟ್ ಟೀವಿಗಳ ಆರಂಭಿಕ ಬೆಲೆ 8888 ರು. ಇದ್ದು, ಕೈಗೆಟುಕುವ ದರದಲ್ಲಿ ಆಂಡ್ರಾಯ್ಡ್ ಟೀವಿಗಳನ್ನು ಒದಗಿಸುವ ಮೂಲಕ ಥಾಮ್ಸನ್ ತನ್ನ ಗ್ರಾಹಕರಿಗೆ ಸಾಟಿಯಿಲ್ಲದ ಕೊಡುಗೆಯನ್ನು ನೀಡಲು ಮುಂದಾಗಿದೆ. ಇದರೊಂದಿಗೆ 7 ಕೇಜಿಯ ಥಾಮ್ಸನ್ ವಾಷಿಂಗ್ ಮಶೀನ್‌ಗಳು 5057 ರು.ನಿಂದ ಆರಂಭವಾಗುತ್ತಿದ್ದು, ಈ ವರ್ಗದಲ್ಲಿ ಇದು ಪ್ರೀಮಿಯಂ ಹಾಗೂ ಕೈಗೆಟುಕುವ ದರವಾಗಿದೆ. ಅಲ್ಲದೇ ಈ ಆಫರ್ ಬಿಗ್ ಬಿಲಿಯನ್ ಡೇ ನಡೆಯುವ ಎಲ್ಲಾ 8 ದಿನವೂ ಲಭ್ಯವಿರಲಿದೆ.
ಅಲ್ಲದೇ ಥಾಮ್ಸನ್ ತನ್ನ ಗ್ರಾಹಕರಿಗೆ ಒಟಿಟಿಯ ಆನಂದವನ್ನು ನೀಡಲು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ತನ್ನ ಸ್ಮಾರ್ಟ್ ಟೀವಿಗಳೊಂದಿಗೆ ಉಚಿತ ಸಬ್‌ಸ್ಕ್ರಿಪ್ಷನ್ ಒದಗಿಸಲಿದೆ.
ಭಾರತದ ಗ್ರಾಹಕರಿಗಾಗಿ ಕ್ಯುಎಲ್‌ಇಡಿ, ಓಥ್‌ಪ್ರೋ ಮ್ಯಾಕ್ಸ್ ಮತ್ತು ಎಫ್‌ಎ ಸೀರೀಸ್ ಟೀವಿಗಳನ್ನು ಬಿಡುಗಡೆ ಮಾಡುವುದಾಗಿ ಇತ್ತೀಚೆಗಷ್ಟೇ ಥಾಮ್ಸನ್ ಘೋಷಣೆ ಮಾಡಿತ್ತು. ಹೀಗಾಗಿ 43 ಇಂಚಿನ ಕ್ಯುಎಲ್‌ಇಡಿ, ರಿಯಲ್ ಟೆಕ್ ಪ್ರಾಸೆಸರ್ ಜೊತೆಗೆ 43 ಇಂಚಿನ ಎಫ್‌ಎ ಸೀರಿಸ್ ಟೀವಿ ಮತ್ತು 4ಕೆ ಡಿಸ್‌ಪ್ಲೇ ಜೊತೆಗೆ 55 ಇಂಚಿನ ಗೂಗಲ್ ಟೀವಿಗಳನ್ನು ಕಂಪನಿ ಬಿಡುಗಡೆ ಮಾಡಲಿದೆ. ಇದರ ಜೊತೆಗೆ ಹೊಸ ಮಾದರಿಯಲ್ಲಿ ಫುಲ್ಲೀ ಆಟೋಮೆಟಿಕ್ ಟಾಪ್ ಲೋಡ್ ವಾಷಿಂಗ್ ಮಶೀನ್‌ಗಳನ್ನು ಸಹ ಬಿಡುಗಡೆ ಮಾಡಲಿದೆ.
ಈ ಸುದ್ದಿಯನ್ನೂ ಓದಿ: Best Camera Smartphone: ಫ್ಲಿಪ್‌ಕಾರ್ಟ್‌ನಲ್ಲಿ 35 ಸಾವಿರ ರೂ.ಗೆ ಟಾಪ್ 5 ಬೆಸ್ಟ್ ಪ್ರೀಮಿಯಂ ಕ್ಯಾಮೆರಾ ಸ್ಮಾರ್ಟ್‌ಫೋನ್ಸ್
ಎಫ್‌ಎ ಟೀವಿ ಸೀರಿಸ್‌ಗಳು ರಿಯಲ್ ಟೆಕ್ ಪ್ರೊಸೆಸರ್‌ಗಳನ್ನು ಹೊಂದಿದ್ದು, ಆಂಡ್ರಾಯ್ಡ್-11 ಜೊತೆಗೆ ಲಭ್ಯವಾಗಲಿದೆ. ಅಲ್ಲದೇ ಇದರಲ್ಲಿನ ಬೆಜೆಲ್ ಲೆಸ್ ವಿನ್ಯಾಸ ನೋಡುಗರಿಗೆ ಸಂಪೂರ್ಣ ಸ್ಕ್ರೀನ್ ಅನುಭವ ನೀಡಲಿದೆ. ಇದರಲ್ಲಿ 30 ವ್ಯಾಟ್‌ನ ಸ್ಪೀಕರ್‌ಗಳಿದ್ದು, ಡಾಲ್ಬಿ ಡಿಜಿಟಲ್ ವ್ಯವಸ್ಥೆಯನ್ನು ಒಳಗೊಂಡಿದೆ. ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಆಪಲ್ ಟೀವಿ, ವೂಟ್, ಝೀ5, ಸೋನಿ ಲಿವ್ ಮತ್ತು 5 ಲಕ್ಷಕ್ಕೂ ಹೆಚ್ಚು ಟೀವಿ ಕಾರ್ಯಕ್ರಮಗ ಜೊತೆಗೆ ಗೂಗಲ್ ಪ್ಲೇ ಸ್ಟೋರ್ ಈ ಟೀವಿಯಲ್ಲಿ ಲಭ್ಯವಿದೆ. 43 ಇಂಚಿನ ಎಫ್‌ಎ ಟೀವಿ ಸೀರೀಸ್ ಬೆಲೆ 17999 ರು.ನಿಂದ ಆರಂಭವಾಗಲಿದೆ.
ಗೂಗಲ್ ಟೀವಿ ಸಹ 4ಕೆ ಡಿಸ್‌ಪ್ಲೇ ಹೊಂದಿದ್ದು, ಇದು ಬೆಸೆಲ್ ಲೆಸ್ ವಿನ್ಯಾಸವನ್ನು ಹೊಂದಿದೆ. ಡಾಲ್ಬಿ ವಿಶನ್ ಎಚ್‌ಡಿಆರ್ 10+, ಡಾಲ್ಬಿ ಆಟಮ್ಸ್, ಡಾಲ್ಬಿ ಡಿಜಿಟಲ್ ಪ್ಲಸ್, ಡಿಟಿಎಸ್ ಟ್ರೂ ಸರೌಂಡ್ ಸಿಸ್ಟಮ್‌ಗಳನ್ನು ಹೊಂದಿದ್ದು, 40 ವ್ಯಾಟ್‌ನ ಡಾಲ್ಬಿ ಆಡಿಯೋ ಸ್ಟೀರಿಯೋ ಬಾಕ್ಸ್ ಸ್ಪೀಕರ್‌ಗಳು ಇದರಲ್ಲಿವೆ. 2 ಜಿಬಿ ರ‍್ಯಾಮ್ ಮತ್ತು 16 ಜಿಬಿ ರೋಮ್ ಜೊತೆಗೆ ಈ ಟೀವಿ ಲಭ್ಯವಿದ್ದು, ವೈಫೈ ಮತ್ತು ಗೂಗಲ್ ಟೀವಿಗಳನ್ನು ಒಳಗೊಂಡಿದೆ. 55 ಇಂಚಿನ ಗೂಗಲ್ ಟೀವಿಯ ಬೆಲೆ 32999 ರು.ನಿಂದ ಆರಂಭವಾಗುತ್ತಿದೆ.