ಬೆಂಗಳೂರು: ಖಾಸಗಿ ವಲಯದ ಯೆಸ್ ಬ್ಯಾಂಕ್ ತನ್ನ ಉಳಿತಾಯ (Yes Bank) ಖಾತೆಗಳ ಬಡ್ಡಿ ದರವನ್ನು ಸೆಪ್ಟೆಂಬರ್ 17ರಿಂದ ಅನ್ವಯವಾಗುವಂತೆ ಏರಿಸಿದೆ.
ದಿನವಹಿ ಉಳಿತಾಯ ಖಾತೆಯಲ್ಲಿ 1 ಲಕ್ಷ ರೂ. ತನಕದ ಬ್ಯಾಲೆನ್ಸ್‌ಗೆ 4% ಬಡ್ಡಿ ಸಿಗಲಿದೆ. 1-5 ಲಕ್ಷ ರೂ. ತನಕದ ಬ್ಯಾಲೆನ್ಸ್‌ಗೆ 4.25% ಬಡ್ಡಿ ಆದಾಯ ಇದೆ. 5-10 ಲಕ್ಷ ರೂ. ಬ್ಯಾಲೆನ್ಸ್ ಇದ್ದರೆ 5% ಹಾಗೂ, 10-25 ಲಕ್ಷ ರೂ. ಬ್ಯಾಲೆನ್ಸ್‌ಗೆ 5.50% ಬಡ್ಡಿ ದರವನ್ನು ಯೆಸ್ ಬ್ಯಾಂಕ್ ನೀಡಲಿದೆ. 25 ಲಕ್ಷ ರೂ.ಗಿಂತ ಹೆಚ್ಚಿನ ಬ್ಯಾಲೆನ್ಸ್ ಇದ್ದರೆ 6.25% ಬಡ್ಡಿಯನ್ನು ಬ್ಯಾಂಕ್ ನೀಡಲಿದೆ. 10-25 ಕೋಟಿ ರೂ. ಬ್ಯಾಲೆನ್ಸ್ ಇದ್ದರೆ 6.50% ಬಡ್ಡಿ ಸಿಗಲಿದೆ.
ಉಳಿತಾಯ ಬ್ಯಾಂಕ್ ಖಾತೆಯ ಬಡ್ಡಿ ದರ ಪಾವತಿಯನ್ನು ತ್ರೈಮಾಸಿಕ ಆಧಾರದಲ್ಲಿ ಮಾಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.