Site icon Vistara News

Jayalalitha Jewellery : ಅಮ್ಮನ ಆಭರಣ ನಂಗೇ ಬೇಕು ಎಂದ ಜಯಾ ಸೊಸೆ ದೀಪಾ; ಹಸ್ತಾಂತರಕ್ಕೆ ತಡೆ

Jayalalitha Jewellery deepa1

ಬೆಂಗಳೂರು: ನಾನು ಜಯಲಲಿತಾ (J Jayalalitha) ಅವರ ಕಾನೂನುಬದ್ಧ ಉತ್ತರಾಧಿಕಾರಿ. ಕೋರ್ಟ್‌ನಲ್ಲಿರುವ ಎಲ್ಲ ಆಭರಣಗಳು (Jayalalitha Jewellery) ನನಗೇ ಸೇರಬೇಕು; ರಾಜ್ಯ ಹೈಕೋರ್ಟ್‌ನ (Karnataka High Court) ಮುಂದೆ ಹೀಗೆ ದಾವೆ ಸಲ್ಲಿಸಿದ್ದಾರೆ ಜೆ ದೀಪಾ ಜಯಕುಮಾರ್‌ (J Deepa Jayakumar). ಇವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೊಸೆ. ಆಕೆಯ ದಾವೆಯನ್ನು ಸ್ವೀಕರಿಸಿರುವ ಹೈಕೋರ್ಟ್‌ ಈ ಹಿಂದೆ ಜಯಲಲಿತಾ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ನೀಡಿದ್ದ ವಿಶೇಷ ಸಿಬಿಐ ನ್ಯಾಯಾಲಯದ (Special CBI Court) ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಚಿನ್ನಾಭರಣ ಮತ್ತು ಇತರ ಪರಿಕರಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವಂತೆ ಕೋರ್ಟ್‌ ಸೂಚಿಸಿತ್ತು. ಮಾರ್ಚ್‌ 6 ಮತ್ತು 7ರಂದು ಜಯಲಲಿತಾ ಅವರ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಎಲ್ಲ ಸಿದ್ಧತೆಗಳು ನಡೆದಿದ್ದವು. ಆದರೆ, ಮಾರ್ಚ್‌ 15ರಂದು ನಡೆದ ವಿಚಾರಣೆಯ ವೇಳೆ ರಾಜ್ಯ ಹೈ ವಿಶೇಷ ಸಿಬಿಐ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ಹಾಕಿದೆ. ಮುಂದಿನ ವಿಚಾರಣೆ ಮಾರ್ಚ್‌ 26ರಂದು ನಡೆಯಲಿದೆ.

ಇದನ್ನೂ ಓದಿ : Jayalalitha Jewellery : ಜಯಲಲಿತಾ ಆಭರಣ ಒಯ್ಯಲು ಆರು ಟ್ರಂಕ್‌ ತನ್ನಿ ಎಂದ ಕೋರ್ಟ್‌!

Jayalalitha Jewellery :ಏನಿದು ಜಯಲಲಿತಾ ಆಭರಣ ಪ್ರಕರಣ?

ಜೆ. ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಯನ್ನು ತಮಿಳುನಾಡಿನ ಬದಲು ಕರ್ನಾಟಕದಲ್ಲಿ ನಡೆಸಲಾಗಿತ್ತು. ಆಗ ಜಯಲಲಿತಾ ಅವರ ನಿವಾಸದಲ್ಲಿ ನಡೆದ ಐಟಿ ದಾಳಿಯ ವೇಳೆ ಸಂಗ್ರಹಿಸಲಾಗಿದ್ದ ಎಲ್ಲಾ ಆಭರಣಗಳನ್ನು, ಸೀರೆಗಳನ್ನು ತಂದು ಕರ್ನಾಟಕದಲ್ಲಿ ಇಡಲಾಗಿತ್ತು. ಈ ಪ್ರಕರಣ ಆನಂತರ ಸುಪ್ರೀಂ ಕೋರ್ಟ್ ನಲ್ಲೂ ನಡೆದಿತ್ತು. 2016ರಲ್ಲಿ ಜಯಲಲಿತಾ ಅವರು ನಿಧನರಾದ ನಂತರ ಸುಪ್ರೀಂ ಕೋರ್ಟ್, ಜಯಲಲಿತಾರನ್ನು ದೋಷಮುಕ್ತಗೊಳಿಸಿತ್ತು. ಇದಾದ ಬಳಿಕ ಜಯಲಲಿತಾರಿಗೆ ಸೇರಿದ್ದ ಆಭರಣಗಳು ಹಾಗೂ ಸೀರೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯ ಫೆ. 20ರಂದು ಆದೇಶ ನೀಡಿತ್ತು.

ಚಿನ್ನಾಭರಣ ಒಯ್ಯಲು ಆರು ಟ್ರಂಕ್ ತರಲು ಸೂಚಿಸಲಾಗಿತ್ತು!

ಜಯಲಲಿತಾರ ಆಭರಣ, ಸೀರೆಗಳನ್ನು ಹಸ್ತಾಂತರಕ್ಕೆ ಸಂಬಂಧಿಸಿ ಕೆಲವೊಂದು ಸೂಚನೆಗಳನ್ನು ನೀಡಿತ್ತು. ಆಭರಣ ಹಾಗೂ ಸೀರೆಗಳ ಹಸ್ತಾಂತರ ವೇಳೆ, ಇಬ್ಬರು ಅಧಿಕಾರಿಗಳು ಹಾಜರಿರಬೇಕು. ಅಂದಾಜು ಆರೇಳು ಟ್ರಂಕ್ ಗಳನ್ನು ತರಬೇಕು. ಒಬ್ಬ ವಿಡಿಯೋಗ್ರಾಫರ್, ಒಬ್ಬ ಫೋಟೋಗ್ರಾಫರ್ ಜತೆಯಲ್ಲಿ ಬರಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಹಸ್ತಾಂತರ ವೇಳೆ ಹಾಜರಿರಬೇಕಾದ ಅಧಿಕಾರಿಗಳ ಹೆಸರುಗಳನ್ನೂ ನ್ಯಾಯಾಲಯ ಸೂಚಿಸಿತ್ತು. ತಮಿಳುನಾಡಿನ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಗುಪ್ತಚರ ಇಲಾಖೆಯ ಡಿಐಜಿ ಹಾಜರಿರಬೇಕು ಎಂದು ನ್ಯಾಯಾಲಯ ಹೇಳಿತ್ತು.

Jayalalitha Jewellery : ದೀಪಾ ಯಾರು ಮತ್ತು ದೀಪಾ ವಾದವೇನು?

ಜೆ. ದೀಪಾ ಅವರು ಜಯಲಲಿತಾ ಅವರ ಸೊಸೆ. ಅಂದರೆ ಜಯಲಲಿತಾ ಅವರ ಏಕೈಕ ಸಹೋದರ ಜಯಕುಮಾರ್‌ ಅವರ ಪುತ್ರಿ. ಜೆ. ದೀಪಾ ಅವರಿಗೆ ಈಗ 49 ವರ್ಷ. ಜಯಲಲಿತಾ ಅವರಿಗೆ ಮಕ್ಕಳಿಲ್ಲದೆ ಇರುವುದರಿಂದ ಜೆ. ದೀಪಾ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದರು.

ನಿಜವೆಂದರೆ, ಅಂದು ಜಯಲಲಿತಾ ಅವರು ನಿಧನರಾದ ಬಳಿಕ ಜಯಲಲಿತಾ ಅವರ ಸೋದರನ ಮಕ್ಕಳು ಜಯಲಲಿತಾ ಅವರಿಗೆ ಸೇರಿದ ಚಿನ್ನಾಭರಣಗಳನ್ನು ತಮಗೇ ಹಸ್ತಾಂತರ ಮಾಡಬೇಕು ವಿಶೇಷ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಆದರೆ, ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯ 2023ರ ಜುಲೈ 12ರಂದು ಈ ಆರ್ಜಿಯನ್ನು ವಜಾ ಮಾಡಿತ್ತು.

ಈ ನಡುವೆ ವಿಶೇಷ ಕೋರ್ಟ್‌ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಸೂಚಿಸಿದೆ. ಈ ಹಂತದಲ್ಲಿ ಆಭರಣಗಳನ್ನು ತಮಗೆ ಹಸ್ತಾಂತರ ಮಾಡಲಾಗದು ಎಂಬ ಕೋರ್ಟ್‌ ಅಭಿಪ್ರಾಯದ ವಿರುದ್ಧ ಜೆ. ದೀಪಾ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಅದರ ವಿಚಾರಣೆ ಈಗ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠದಲ್ಲಿ ನಡೆದು ಹಸ್ತಾಂತರಕ್ಕೆ ತಡೆಯಾಜ್ಞೆ ನೀಡಲಾಗಿದೆ. ಜತೆಗೆ ಈ ಬಗ್ಗೆ ಸರ್ಕಾರದ ಅಭಿಪ್ರಾಯವನ್ನು ಕೋರಿದೆ.

ಜೆ. ದೀಪಾ ಅವರ ಪರ ವಕೀಲರು ಕೋರ್ಟ್‌ ಮುಂದೆ ಹೇಳಿದ್ಧೇನು?

  1. ಸುಪ್ರೀಂಕೋರ್ಟ್ ಈಗಾಗಲೇ ಜಯಲಲಿತಾರನನ್ನು ಈ ಪ್ರಕರಣದಲ್ಲಿ ದೋಷ ಮುಕ್ತರನ್ನಾಗಿಸಿದೆ.
  2. 2020ರಲ್ಲಿ ದೀಪಾರವರೇ ಜಯಲಲಿತಾರವರ ಕಾನೂನಾತ್ಮಕ ವಾರಸುದಾರರೆಂದು ಮದ್ರಾಸ್ ಹೈಕೋರ್ಟ್ ಘೋಷಿಸಿದೆ.
  3. ಆ ಹಿನ್ನೆಲೆಯಲ್ಲಿ, ಜಯಲಲಿತಾರಿಗೆ ಸೇರಿದ ಆಭರಣಗಳು ಹಾಗೂ ಸೀರೆಗಳು ದೀಪಾರವರಿಗೇ ಹಸ್ತಾಂತರವಾಗಬೇಕು.
Exit mobile version