Site icon Vistara News

Youngest billionaires: ಫೋರ್ಬ್ಸ್‌ ಶ್ರೀಮಂತರ ಪಟ್ಟಿಯಲ್ಲಿ ಬೆಂಗಳೂರಿನ ಕಿರಿಯ ಬಿಲಿಯನೇರ್ ಸಹೋದರರು!

Youngest billionaires

ಬೆಂಗಳೂರು: ವಿಶ್ವದ ಬಿಲಿಯನೇರ್ ಪಟ್ಟಿಯಲ್ಲಿ ಬೆಂಗಳೂರು (bengaluru) ಸಹೋದರರು (brothers) ಸೇರಿ ನಾಲ್ಕು ಮಂದಿ ಭಾರತದ (india) ಅತ್ಯಂತ ಕಿರಿಯ ಬಿಲಿಯನೇರ್‌ಗಳಾಗಿ (youngest billionaires) ಗುರುತಿಸಿಕೊಂಡಿದ್ದಾರೆ.

2024ರ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ( Forbes Billionaires List) ಝೆರೋಧಾ ಸಂಸ್ಥಾಪಕರಾದ (Zerodha founders) ನಿತಿನ್ ಮತ್ತು ನಿಖಿಲ್ ಕಾಮತ್ (Nithin and Nikhil Kamath) ಮತ್ತು ಫ್ಲಿಪ್‌ಕಾರ್ಟ್ ಸಂಸ್ಥಾಪಕರಾದ (Flipkart founders) ಸಚಿನ್ ಮತ್ತು ಬಿನ್ನಿ ಬನ್ಸಾಲ್ (Sachin and Binny Bansal) ಜೋಡಿ 45ರ ವಯಸ್ಸಿನೊಳಗಿರುವ ಭಾರತದ ಅತ್ಯಂತ ಕಿರಿಯ ಬಿಲಿಯನೇರ್‌ಗಳಾಗಿದ್ದಾರೆ.


ಕಿರಿಯ ಬಿಲಿಯನೇರ್ ಜೋಡಿಯ ಸಂಪತ್ತು

ನಿಖಿಲ್ ಕಾಮತ್ 37ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಆಗಿದ್ದು, ಇವರ ಸಂಪತ್ತು 3.1 ಬಿಲಿಯನ್ ಡಾಲರ್. ಇವರ ಹಿರಿಯ ಸಹೋದರ ನಿತಿನ್ ಕಾಮತ್ ಅವರ ವಯಸ್ಸು 44. ಇವರ ಸಂಪತ್ತು 4.8 ಬಿಲಿಯನ್ ಡಾಲರ್. ಕಾಮತ್ ಸಹೋದರರ ನಿವ್ವಳ ಮೌಲ್ಯ ಕಳೆದ ಒಂದು ವರ್ಷದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.

ಇದನ್ನೂ ಓದಿ: Mukesh Ambani: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿಯನ್ನು ಹಿಂದಿಕ್ಕಿದ ಅಂಬಾನಿ; ಉಳಿದ ಸಿರಿವಂತರು ಯಾರು?

2007ರಲ್ಲಿ ಸಚಿನ್ ಬನ್ಸಾಲ್ ಅವರೊಂದಿಗೆ ಮೊದಲು ಆನ್‌ಲೈನ್ ಪುಸ್ತಕ ಮಾರಾಟಗಾರರಾಗಿ ಫ್ಲಿಪ್‌ಕಾರ್ಟ್ ಅನ್ನು ಸ್ಥಾಪಿಸಿದ ಬಿನ್ನಿ ಬನ್ಸಾಲ್ ಅವರ ನಿವ್ವಳ ಮೌಲ್ಯ 1.4 ಬಿಲಿಯನ್ ಡಾಲರ್. ಕಳೆದ ಒಂದು ವರ್ಷದಲ್ಲಿ ಬಿನ್ನಿ ಬನ್ಸಾಲ್ ಅವರ ಸಂಪತ್ತು ಮೌಲ್ಯ ಹೆಚ್ಚಾಗಿಲ್ಲ. ಸಚಿನ್ ಬನ್ಸಾಲ್ ಅವರ ಸಂಪತ್ತಿನಲ್ಲಿ ಕುಸಿತ ಕಂಡಿದೆ. ಆದರೂ ಅವರಿಬ್ಬರೂ ಭಾರತದ ಅತ್ಯಂತ ಕಿರಿಯ ಬಿಲಿಯನೇರ್‌ಗಳಾಗಿ ಮುಂದುವರಿದಿದ್ದಾರೆ.

ಮುಕೇಶ್ ಅಂಬಾನಿ ದೇಶದ ಸಿರಿವಂತ

ವಿಶ್ವದ ಬಿಲಿಯನೇರ್ ಪಟ್ಟಿಯಲ್ಲಿ ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿಯನ್ನು ಹಿಂದಿಕ್ಕಿದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

2024ರ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು 83 ಶತಕೋಟಿ ಡಾಲರ್ ನಿಂದ 116 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಈ ಮೂಲಕ ಮುಖೇಶ್ ಅಂಬಾನಿ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿಯಾಗಿ ಸ್ಥಾನಗಳಿಸಿದ್ದಾರೆ. ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲನೆಯವರಾಗಿ ಗುರುತಿಸಿಕೊಂಡಿದ್ದಾರೆ.

ಅದಾನಿಗೆ ಎರಡನೇ ಸ್ಥಾನ

ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದು, ಅವರ ಸಂಪತ್ತಿನ ಮೌಲ್ಯ 36.8 ಶತಕೋಟಿ ಡಾಲರ್. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅವರು 17 ಸ್ಥಾನದಲ್ಲಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಸಾವಿತ್ರಿ ಜಿಂದಾಲ್ ಆಗಿದ್ದು, ಇವರು ಈಗ ಭಾರತದ ನಾಲ್ಕನೇ ಶ್ರೀಮಂತರಾಗಿದ್ದಾರೆ. ಕಳೆದ ವರ್ಷ ಇವರು ಆರನೇ ಸ್ಥಾನದಲ್ಲಿದ್ದರು.

ಭಾರತದ 10 ಶ್ರೀಮಂತ ವ್ಯಕ್ತಿಗಳು ಮತ್ತು ಅವರ ಸಂಪತ್ತು ಡಾಲರ್ ನಲ್ಲಿ

ಮುಕೇಶ್ ಅಂಬಾನಿ- 116 ಬಿಲಿಯನ್
ಗೌತಮ್ ಅದಾನಿ- 84 ಬಿಲಿಯನ್
ಶಿವ ನಾಡಾರ್- 36.9 ಬಿಲಿಯನ್
ಸಾವಿತ್ರಿ ಜಿಂದಾಲ್- 33.5 ಬಿಲಿಯನ್
ದಿಲೀಪ್ ಶಾಂಘ್ವಿ- 26.7 ಬಿಲಿಯನ್
ಸೈರಸ್ ಪೂನಾವಲ್ಲಾ- 21.3 ಬಿಲಿಯನ್
ಕುಶಾಲ್ ಪಾಲ್ ಸಿಂಗ್- 20.9 ಬಿಲಿಯನ್
ಕುಮಾರ್ ಬಿರ್ಲಾ – 19.7 ಬಿಲಿಯನ್
ರಾಧಾಕಿಶನ್ ದಮಾನಿ- 17.6 ಬಿಲಿಯನ್
ಲಕ್ಷ್ಮಿ ಮಿತ್ತಲ್- 16.4 ಬಿಲಿಯನ್

Exit mobile version