ಮುಂಬಯಿ: ಆಟೊಮೊಬೈಲ್ ದಿಗ್ಗಜ ಮಹೀಂದ್ರಾ & ಮಹೀದ್ರಾ (Mahindra & Mahindra) ತನ್ನ 12,566 XUV700 ಮತ್ತು ಸ್ಕಾರ್ಪಿಯೊ-ಎನ್ ಎಸ್‌ಯುವಿಯನ್ನು ಹಿಂತೆಗೆದುಕೊಂಡಿದೆ. ಸಂಭವನೀಯ ತಾಂತ್ರಿಕ ಅಡಚಣೆಯನ್ನು ದುರಸ್ತಿಪಡಿಸುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಮಹೀಂದ್ರಾ 12,566 XUV700 ಮತ್ತು 6,618 ಸ್ಕಾರ್ಪಿಯೊ-ಎನ್ ಮಾದರಿಯನ್ನು ಹಿಂತೆಗೆದುಕೊಂಡಿದೆ.
ಈ ವಾಹನಗಳ ವೆಂಡರ್ ಕಡೆಯಿಂದ ಬಿಡಿಭಾಗಗಳ ಪೂರೈಕೆಯಲ್ಲಿ ಗುಣಮಟ್ಟದಲ್ಲಿ ಕೊರತೆ ಆಗಿದ್ದರಿಂದ ಹೀಗಾಗಿದೆ ಎಂದು ಕಂಪನಿ ತಿಳಿಸಿದೆ. ದೋಷಪೂರಿತ ಭಾಗವನ್ನು ಉಚಿತವಾಗಿ ಬದಲಿಸಿ ಕೊಡಲಾಗುವುದು ಎಂದಿದೆ.