Site icon Vistara News

Gautam Adani | ಮೋದಿಯವರಿಂದ ನೀವು ಯಾವುದೇ ವೈಯಕ್ತಿಕ ಸಹಾಯ ನಿರೀಕ್ಷಿಸಲು ಸಾಧ್ಯವಿಲ್ಲ: ಗೌತಮ್‌ ಅದಾನಿ

Allegation of fraud, Rs 46,000 crore for Adani Group shares. Loss, what did the group say?

ನವ ದೆಹಲಿ: ನೀವು ಪ್ರಧಾನಿ ನರೇಂದ್ರ ಮೋದಿಯವರಿಂದ ವೈಯಕ್ತಿಕವಾಗಿ ಯಾವುದೇ ಸಹಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಬಗ್ಗೆ ಮಾತ್ರ ಅವರ ಬಳಿ ಮಾತನಾಡಬಹುದು (Gautam Adani) ಎಂದು ಏಷ್ಯಾದ ಸಿರಿವಂತ ಉದ್ಯಮಿ ಗೌತಮ್‌ ಅದಾನಿ ಹೇಳಿದ್ದಾರೆ.

ಇಂಡಿಯಾ ಟಿವಿ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಅದಾನಿ ಗ್ರೂಪ್‌ ಇವತ್ತು 22 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಅವುಗಳ ಪೈಕಿ ಪ್ರತಿ ರಾಜ್ಯದಲ್ಲೂ ಬಿಜೆಪಿ ಆಡಳಿತ ನಡೆಸುತ್ತಿಲ್ಲ. ಬೇರೆ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲೂ ಅದಾನಿ ಗ್ರೂಪ್‌ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಇಂಡಿಯಾ ಟಿವಿ ಚೇರ್ಮನ್‌ ಆಗಿರುವ ಹಿರಿಯ ಪತ್ರಕರ್ತ ರಜತ್‌ ಶರ್ಮಾ ಅವರು ನಡೆಸಿಕೊಡುವ ಆಪ್‌ ಕಿ ಅದಾಲತ್‌ ಟಿವಿ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Exit mobile version