ನವ ದೆಹಲಿ: ಚೀನಾದ ಸ್ಮಾರ್ಟ್‌ಫೋನ್ ಉತ್ಪಾದಕ ಶಿಯೋಮಿ, ಭಾರತದಲ್ಲಿ ತನ್ನ Mi ಫೈನಾನ್ಷಿಯಲ್ ಸರ್ವೀಸ್ ಸೇವೆಯನ್ನು (Xiaomi) ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.
ಭಾರತದಲ್ಲಿ ತನ್ನ ಪ್ರಮುಖ ಬಿಸಿನೆಸ್‌ಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಣಕಾಸು ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ.
ಶಿಯೋಮಿ 2019ರಲ್ಲಿ Mi Pay ಅನ್ನು ಆರಂಭಿಸಿತ್ತು. ಇದು ಎರಡು ಕೋಟಿ ಬಳಕೆದಾರರನ್ನು ಒಳಗೊಂಡಿದೆ. ಬಳಿಕ ಕಂಪನಿಯು Mi Credit ಅನ್ನೂ ಆರಂಭಿಸಿತ್ತು. 2019ರಲ್ಲಿ ಕಂಪನಿಯು 28 ಕೋಟಿ ರೂ. ಸಾಲವನ್ನು ವಿತರಿಸಿತ್ತು.