Site icon Vistara News

Zerodha : ವಿಶ್ವ ಆರೋಗ್ಯ ದಿನ ಫಿಟ್ನೆಸ್‌ಗೆ ಸ್ಪೂರ್ತಿ ನೀಡಿದವರನ್ನು ಸ್ಮರಿಸಿದ ಜೆರೋಧಾ ಸಿಇಒ ನಿತಿನ್‌ ಕಾಮತ್

Nithin Kamat

#image_title

ಬೆಂಗಳೂರು: ಫೋರ್ಬ್ಸ್‌ ಬಿಲಿಯನೇರ್‌ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವ ಜೆರೋಧಾ ಕಂಪನಿಯ ಸಿಇಒ ನಿತಿನ್‌ ಕಾಮತ್‌ ಅವರು ಸದಾ ಫಿಟ್ನೆಸ್‌ ಬಗ್ಗೆ ಕಾಳಜಿ ವಹಿಸುವವರು. ಜೆರೋಧಾದಲ್ಲಿ ಸಿಬ್ಬಂದಿಯ ಆರೋಗ್ಯ ಮತ್ತು ಫಿಟ್ನೆಸ್‌ ಬಗ್ಗೆಯೂ ಮುತುವರ್ಜಿ ವಹಿಸುತ್ತಾರೆ. ವಿಶ್ವ ಆರೋಗ್ಯ ದಿನದಂದು (world health day) ತಮಗೆ ಫಿಟ್ನೆಸ್‌ ವಿಷಯದಲ್ಲಿ ಪ್ರೇರಣೆ ನೀಡಿರುವ 6 ಮಂದಿ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಅವರೆಲ್ಲರೂ ಹೇಗೆ ತಮ್ಮ ಶಾರೀರಿಕ ಆರೋಗ್ಯವನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಹಣ ಆರೋಗ್ಯವನ್ನು ಖರೀದಿಸಲಾರದು, ಸಣ್ಣ ರೀತಿಯಲ್ಲಿ ಜೀವನ ಶೈಲಿಯನ್ನು ಮಾರ್ಪಡಿಸುವುದರಿಂದ ಉತ್ತಮ ಫಿಟ್ನೆಸ್ ಗಳಿಸಬಹುದು.‌ ನನ್ನ ಬದುಕಿನಲ್ಲಿ ಅಂಥ ಬದಲಾವಣೆಗೆ ಕಾರಣರಾದವರು ಇವರು ಎಂದು ವಿವರಿಸಿದ್ದಾರೆ.

ಜೆರೋಧಾ ಕಂಪನಿಯ ಎಲ್ಲ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ವೇಣು, ಜೆರೋಧಾವರ್ಸಿಟಿಯ ರೂವಾರಿ ಕಾರ್ತಿಕ್‌ ರಂಗಪ್ಪ, ಕಾಯಿನ್‌ ಬೈ ಜೆರೋಧಾದ ವಿಷ್ಣು, ಟೆಕ್‌ ಉದ್ಯಮಿ ದಿಲೀಪ್‌ ಕುಮಾರ್‌, ಡೆವಿಲ್ಸ್‌ ಸರ್ಕ್ಯೂಟ್‌ನ ರೂವಾರಿ ಅಂದಾನ್‌ ಅದೀಬ್‌ ಹಾಗೂ ತಮ್ಮ ಪತ್ನಿ ಸೀಮಾ ಅವರನ್ನು ನಿತಿನ್‌ ಕಾಮತ್ ಸ್ಮರಿಸಿದ್ದಾರೆ. ಪತ್ನಿ ಸೀಮಾ ಅವರು ಈ ಹಿಂದೆ ಸ್ತನದ ಕ್ಯಾನ್ಸರ್‌ಗೆ ಒಳಗಾಗಿದ್ದರೂ, ಬಳಿಕ ಚೇತರಿಸಿದ್ದರು ಹಾಗೂ ಅತ್ಯುತ್ತಮ ರೀತಿಯಲ್ಲಿ ಫಿಟ್ನೆಸ್‌ ಕಾಪಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Exit mobile version