Site icon Vistara News

Zomato: ಇನ್ನು ಝೊಮಾಟೋ ಮೂಲಕ ಆನ್‌ಲೈನ್ ಪೇಮೆಂಟ್ ಮಾಡಬಹುದು!

zomato

ನವದೆಹಲಿ: ಆನ್‌ಲೈನ್ ಫುಡ್ ಡೆಲಿವರಿ (Food Delivery App) ವೇದಿಕೆ ಝೊಮಾಟೋ (Zomato) ಇನ್ನು ಮುಂದೆ ಆನ್‌ಲೈನ್ ಪೇಮೆಂಟ್ ಅಗ್ರಿಗೇಟರ್(online payment aggregator) ಸೇವೆಯನ್ನೂ ಒದಗಿಸಲಿದೆ. ಝೊಮಾಟೋನ‌ ಈ ಹೊಸ ಸೇವೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಒಪ್ಪಿಗೆ ನೀಡಿದೆ.

2021 ಆಗಸ್ಟ್ 4ರ ದಿನಾಂಕದ ನಮ್ಮ ಹಿಂದಿನ ಮಾಹಿತಿಯ ಪ್ರಕಾರ, ಝೊಮಾಟೋ ಲಿಮಿಟೆಡ್‌ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜೊಮಾಟೊ ಪಾವತಿಗಳ ಪ್ರೈವೇಟ್ ಲಿ. ಅನ್ನು ಸಂಯೋಜಿತಗೊಳಿಸುವುದರ ಕುರಿತು, ವ್ಯವಹಾರವನ್ನು ಬೇರೆ ಬೇರೆಯಾಗಿ, ಪಾವತಿ ಸಂಗ್ರಾಹಕರಾಗಿ ನಿರ್ವಹಿಸಲು ಮತ್ತು ಪೂರ್ವ-ಪಾವತಿಸಿದ ಪಾವತಿ ಸೇವೆಯನ್ನು ಭಾರತದಲ್ಲಿ ಕೈಗೊಳ್ಳಲು ಜೆಡ್‌ಪಿಪಿಎಲ್‌ಗೆ ‘ಆನ್‌ಲೈನ್ ಪಾವತಿ ಸಂಗ್ರಾಹಕ’ ಆಗಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ 2024ರ ಜನವರಿ 24ರಂದು ಅಧಿಕೃತ ಪ್ರಮಾಣಪತ್ರವನ್ನು ನೀಡಿದೆ ಎಂದು ಷೇರುಪೇಟೆಗೆ ಝೊಮಾಟೋ ತಿಳಿಸಿದೆ.

ಷೇರುಪೇಟೆ ತನ್ನ ವ್ಯವಾಹರ ಮುಗಿಸಿದಾಗ ಝೊಮಾಟೋ ಷೇರುಗಳ 136 ರೂ.ರಲ್ಲಿ ವಹಿವಾಟು ನಡೆಸುತ್ತಿದ್ದವು. ಬಿಎಸ್‌ಇ ವೆಬ್‌ಸೈಟ್ ಪ್ರಕಾರ ಕಂಪನಿಯ ಮಾರುಕಟ್ಟೆ ಮೌಲ್ಯವು ಪ್ರಸ್ತುತ 1,18,468 ಕೋಟಿ ರೂ.ಗಳಷ್ಟಿದೆ. ಭಾರತೀಯ ಇ-ಕಾಮರ್ಸ್ ಶಿಪ್ಪಿಂಗ್ ಸ್ಟಾರ್ಟ್ಅಪ್ ಶಿಪ್ರೋಕೆಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಜೊಮಾಟೊ ಪ್ರಸ್ತಾಪವನ್ನು ಮಾಡಿದೆ ಎಂದು ಕಳೆದ ಡಿಸೆಂಬರ್‌ನಲ್ಲಿ ಬ್ಲೂಮ್‌ಬರ್ಗ್ ವರದಿ ಮಾಡಿತ್ತು.

ಈ ಉಪಕ್ರಮದೊಂದಿಗೆ ಝೊಮಾಟೋ ಕೂಡ ಈಗ ಟಾಟಾ ಪೇ, ರೇಜರ್‌ಪೇ, ಕ್ಯಾಶ್‌ಫ್ರೀ ಸೇರಿದಂತೆ ಇನ್ನಿತರ ಪೇಮೆಂಟ್ ಪಾವತಿಸುವ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ.

ಪಾವತಿ ಸಂಗ್ರಾಹಕರು ಇ-ಕಾಮರ್ಸ್ ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ವ್ಯಾಪಾರಿಗಳು ತಮ್ಮ ವಹಿವಾಟುಗಳಿಗಾಗಿ ಗ್ರಾಹಕರಿಂದ ಪಾವತಿ ಸಾಧನಗಳನ್ನು ಸ್ವೀಕರಿಸಲು ಅನುಕೂಲ ಮಾಡಿಕೊಡುತ್ತಾರೆ, ವ್ಯಾಪಾರಿಗಳು ತಮ್ಮದೇ ಆದ ಪಾವತಿ ಇಂಟರ್ಫೇಸ್ ಅನ್ನು ರಚಿಸುವ ಅಗತ್ಯವಿರುವುದಿಲ್ಲ. ಡಿಜಿಟಲ್ ಪಾವತಿ ಸ್ವೀಕಾರ ಪರಿಹಾರಗಳನ್ನು ನೀಡಲು ಪಾವತಿ ಗೇಟ್‌ವೇಗಳು ಅಗ್ರಿಗೇಟರ್ ಪರವಾನಗಿಯನ್ನು ಪಡೆಯುವುದ ಕಡ್ಡಾಯವಾಗಿದೆ.

ಈ ಸುದ್ದಿಯನ್ನೂ ಓದಿ: Viral video: ಫುಡ್‌ ಡೆಲಿವರಿಗೆ ಕುದುರೆ ಏರಿ ಬಂದ ಜೊಮ್ಯಾಟೊ ಪೋರ!

Exit mobile version