X-ray machine : ಎಕ್ಸ್‌- ರೇ ಮೆಶೀನ್‌ ಆಮದು ಸುಂಕ ಏಪ್ರಿಲ್‌ 1ರಿಂದ 15%ಕ್ಕೆ ಏರಿಕೆ - Vistara News

ವಾಣಿಜ್ಯ

X-ray machine : ಎಕ್ಸ್‌- ರೇ ಮೆಶೀನ್‌ ಆಮದು ಸುಂಕ ಏಪ್ರಿಲ್‌ 1ರಿಂದ 15%ಕ್ಕೆ ಏರಿಕೆ

ಎಕ್ಸ್‌ ರೇ ಮೆಶೀನ್‌ ಮೇಲಿನ ಆಮದು ಸುಂಕ ಏಪ್ರಿಲ್‌ 1ರಿಂದ 15% ಏರಿಕೆಯಾಗಲಿದೆ. ಇದರಿಂದ ದೇಶೀಯ ಉತ್ಪಾದನೆಗೆ (X-ray machine) ಉತ್ತೇಜನ ಸಿಗುವ ನಿರೀಕ್ಷೆ ಇದೆ.

VISTARANEWS.COM


on

x ray
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಸರ್ಕಾರ ಎಕ್ಸ್‌ -ರೇ ಮೆಶೀನ್‌ಗಳ (X-ray machine) ಆಮದು ಸುಂಕದಲ್ಲಿ 2023ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ 15% ಏರಿಸಿದೆ. 2023ರ ಹಣಕಾಸು ವಿಧೇಯಕದ ತಿದ್ದುಪಡಿಗೆ ಅನುಸಾರವಾಗಿ ಕಸ್ಟಮ್ಸ್‌ ಸುಂಕದಲ್ಲಿ ಬದಲಾವಣೆ ತರಲಾಗಿದೆ. ಕಳೆದ ಶುಕ್ರವಾರ ಲೋಕಸಭೆಯಲ್ಲಿ ವಿಧೇಯಕವನ್ನು ಅಂಗೀಕರಿಸಲಾಗಿತ್ತು.

ಪ್ರಸ್ತುತ ಪೋರ್ಟಬಲ್‌ ಎಕ್ಸ್-ರೇ ಮೆಶೀನ್‌ ಮತ್ತು ನಾನ್-ಪೋರ್ಟೆಬಲ್‌ ಎಕ್ಸ್-ರೇ ಮೆಶೀನ್‌ 10% ಆಮದು ಸುಂಕವನ್ನು ಹೊಂದಿವೆ.

ಈ ಆಮದು ಸುಂಕ ಏರಿಕೆಯಿಂದ ಭಾರತದಲ್ಲಿಯೇ ಎಕ್ಸ್-ರೇ ಮೆಶೀನ್‌ ಉತ್ಪಾದನೆಗೆ ಉತ್ತೇಜನ ಸಿಗಲಿದೆ ಎಂದು ಎಎಂಆರ್‌ಜಿ & ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್‌ ಮೋಹನ್‌ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Gold Rate Today: ಯಥಾಸ್ಥಿತಿ ಕಾಪಾಡಿಕೊಂಡ ಚಿನ್ನ- ಬೆಳ್ಳಿಯ ದರ; 22, 24 ಕ್ಯಾರಟ್‌ ದರಗಳು ಇಲ್ಲಿವೆ

Gold Rate Today: ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ (Gold price today)ಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,585ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹52,680 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹65,850 ಮತ್ತು ₹6,58,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,183 ಆಗಿದ್ದರೆ, ಎಂಟು ಗ್ರಾಂ ಬೆಲೆ ₹57,464 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹71,830 ಮತ್ತು ₹7,18,300 ವೆಚ್ಚವಾಗಲಿದೆ.

VISTARANEWS.COM


on

Gold Rate
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ (Gold Market) ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಸ್ಥಿರವಾಗಿದೆ. ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ (Gold price today)ಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,585ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹52,680 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹65,850 ಮತ್ತು ₹6,58,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,183 ಆಗಿದ್ದರೆ, ಎಂಟು ಗ್ರಾಂ ಬೆಲೆ ₹57,464 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹71,830 ಮತ್ತು ₹7,18,300 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹82.60, ಎಂಟು ಗ್ರಾಂ ₹660 ಮತ್ತು 10 ಗ್ರಾಂ ₹826ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,260 ಮತ್ತು 1 ಕಿಲೋಗ್ರಾಂಗೆ ₹82,600 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ66,00071,980
ಮುಂಬಯಿ65,85071,830
ಬೆಂಗಳೂರು65,85071,830
ಚೆನ್ನೈ66,00072,000

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?


ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ:Nijjar Killing: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಪ್ರಕರಣದ ಮೂವರ ಬಂಧನ; ಭಾರತದ ಪ್ರತಿಕ್ರಿಯೆ ಏನು?

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

Continue Reading

ಪ್ರಮುಖ ಸುದ್ದಿ

Paytm : ಪೇಟಿಎಂ ಸಿಒಒ ಭವೇಶ್ ಗುಪ್ತಾ ಏಕಾಏಕಿ ರಾಜೀನಾಮೆ

Paytm: ಪೇಟಿಎಂ ಮನಿ ಮುಖ್ಯಸ್ಥರಾಗಿದ್ದ ವರುಣ್ ಶ್ರೀಧರ್ ಅವರನ್ನು ಮ್ಯೂಚುವಲ್ ಫಂಡ್ ಮತ್ತು ಇತರ ಸಂಪತ್ತು ನಿರ್ವಹಣಾ ಉತ್ಪನ್ನಗಳ ವಿತರಣೆಯಲ್ಲಿ ವ್ಯವಹರಿಸುವ ಪೇಟಿಎಂ ಸರ್ವೀಸಸ್ ನ ಸಿಇಒ ಆಗಿ ಕಂಪನಿಯು ವರ್ಗಾಯಿಸಿದೆ.

VISTARANEWS.COM


on

Paytm
Koo

ನವದೆಹಲಿ: ಪೇಟಿಎಂನ (Paytm) ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ಕಂಪನಿಗೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿಯ ಅಧಿಕೃತ ಹೇಳಿಕೆ ಶನಿವಾರ ತಿಳಿಸಿದೆ. ನಾಯಕತ್ವ ಬದಲಾವಣೆಯ ಭಾಗವಾಗಿ, ಫಿನ್ಟೆಕ್ ಸಂಸ್ಥೆ ಪೇಟಿಎಂ ರಾಕೇಶ್ ಸಿಂಗ್ ಅವರನ್ನು ಪೇಟಿಎಂ ಮನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿದೆ.

ಪೇಟಿಎಂ ಮನಿ ಮುಖ್ಯಸ್ಥರಾಗಿದ್ದ ವರುಣ್ ಶ್ರೀಧರ್ ಅವರನ್ನು ಮ್ಯೂಚುವಲ್ ಫಂಡ್ ಮತ್ತು ಇತರ ಸಂಪತ್ತು ನಿರ್ವಹಣಾ ಉತ್ಪನ್ನಗಳ ವಿತರಣೆಯಲ್ಲಿ ವ್ಯವಹರಿಸುವ ಪೇಟಿಎಂ ಸರ್ವೀಸಸ್ ನ ಸಿಇಒ ಆಗಿ ವರ್ಗಾಯಿಸಲಾಗಿದೆ.

ಪಾವತಿ ಮತ್ತು ಸಾಲ ನೀಡುವ ವ್ಯವಹಾರಗಳ ಮೇಲ್ವಿಚಾರಣೆ ನಡೆಸುತ್ತಿದ್ದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ವೈಯಕ್ತಿಕ ಕಾರಣಗಳಿಂದಾಗಿ ವೃತ್ತಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಅವರು ಸಲಹಾ ಪಾತ್ರಕ್ಕೆ ಪರಿವರ್ತನೆಗೊಳ್ಳಲಿದ್ದು ವರ್ಷದ ಅಂತ್ಯದವರೆಗೆ ಪೇಟಿಎಂನ ಬೆಳವಣಿಗೆಯ ಉಪಕ್ರಮಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

ಕಂಪನಿಯ ನಿರ್ದೇಶಕರ ಮಂಡಳಿಯು ಮೇ 04, 2024 ರಂದು ನಡೆದ ಸಭೆಯಲ್ಲಿ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ಮೇ 04, 2024 ರ ಪತ್ರದ ಮೂಲಕ ಸಲ್ಲಿಸಿದ ರಾಜೀನಾಮೆಯನ್ನು ಪುರಸ್ಕರಿಸಿದೆ. ಮೇ 31, 2024 ರಂದು ವ್ಯವಹಾರದ ಸಮಯ ಮುಗಿಯುವುದರಿಂದ ಅವರನ್ನು ಕಂಪನಿಯ ಸೇವೆಗಳಿಂದ ಮುಕ್ತಗೊಳಿಸಲಾಗುವುದು ಎಂದು ಪೇಟಿಎಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪೇಟಿಎಂ ಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಈ ಕುರತು ಪ್ರತಿಕ್ರಿಯಿಸಿ, ಭವೇಶ್ ಅವರ ಕೊಡುಗೆಗಳಿಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಪಾವತಿಗಳು ಮತ್ತು ಸಾಲ ನೀಡುವಿಕೆಯ ಮೇಲೆ ನಮ್ಮ ಗಮನವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮತ್ತು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ನಮ್ಮ ಪ್ರತಿಯೊಂದು ವ್ಯವಹಾರಗಳಲ್ಲಿ ನಾವು ಹೊಂದಿರುವ ಅನುಭವಿ ನಾಯಕರೊಂದಿಗೆ ನಾನು ಕೆಲಸ ಮುಂದುವರಿಸಲಿದ್ದೇವೆ ಎಂದು ಹೇಳಿದರು.

Continue Reading

ಮನಿ-ಗೈಡ್

Money Guide: ಈ ರಜೆಯಲ್ಲಿ ಮಕ್ಕಳಿಗೆ ಆರ್ಥಿಕತೆಯ ಪ್ರಾಕ್ಟಿಕಲ್‌ ಪಾಠ ಮಾಡಿ

Money Guide: ಇಂದಿನ ಮಕ್ಕಳೇ ಮುಂದಿನ ಜನಾಂಗ. ಹೀಗಾಗಿ ಮಕ್ಕಳಲ್ಲಿ ಆರ್ಥಿಕ ಶಿಸ್ತು ಬೆಳೆಸುವುದು ಮುಖ್ಯ. ಇದರಿಂದ ಭವಿಷ್ಯದಲ್ಲಿ ಅವರು ಸಾಲಕ್ಕೆ ಕೈ ಚಾಚುವುದು ತಪ್ಪುತ್ತದೆ. ನೀವು ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಪ್ರಾಕ್ಟಿಕಲ್‌ ಆಗಿ ಅವರಿಗೆ ತಿಳಿ ಹೇಳಲು ಈ ರಜಾ ಅವಧಿ ಅತ್ಯಂತ ಪ್ರಶಸ್ತ ಸಮಯ. ಹಾಗಾದರೆ ಹೇಗೆ ಮಕ್ಕಳಿಗೆ ಪ್ರಾಯೋಗಿಕ ಪಾಠ ಮಾಡಬಹುವುದು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಮಕ್ಕಳಿಗೆ ಈಗ ರಜಾ ಅವಧಿ. ಪಾಠ, ಪರೀಕ್ಷೆ, ಸೆಮಿನಾರ್‌ ಹೀಗೆ ವರ್ಷಪೂರ್ತಿ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿದ್ದ ಅವರು ರಿಲೀಫ್‌ ಆಗುವ ಸಮಯ. ಈಗ ಬೆಳಗ್ಗೆ ಬೇಗ ಎದ್ದು ಗಡಿಬಿಡಿಯಲ್ಲಿ ಶಾಲೆ, ಕಾಲೇಜಿಗೆ ಓಡಬೇಕೆಂಬ ಧಾವಂತ ಇರುವುದಿಲ್ಲ. ತಮಗೆ ಬೇಕಾದಂತೆ ಕಾಲ ಕಳೆಯಬಹುದು. ಹಾಗಂತ ಅವರನ್ನು ಅವರ ಪಾಡಿಗೆ ಪೂರ್ತಿಯಾಗಿ ಬಿಡಬೇಡಿ. ಅವರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ಇದು ತಕ್ಕ ಸಮಯ. ಎಳವೆಯಲ್ಲಿಯೇ ಆರ್ಥಿಕತೆಯ ವಿಚಾರದಲ್ಲಿ ಅವರಲ್ಲಿ ಶಿಸ್ತು ಮೂಡಿದರೆ ಭವಿಷ್ಯದಲ್ಲಿ ಎದುರಾಗುವ ಅದೆಷ್ಟೋ ಸಮಸ್ಯೆಗಳಿಂದ ಪಾರಾಗಬಹುದು. ನೀವು ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಪ್ರಾಕ್ಟಿಕಲ್‌ ಆಗಿ ಅವರಿಗೆ ತಿಳಿ ಹೇಳಲು ಈ ರಜಾ ಅವಧಿ ಅತ್ಯಂತ ಪ್ರಶಸ್ತ ಸಮಯ. ಹಾಗಾದರೆ ಹೇಗೆ ಮಕ್ಕಳಿಗೆ ಪ್ರಾಯೋಗಿಕ ಪಾಠ ಮಾಡಬಹುವುದು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).

ಉಳಿತಾಯದ ಮಹತ್ವ ತಿಳಿ ಹೇಳಿ

ಹಣದ ಉಳಿತಾಯ ಎಲ್ಲರಿಗೂ, ಎಲ್ಲ ಕಾಲಕ್ಕೂ ಅನಿವಾರ್ಯ. ಒಂದಷ್ಟು ಉಳಿತಾಯ ನಿಮ್ಮ ಬಳಿ ಇದ್ದರೆ ಸಾಲ ಮಾಡುವುದರಿಂದ ಪಾರಾಗಬಹುದು. ಆರಂಭದಲ್ಲಿ ಈ ಪಾಠವನ್ನು ಮಕ್ಕಳಿಗೆ ತಿಳಿ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಇದನ್ನು ಅವರಿಗೆ ಮನದಟ್ಟಾಗುವಂತೆ ವಿವರಿಸಿ. ಮಕ್ಕಳ ಹೆಸರಿನಲ್ಲಿ ಸೇವಿಂಗ್ಸ್‌ ಅಕೌಂಟ್‌ ಓಪನ್‌ ಮಾಡಿ. ಪೋಸ್ಟ್‌ ಆಫೀಸ್‌ನಲ್ಲಿಯೂ ಖಾತೆ ತೆರೆಯಬಹುದು. ಅದರಲ್ಲಿ ನಿಯಮಿತವಾಗಿ ಠೇವಣಿ ಇಡಲು ಹೇಳಿ. ನೀವು ಅವರ ಅಕೌಂಟ್‌ಗೆ ಹಣ ಹಾಕುವುದಕ್ಕಿಂತ ಈ ಕೆಲಸವನ್ನು ಸ್ವತಃ ಅವರೇ ನಿರ್ವಹಿಸಲಿ. ಇದರಿಂದ ಅವರಿಗೆ ಉಳಿತಾಯದ ಪ್ರಾಧಾನ್ಯತೆ ಅರಿವಾಗುತ್ತದೆ. ಇದರ ಜತೆಗೆ ಚಿಕ್ಕ ಮಕ್ಕಳಾಗಿದ್ದರೆ ಮನೆಯಲ್ಲಿಯೇ ಉಳಿತಾಯ ಮಾಡಲು ಪಿಗ್ಗಿ ಬ್ಯಾಂಕ್‌ನ ವ್ಯವಸ್ಥೆ ಮಾಡಿ. ಭವಿಷ್ಯದ ಗುರಿಗಳಿಗಾಗಿ ಉಳಿತಾಯದ ಪ್ರಾಮುಖ್ಯತೆ ಮತ್ತು ಕಾಲಾನಂತರದಲ್ಲಿ ಸಣ್ಣ ಮೊತ್ತಗಳು ಹೇಗೆ ಉತ್ತಮ ಸಂಗ್ರಹವಾಗಿ ಬದಲಾಗಬಹುದು ಎಂಬುದನ್ನು ಅರ್ಥ ಮಾಡಿಸಿ. ಅದಕ್ಕಾಗಿ ಹೀಗೆ ಮಾಡಿ: ಅವರು ಯಾವುದಾದರೂ ವಸ್ತುವಿಗೆ ಬೇಡಿಕೆ ಇಟ್ಟರೆ (ಸೈಕಲ್‌, ಬ್ಯಾಗ್‌ ಇತ್ಯಾದಿ) ಕೂಡಲೇ ತಂದು ಕೊಡಬೇಡಿ. ಅವರ ಉಳಿತಾಯದ ಹಣದಿಂದ ಅವರ ಅಗತ್ಯವನ್ನು ಕಂಡುಕೊಳ್ಳುವ ಬಗ್ಗೆ ಪ್ರಸ್ತಾವಿಸಿ. ನಿರ್ದಿಷ್ಟ ಸಮಯದವರೆಗೆ ಹಣ ಉಳಿಸಿದರೆ ಹೇಗೆ ನಮ್ಮ ಅಗತ್ಯಗಳನ್ನು ಪೂರೈಸಬಹುದು ಎನ್ನುವದನ್ನು ಅವರಿಗೆ ಮನದಟ್ಟು ಮಾಡಿ.

ಪಾರ್ಟ್‌ ಟೈಮ್‌ ಜಾಬ್‌

ಸ್ವಲ್ಪ ದೊಡ್ಡ ಮಕ್ಕಳಾದರೆ (ಎಸ್ಸೆಸ್ಸೆಲ್ಸಿ / ಪಿಯು / ಪದವಿ) ಅವರಿಗೆ ರಜೆಯಲ್ಲಿ ಸಣ್ಣ ಪುಟ್ಟ ಪಾರ್ಟ್‌ ಟೈಮ್‌ ಜಾಬ್‌ ಕೊಡಿಸಿ. ಈ ಮೂಲಕ ಅವರಿಗೆ ಹಣದ ಮಹತ್ವ ತಿಳಿಸಿಕೊಡಿ. ಕಾರ್ಖಾನೆಗಳಲ್ಲಿ ಲೆಕ್ಕ ಪತ್ರ ನೋಡಿಕೊಳ್ಳುವುದು, ಪ್ಯಾಕ್‌ ಮಾಡುವುದು, ಕಂಪ್ಯೂಟರ್‌ ಕೆಲಸ, ಸೇಲ್‌ ಮ್ಯಾನ್‌ / ಸೇಲ್ಸ್‌ ಗರ್ಲ್‌, ಬೆಳಗ್ಗೆ ದಿನ ಪತ್ರಿಕೆ ಹಂಚುವುದು ಇತ್ಯಾದಿ ಕೆಲಸ ಮಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ. ಹಳ್ಳಿಯವರಾದರೆ ಹೊಲ, ತೋಟದ ಕೆಲಸಕ್ಕೆ ತಮ್ಮೊಂದಿಗೆ ಬರುವಂತೆ ಹೇಳಿ. ಅವರ ಕೆಲಸಕ್ಕೆ ಅನುಗುಣವಾಗಿ ಇಂತಿಷ್ಟು ಸಂಬಳ ನಿಗದಿ ಪಡಿಸಿ. ಬೇಕಿದ್ದರೆ ಅವರ ಟ್ಯೂಷನ್‌ ಕೂಡ ಮಾಡಬಹುದು. ಒಟ್ಟಿನಲ್ಲಿ ಅವರು ಸಂಪಾದಿಸುವಂತೆ ಮಾಡಿ ಅವರಿಗೆ ದುಡಿಮೆಯ ಮಹತ್ವ ತಿಳಿಸಿ.

ಸಂಬಳವನ್ನು ಸರಿಯಾಗಿ ಹಂಚಿಕೆ ಮಾಡಿ

ಮಕ್ಕಳ ಸಂಪಾದನೆಯನ್ನು ಮುಂದಿಟ್ಟುಕೊಂಡು ಅದನ್ನು ಯಾವೆಲ್ಲ ರೀತಿ ಹಂಚಿಕೆ ಮಾಡಬಹುದು ಎನ್ನುವುದನ್ನು ಅವರೊಂದಿಗೆ ಚರ್ಚಿಸಿ. ಅವರ ಖರ್ಚಿಗೆ, ಮನೆ ಖರ್ಚಿಗೆ, ಇತರ ಅಗತ್ಯಗಳಿಗೆ ಹಂಚಿಕೆ ಮಾಡಿ ಕಡ್ಡಾಯವಾಗಿ ಒಂದಷ್ಟು ಮೊತ್ತ ಉಳಿತಾಯ ಮಾಡುವುದು ಹೇಗೆ ಎನ್ನುವುದರ ಯೋಜನೆ ತಯಾರಿಸಿ. ಇನ್ನು ಅನಗತ್ಯ ವಸ್ತುಗಳನ್ನು ಅವರು ಖರೀದಿಸುವುದನ್ನು ತಪ್ಪಿಸಿ. ಅವರ ಆನ್‌ಲೈನ್‌ ಶಾಪಿಂಗ್‌ ಬಗ್ಗೆ ನಿಗಾ ಇಡಿ.

ಬಜೆಟ್‌ ತಯಾರಿಸಲಿ

ಬಜೆಟ್‌ ಯಾಕೆ ಮುಖ್ಯ ಎನ್ನುವುದರ ಕುರಿತು ಮಾಹಿತಿ ನೀಡಿ. ಇದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮಂಡಿಸುವ ಬಜೆಟ್‌ನ ಉದಾಹರಣೆ ಕೊಡಬಹುದು. ಬಳಿಕ ಅವರೇ ಬಜೆಟ್‌ ತಯಾರಿಸಲಿ. ಅವರ ಬಳಿ ಇರುವ ಪಾಕೆಟ್‌ ಮನಿ, ಉಡುಗೊರೆ ಸಿಕ್ಕ ಹಣ, ಸಂಬಳವನ್ನು ಆಟದ ವಸ್ತು ಖರೀದಿ, ತಿಂಡಿ ಖರೀದಿ ಮತ್ತು ಉಳಿತಾಯಕ್ಕೆ ಹೇಗೆ ಹಂಚಿಕೆ ಮಾಡಬಹುದು ಎನ್ನುವುದನ್ನು ಅವರೇ ಪ್ಲ್ಯಾನ್‌ ಮಾಡಲಿ.

ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಪಾಠ

ಮನೆ ಸಾಮಗ್ರಿ ಖರೀದಿಗೆ ಹೋಗುವಾಗ ಅವರನ್ನು ಕರೆದುಕೊಂಡು ಹೋಗಿ. ಕೈಯಲ್ಲಿ ಇರುವ ಹಣದಿಂದ ಹೇಗೆ ನಮ್ಮ ಅಗತ್ಯಗಳನ್ನು ಪೂರೈಸಬಹುದು ಎನ್ನುವುದು ಅವರ ಗಮನಕ್ಕೆ ಬರಲಿ. ನೆನಪಿಡಿ, ಮಕ್ಕಳು ನಿಮ್ಮನ್ನು ನೋಡಿ ಕಲಿಯುವುದರಿಂದ, ನಿಮ್ಮ ಪ್ರಭಾವ ಹೆಚ್ಚೇ ಬೀರುವುದರಿಂದ ನೀವು ಕೂಡ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಿ. ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ, ಭವಿಷ್ಯಕ್ಕಾಗಿ ಉಳಿತಾಯ ಮಾಡಿ. ಎಲ್ಲದಕ್ಕಿಂತ ಮುಖ್ಯವಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವುದನ್ನು ರೂಢಿಸಿಕೊಳ್ಳಿ. ಅದನ್ನೇ ಮಕ್ಕಳಿಗೂ ತಿಳಿಸಿ. ಮಾತ್ರವಲ್ಲ ಹೂಡಿಕೆಯ ಪ್ರಾಧಾನ್ಯತೆಯ ಬಗ್ಗೆ ಮಕ್ಕಳಿಗೆ ವಿವರಿಸಿ. ಸಂಪತ್ತು ವೃದ್ಧಿಗೆ ಹೂಡಿಕೆ ಎನ್ನುವುದು ಅತ್ಯುತ್ತಮ ಮಾರ್ಗ ಎನ್ನವುದನ್ನು ತಿಳಿಸಿ. ಹೂಡಿಕೆಗೆ ವಿವಿಧ ವಿಧಾನಗಳಿದ್ದರೂ ಸುರಕ್ಷಿತ ಮಾರ್ಗವನ್ನು ಆಯ್ದುಕೊಳ್ಳುವ ಬಗ್ಗೆ ತಿಳಿಸಿ.

ಇದನ್ನೂ ಓದಿ: Money Guide: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳಿವು

Continue Reading

ಕೃಷಿ

Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!

Cocoa Price: ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ ದಾಖಲೆಯ ಮಟ್ಟಕ್ಕೆ ಏರುತ್ತಿದೆ. 2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು. ಇದೀಗ ಬೆಲೆ ಬರೋಬರಿ 320 ರೂ. ಅಂದರೆ 800% ಹೆಚ್ಚಳವಾಗಿದೆ. ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

VISTARANEWS.COM


on

Cocoa Price
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ (Cocoa Prices) ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಪರಣಾಮ, ಅಡಿಕೆ ಬೆಳೆಯ ಜತೆ ಉಪ ಬೆಳೆಯಾಗಿ ಬೆಳೆಯುತ್ತಿದ್ದ ಕೋಕೋದಿಂದ ಒಂದಿಷ್ಟು ರೈತರಿಗೆ ಅನಿರೀಕ್ಷಿತವಾಗಿ ದೊಡ್ಡ ಬೋನಸ್ ದೊರೆತಂತಾಗಿದೆ.

2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು.

ಕೊಕೋ ಧಾರಣೆ ತೀರಾ ಕುಸಿತ ಕಂಡಾಗ, ಕೊಕೋ ಕೃಷಿಯ ಬಗ್ಗೆ ಮಲೆನಾಡು ಕರಾವಳಿ ಭಾಗದ ಕೃಷಿಕರು ಕೋಕೋವನ್ನು ನಿರ್ಲಕ್ಷಿಸಿದ್ದರು. ಮೂರ್ನಾಲ್ಕು ವರ್ಷಗಳ ಹಿಂದೆ ʼಎಂದೂ ಧಾರಣೆ ಏರದ ಇದು ಲಾಭದಾಯಕವಲ್ಲದ ಬೆಳೆ’ ಎಂಬ ಹಣೆ ಪಟ್ಟಿಯೂ ಕೋಕೋ ಬೆಳೆಗೆ ಅಂಟಿಕೊಂಡಿತ್ತು. ಬೆಲೆ ಇಲ್ಲದ ಕೋಕೋ ಗಿಡಗಳು ಅಡಿಕೆ ತೋಟದಲ್ಲಿ ಇರುವುದೇ ಒಂದು ಸಮಸ್ಯೆ ಅನ್ನುವಂತಾಗಿತ್ತು!

ಜತೆಗೆ ಕೋಕೋ ಹಣ್ಣುಗಳನ್ನು ತಿನ್ನಲು ದಾಂಗುಡಿ ಇಡುತ್ತಿದ್ದ ಮಂಗ, ಅಳಿಲು, ಕೆಲವು ಪಕ್ಷಿಗಳು ಬರಿ ಕೋಕೋ ಹಣ್ಣುಗಳನ್ನು ಹಾಳು ಮಾಡುವುದಲ್ಲದೆ, ಅಡಿಕೆ ಬೆಳೆಯನ್ನೂ ನಾಶ ಮಾಡುತ್ತಿದ್ದವು. ಬೆಲೆಯೂ ಇಲ್ಲದ, ತೊಂದರೆಯೂ ಜಾಸ್ತಿ ಇದ್ದ ಕೋಕೋ ಮರಗಳನ್ನು ಮಲೆನಾಡು ಕರಾವಳಿಯ ನೂರಾರು ಅಡಿಕೆ ಬೆಳೆಗಾರರು ಕಡಿದು, ಅಡಿಕೆ ಮರಗಳಿಗೆ ಮಲ್ಚಿಂಗ್ ಮಾಡಿ ಕೈ ತೊಳೆದುಕೊಂಡಿದ್ದು ಇತಿಹಾಸ. ಈಗ ಅದೇ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಕೋಕೋ ಬೆಳೆಯ ಧಾರಣೆ ಅಡಿಕೆ ಮರದ ಎತ್ತರಕ್ಕೆ ಏರುತ್ತಿರುವುದು ಕಂಡು ಅನೇಕ ರೈತರು ಸಂಕಟ ಅನುಭವಿಸುವಂತಾಗಿರುವುದೂ ಸತ್ಯ.

ಕಳೆದ ದಶಕದಲ್ಲಿ ಹಸಿ ಕೋಕೋ 40 ರೂ. ಇದ್ದಿದ್ದು, ಇವತ್ತು ಬರೋಬರಿ 320 ರೂ.ಗೆ ತಲುಪಿದೆ. ಅಂದರೆ 800% ಹೆಚ್ಚಳ! ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

ಧಾರಣೆ ಏರಿಕೆಗೆ ಕಾರಣ ಏನು?

ಕೋಕೋವನ್ನು ಐಸ್‌ಕ್ರೀಮ್, ಚಾಕೊಲೇಟ್, ಮಿಠಾಯಿ, ಬೇಕಿಂಗ್ ಮತ್ತು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಈ ಉದ್ಯಮಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ, ಬರ ಮತ್ತು ನೀರಿನ ಕೊರತೆಯಿಂದ ವಿಶ್ವದಾದ್ಯಂತ ಕೋಕೋ ಬೆಳೆ ಗಣನೀಯವಾಗಿ ಇಳಿಮುಖವಾಗಿರುವುದು ಇವತ್ತಿನ ಕೋಕೋ ಧಾರಣೆ ಏರಿಕೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಜಾಗತಿಕ ಪೂರೈಕೆಯ 70%ರಷ್ಟಿರುವ ಆಫ್ರಿಕಾದ ಕೋಕೋ ಉತ್ಪಾದನೆಯು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಜಾಗತಿಕ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗದೆ ಬೆಳೆ ನೆಲ ಕಚ್ಚಿರುವುದು ಭಾರತವೂ ಸೇರಿದಂತೆ ವಿಶ್ವ ಮಾರುಕಟ್ಟೆಯಲ್ಲಿ ಕೋಕೋ ಧಾರಣೆ ಏರಿಕೆ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲೂ ಹವಾಮಾನ ವ್ಯತ್ಯಾಸದಿಂದ ಕೋಕೋ ಬೆಳೆ ಇಳಿಮುಖವಾಗಿದೆ.

ಕ್ವಿಂಟಾಲ್ ಡ್ರೈ ಕೋಕೋಗೆ ಈಗ ಲಕ್ಷ ಬೆಲೆ

ಹಸಿ ಕೋಕೋ ದರ 320 ರೂ. ಗಡಿ ದಾಟುತ್ತಿರುವಾಗಲೇ, ಒಣಗಿದ ಡ್ರೈ ಕೋಕೋ ಧಾರಣೆಯೂ ಅದೇ ಪ್ರಮಾಣದಲ್ಲಿ ಏರುತ್ತಿದ್ದು ಗರಿಷ್ಠ ಒಣ ಕೋಕೋ ದರ ಈಗ ಕೆ.ಜಿ.ಗೆ 960 ರೂ. ಅನ್ನು ತಲುಪಿದೆ. ದರ ಏರಿಕೆ ಹೀಗೆ ಮುಂದುವರಿದರೆ ಮೂರ್ನಾಲ್ಕು ದಿನಗಳಲ್ಲಿ ಅದು ನಾಲ್ಕಂಕೆಯನ್ನು ಮುಟ್ಟಿ, ಕ್ವಿಂಟಾಲ್ ಡ್ರೈ ಕೋಕೋ ಬೆಲೆ ದಾಖಲೆಯ 1,00,000 ರೂ. ತಲುಪುವ ಸಾಧ್ಯತೆ ಇದೆ.

ಕೋಕೋ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಈಗ ದುಸ್ತರ

ಕೋಕೋ ಧಾರಣೆ ಮಿಂಚಿ‌ ವೇಗದಲ್ಲಿ ಏರುತ್ತಿರುವಾಗ ಫಸಲಿಗೆ ಬರುತ್ತಿರುವ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಸಣ್ಣ ರೈತರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಮಂಗ, ಅಳಿಲು, ಕೆಂಜಳಿಲು, ಕಬ್ಬೆಕ್ಕು, ಪಕ್ಷಿಗಳಿಂದ ಬೆಳೆಯನ್ನು ರಕ್ಷಣೆ ಮಾಡಿಕೊಂಡು ಹಣ್ಣಾದಾಗ ಕಟಾವು ಮಾಡಬೇಕು. ಆದರೆ ಕಟಾವು ಮಾಡುವ ಮೊದಲೇ ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಇದಲ್ಲದೆ ಕೋಕೋ ಹಣ್ಣುಗಳನ್ನು ತೋಟದಿಂದಲೇ ಕದಿಯುತ್ತಿರುವ ವರದಿಗಳೂ ಹರಿದಾಡುತ್ತಿವೆ.

ಇದನ್ನೂ ಓದಿ: Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಒಟ್ಟಿನಲ್ಲಿ ಒಂದು ಕಾಲದಲ್ಲಿ ಐಸ್‌ಕ್ರೀಮ್, ಚಾಕಲೇಟ್‌ಗಳಲ್ಲಿ ಬಳಸುತ್ತಿದ್ದ ವೆನಿಲಾ ಬೆಳೆಯ ದರ ಏರಿಕೆಯಿಂದ ಆಗುತ್ತಿದ್ದ ಪರಿಣಾಮಗಳು ಈಗ ಕೋಕೋಗೆ ರಾಜ ಮರ್ಯಾದೆಯ ದರ ಬರುತ್ತಿದೆ. ಜಾಗತಿಕ ಮಟ್ಟದಲ್ಲಿ ಕೋಕೋ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇರುವ ಕಾರಣ ಸಧ್ಯಕ್ಕಂತು ಅದರ ದರ ಇಳಿಯುವ ಸಾಧ್ಯತೆ ಕಡಿಮೆ ಎಂದು ಚರ್ಚೆ ನೆಡೆಯುತ್ತಿದೆ.

Continue Reading
Advertisement
Prajwal Revanna Case
ಕರ್ನಾಟಕ12 mins ago

Prajwal Revanna Case: ಜಡ್ಜ್‌ ಮುಂದೆಯೂ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಎಚ್‌.ಡಿ.ರೇವಣ್ಣ!

IPL 2024
ಪ್ರಮುಖ ಸುದ್ದಿ27 mins ago

IPL 2024 : ಐಪಿಎಲ್ ಸ್ಟೇಡಿಯಮ್​ಗಳ ಗಾತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆರ್​ ಅಶ್ವಿನ್​

Farooq Abdullah
ದೇಶ35 mins ago

ಪಿಒಕೆ ನಮ್ಮದು ಎಂದಿದ್ದಕ್ಕೆ ಪಾಕ್ ಬಳೆ ತೊಟ್ಟಿಲ್ಲ ಎಂದ ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ!‌ ಇವರ ಬೆಂಬಲ ಯಾರಿಗೆ?

Champions Trophy
Latest49 mins ago

Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

Fire Accident
ಕರ್ನಾಟಕ2 hours ago

Fire Accident: ಬೆಂಗಳೂರಿನ ಎಂ.ಜಿ. ರಸ್ತೆಯ ಆಪ್ಟಿಕಲ್ಸ್‌ ಮಳಿಗೆಯಲ್ಲಿ ಬೆಂಕಿ ಅವಘಡ

IPL 2024
ಕ್ರೀಡೆ2 hours ago

IPL 2024 : ಧೋನಿಯನ್ನು ಬೌಲ್ಡ್​ ಮಾಡಿ ಸಂಭ್ರಮಿಸದ ಹರ್ಷಲ್​ ಪಟೇಲ್​; ಕಾರಣ ನೀಡಿದ ಬೌಲರ್​

Al Jazeera
ಪ್ರಮುಖ ಸುದ್ದಿ2 hours ago

Al Jazeera: ಹಮಾಸ್‌ ಉಗ್ರರ ಪರ ನಿಲುವು; ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್‌ ಬಂದ್‌ ಮಾಡಿದ ನೆತನ್ಯಾಹು!

Pralhad Joshi
ಕರ್ನಾಟಕ2 hours ago

Pralhad Joshi: ಕಾಂಗ್ರೆಸ್‌ನಿಂದ ಮೋದಿ ಎಂಬ ಆಕಾಶಕ್ಕೆ ಉಗುಳೋ ಕೃತ್ಯ: ಪ್ರಲ್ಹಾದ್ ಜೋಶಿ

Bernard Hill
Latest2 hours ago

Titanic Movie : ಟೈಟಾನಿಕ್​, ಗಾಂಧಿ ಸಿನಿಮಾದ ನಟ ಬರ್ನಾರ್ಡ್ ಹಿಲ್ ನಿಧನ

IPL 2024
Latest3 hours ago

IPL 2024 : ಸಿಎಸ್​ಕೆ ತಂಡದ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಾಯಕ ಋತುರಾಜ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ5 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ5 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ18 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

ಟ್ರೆಂಡಿಂಗ್‌