ನವ ದೆಹಲಿ: ಸರ್ಕಾರ ಎಕ್ಸ್ -ರೇ ಮೆಶೀನ್‌ಗಳ (X-ray machine) ಆಮದು ಸುಂಕದಲ್ಲಿ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ 15% ಏರಿಸಿದೆ. 2023ರ ಹಣಕಾಸು ವಿಧೇಯಕದ ತಿದ್ದುಪಡಿಗೆ ಅನುಸಾರವಾಗಿ ಕಸ್ಟಮ್ಸ್ ಸುಂಕದಲ್ಲಿ ಬದಲಾವಣೆ ತರಲಾಗಿದೆ. ಕಳೆದ ಶುಕ್ರವಾರ ಲೋಕಸಭೆಯಲ್ಲಿ ವಿಧೇಯಕವನ್ನು ಅಂಗೀಕರಿಸಲಾಗಿತ್ತು.
ಪ್ರಸ್ತುತ ಪೋರ್ಟಬಲ್ ಎಕ್ಸ್-ರೇ ಮೆಶೀನ್ ಮತ್ತು ನಾನ್-ಪೋರ್ಟೆಬಲ್ ಎಕ್ಸ್-ರೇ ಮೆಶೀನ್ 10% ಆಮದು ಸುಂಕವನ್ನು ಹೊಂದಿವೆ.
ಈ ಆಮದು ಸುಂಕ ಏರಿಕೆಯಿಂದ ಭಾರತದಲ್ಲಿಯೇ ಎಕ್ಸ್-ರೇ ಮೆಶೀನ್ ಉತ್ಪಾದನೆಗೆ ಉತ್ತೇಜನ ಸಿಗಲಿದೆ ಎಂದು ಎಎಂಆರ್‌ಜಿ & ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್ ಮೋಹನ್ ತಿಳಿಸಿದ್ದಾರೆ.