ಬೆಂಗಳೂರು: ಗಂಡ ಯಾವುದೋ ಕಾರಣಕ್ಕೆ ತೀರಿಕೊಂಡಿದ್ದಾನೆ. ಮಹಿಳೆ ಗಂಡನ ತಂದೆ-ತಾಯಿ ಜತೆ ಅಂದರೆ ಅತ್ತೆ-ಮಾವನ (Husbands Father and Mother) ಜತೆ ವಾಸವಾಗಿದ್ದಾಳೆ. ಆಕೆಗೆ ಅವರ ಜತೆಗೆ ಸರಿ ಹೋಗುತ್ತಿಲ್ಲ. ಈ ಹಂತದಲ್ಲಿ ಆಕೆ ಗಂಡನ ತಂದೆ-ತಾಯಿಯಿಂದ ಜೀವನಾಂಶ (Alimony Case) ಪಡೆಯಬಹುದೇ? ಎಂಬುದು ಪ್ರಶ್ನೆ. ಆದರೆ, ಈ ಪ್ರಶ್ನೆಗೆ ರಾಜ್ಯ ಹೈಕೋರ್ಟ್ (Karnataka high Court) ನೋ- ಎಂದಿದೆ.
ಅಪರಾಧ ದಂಡ ಸಂಹಿತೆ ಸೆಕ್ಷನ್ 125ರಡಿ ಸೊಸೆಗೆ ತನ್ನ ಅತ್ತೆ ಮಾವನಿಂದ ಜೀವನಾಂಶ ಪಡೆದುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದು ಬಳ್ಳಾರಿಯ ಕುಟುಂಬವೊಂದಕ್ಕೆ ಸಂಬಂಧಿಸಿದ ವಿವಾದ ಹೈಕೋರ್ಟ್ ಮೆಟ್ಟಿಲೇರಿರುವ ಕೇಸು. ಖಾಜಾ ಮೊಯಿನುದ್ದೀನ್ ಅಗಡಿ ಹಾಗೂ ತಸ್ಲೀಮಾ ಜಮೀಲಾ ಅವರು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ವೈವಾಹಿಕ ಬದುಕಿನಲ್ಲಿ ಅವರಿಗೆ ನಾಲ್ವರು ಮಕ್ಕಳು ಜನಿಸಿದ್ದರು.
ಈ ನಡುವೆ, ಮೊಯಿನುದ್ದೀನ್ ಅಗಡಿ ಅಕಾಲಿಕವಾಗಿ ನಿಧನರಾಗುತ್ತಾರೆ. ಆದರೆ, ಜಮೀಲಾ ತಮ್ಮ ಅತ್ತೆ-ಮಾವನ ಜತೆ ವಾಸವಾಗಿರುತ್ತಾರೆ. ಆದರೆ, ಅದ್ಯಾಕೋ ಸರಿ ಹೋಗುತ್ತಿರಲಿಲ್ಲ. ಪತಿ ನಿಧನ ಬಳಿಕ ಪತಿಯ ತಂದೆ ತಾಯಿ ತನ್ನನ್ನು ಮತ್ತು ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ. ಹಾಗಾಗಿ ಅವರಿಂದ ಜೀವನಾಂಶ ಕೊಡಿಸಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲು ಹತ್ತಿದ್ದರು.
ಅವರ ಅರ್ಜಿಯನ್ನು ಮಾನ್ಯ ಮಾಡಿದ ಬಳ್ಳಾರಿ ನ್ಯಾಯಾಲಯ (Ballary Bench of High court), ಪತಿಗೆ 20 ಸಾವಿರ ಹಾಗೂ ನಾಲ್ವರು ಮಕ್ಕಳಿಗೆ 5 ಸಾವಿರ ರೂ. ಸೇರಿ ಒಟ್ಟು 25 ಸಾವಿರ ಜೀವನಾಂಶವನ್ನು ನೀಡುವಂತೆ ಪತಿಯ ಪೋಷಕರಿಗೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಜಮೀಲಾ ಅವರ ಅತ್ತೆ ಮಾವ ಹೈಕೋರ್ಟ್ ಮೊರೆ ಹೊಕ್ಕಿದ್ದರು.
ಅಬ್ದುಲ್ ಖಾದರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಧಾರವಾಡ ಹೈಕೋರ್ಟ್ ಪೀಠವು ಬಳ್ಳಾರಿಯ ದಂಪತಿ ಪ್ರಕರಣದಲ್ಲಿ ತನ್ನ ಪತಿ ನಿಧನದ ನಂತರ ಪತ್ನಿ, ತನ್ನ ಪತಿಯ ತಂದೆ ತಾಯಿಯಿಂದ ಜೀವನಾಂಶ ಕೋರಲಾಗದು ಎಂದು ತಿಳಿಸಿದೆ. ಜತೆಗೆ ಸೊಸೆ ಮತ್ತು ಆಕೆಯ ಮಕ್ಕಳಿಗೆ, ಅತ್ತೆ ಮಾವ ಮಾಸಿಕ 25 ಸಾವಿರ ರೂ. ಜೀವನಾಂಶ ನೀಡಬೇಕೆಂದು ಅಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.
ಇದನ್ನೂ ಓದಿ : High court : ಪತಿ ಆಪರೇಷನ್ ಮಾಡಿಸಿಕೊಂಡಿಲ್ಲ ಎಂದು ಪತ್ನಿಯ ಹೆರಿಗೆ ಭತ್ಯೆ ತಡೆಹಿಡಿದ KPTCL, ಹೈಕೋರ್ಟ್ ಗರಂ
Alimony Case : ಹಾಗಿದ್ದರೆ ನ್ಯಾಯಾಲಯ, ವಕೀಲರು ಹೇಳುವುದೇನು?
- ಸಿಆರ್‌ಪಿಸಿ ಸೆಕ್ಷನ್ 125ರಡಿ ಪತ್ನಿ ಗಂಡನಿಂದ ಜೀವನಾಂಶ ಕೋರುವ ಹಕ್ಕಿದೆ. ಅದೇ ರೀತಿ ಪೋಷಕರು ತಮ್ಮ ವಯಸ್ಕ ಮಗನಿಂದ ಜೀವನಾಂಶ ಕೋರಬಹುದಾಗಿದೆ. ಅದೇ ರೀತಿ ಅಪ್ರಾಪ್ತ ಮಕ್ಕಳು ಸಹ ತಂದೆಯಿಂದ ಜೀವನಾಂಶ ಕೇಳಬಹುದಾಗಿದೆ.
- ಆದರೆ, ನಿಯಮದಲ್ಲಿ ಎಲ್ಲಿಯೂ ಪತಿ ನಿಧನದ ನಂತರ ಅವರ ತಂದೆ ತಾಯಿಗಳಿಂದ ಜೀವನಾಂಶ ಪಡೆಯಲು ಅಧಿಕಾರವಿಲ್ಲ.
- ಅದೇ ಆಧಾರದ ಮೇಲೆ ಬಳ್ಳಾರಿಯ ನ್ಯಾಯಾಲಯ 2021ರ ನ.30ರಂದು ಸೊಸೆಗೆ ಅತ್ತೆ ಮಾವ 25 ಸಾವಿರ ಜೀವನಾಂಶ ನೀಡಬೇಕು ಎಂದು ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
- ಸಿಆರ್‌ಪಿಸಿ ಸೆಕ್ಷನ್ 125ರಡಿ ಜೀವನಾಂಶ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಬೇಕಾಗಿಲ್ಲ.
- ಪುತ್ರನ ನಿಧನ ನಂತರ ಸೊಸೆಗೆ ಜೀವನಾಂಶ ನೀಡಬೇಕೆಂಬ ನಿಯಮವಿಲ್ಲ.