Site icon Vistara News

High Inflation: ಮೇನಲ್ಲಿ ಸಗಟು ಹಣದುಬ್ಬರ 15.88%ಕ್ಕೆ ಜಿಗಿತ, 14 ತಿಂಗಳುಗಳಿಂದ ಎರಡಂಕಿಯಲ್ಲಿ ಏರಿಕೆ

inflation

ನವದೆಹಲಿ: ಭಾರತದ ಹಣದುಬ್ಬರ ಕಳೆದ ಮೇನಲ್ಲಿ 15.88%ಕ್ಕೆ ಜಿಗಿದಿದೆ ಎಂದು ವಾಣಿಜ್ಯ ಸಚಿವಾಲಯ ಮಂಗಳವಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿವೆ.

ಕಳೆದ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ 13.11% ಇತ್ತು. ಸತತ 14 ತಿಂಗಳುಗಳಿಂದ ಎರಡಂಕಿಯನ್ನು ದಾಟಿದೆ. ಇದು ಕಳೆದ 30 ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣದ ಹಣದುಬ್ಬರವಾಗಿದೆ.

ಮೇನಲ್ಲಿ ಚಿಲ್ಲರೆ ಹಣದುಬ್ಬರ 7.79% ರಿಂದ 7.04%ಕ್ಕೆ ಇಳಿಕೆಯಾಗಿತ್ತು. ಆಹಾರ ವಸ್ತುಗಳು ಮತ್ತು ಕಚ್ಚಾ ವಸ್ತುಗಳ ದರ ಹೆಚ್ಚಳದ ಪರಿಣಾಮ ಸಗಟು ಹಣದುಬ್ಬರ ಏರಿಕೆಯಾಗಿತ್ತು. ಮೇನಲ್ಲಿ ತರಕಾರಿಗಳ ಹಣದುಬ್ಬರ 40.62%, ಉತ್ಪಾದಿತ ವಸ್ತುಗಳ ದರ 11% ಹೆಚ್ಚಳವಾಗಿತ್ತು.

2022ರಲ್ಲಿ ಸಗಟು ಹಣದುಬ್ಬರ ಏರಿದ್ದು ಹೀಗೆ

ಜನವರಿ12.96%
ಫೆಬ್ರವರಿ13.11%
ಮಾರ್ಚ್14.55%
ಏಪ್ರಿಲ್15.08
ಮೇ15.88%

ಇದನ್ನೂ ಓದಿ: GOOD NEWS: ಮೇನಲ್ಲಿ ಚಿಲ್ಲರೆ ಹಣದುಬ್ಬರ 7.04%ಕ್ಕೆ ಇಳಿಕೆ, ತೆರಿಗೆ ಕಟ್‌ ಎಫೆಕ್ಟ್

Exit mobile version