Site icon Vistara News

OTT Platform | ಒಟಿಟಿ ಕಂಟೆಂಟ್‌ಗಳಿಗೆ ಸೆನ್ಸಾರ್‌ ಬೇಡ, ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Ott Platform

ಬೆಂಗಳೂರು: ಕೋವಿಡ್‌ ನಂತರದ ದಿನಮಾನದಲ್ಲಿ ಒಟಿಟಿಗಳು (OTT Platform) ಚಿತ್ರಮಂದಿರಕ್ಕೆ ಪೈಪೋಟಿ ನೀಡುತ್ತಿದೆ. ಇದರ ಬೆನ್ನಲ್ಲೆ ಒಟಿಟಿಯಲ್ಲಿ ಪ್ರಸಾರವಾಗುವ ಕಂಟೆಂಟ್‌ಗಳ ಮೇಲೆ ನಿಯಂತ್ರಣ ಹೇರಬೇಕು, ಸಿನಿಮಾಗೆ ಇದ್ದ ಹಾಗೆ ಇದಕ್ಕೂ ಸೆನ್ಸಾರ್‌ ಇರಬೇಕು ಎಂದು ವಾದಗಳು ಕೇಳಿ ಬರುತ್ತಿದ್ದವು. ಒಟಿಟಿಗೆ ಬಿಡುಗಡೆಯಾಗುವ ಮುನ್ನ ಸಿನಿಮಾ ಹಾಗೂ ಸಿರೀಸ್‌ಗಳನ್ನು ಸಮಿತಿಗೆ ತೋರಿಸಬೇಕು ಎಂದು‌ ಅಲಹಾಬಾದ್ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಹೈಕೋರ್ಟ್‌ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಈ ಕುರಿತಂತೆ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

ಕೊರೊನಾ ಸಂದರ್ಭದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರಬಲವಾಗಿ ಜನರನ್ನು ಸೆಳೆಯುವಂತೆ ಮಾಡಿತು. ಆ ನಂತರ ಒಟಿಟಿಗಳ ವೆಬ್‌ ಸರಣಿ (Web Series), ಸಿನಿಮಾಗಳಲ್ಲಿ ಅಶ್ಲೀಲತೆ, ಧಾರ್ಮಿಕ ವಿಷಯಗಳ ಚರ್ಚೆಗಳು ಹೆಚ್ಚಾದಾಗ ಕೂಗು ಹೆಚ್ಚಾಗಿತ್ತು. ಬಳಿಕ ಒಟಿಟಿಯಲ್ಲಿ ಪ್ರಸಾರವಾಗುವ ಕಂಟೆಂಟ್‌ಗಳು ಸೆನ್ಸಾರ್‌ಶಿಪ್‌ ಆಗಬೇಕು, ಒಟಿಟಿಯಲ್ಲಿ ಯಾವುದೇ ವೆಬ್‌ ಸರಣಿ ಹಾಗೂ ಸಿನಿಮಾಗಳು ಬಿಡುಗಡೆಯಾಗುವ ಮುನ್ನ ಕಮಿಟಿಗೆ ತೋರಿಸಬೇಕು ಎಂದು ಮಿರ್ಜಾಪುರದ ಸುಜೀತ್‌ ಕುಮಾರ್‌ ಸಿಂಗ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನೂ ಓದಿ | Vikrant Rona OTT | ಒಟಿಟಿ ಅಖಾಡದಲ್ಲಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಅಬ್ಬರ

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಒಟಿಟಿಯಲ್ಲಿ ಬಿಡುಗಡೆ ಆಗುವ ಕಂಟೆಂಟ್‌ಗಳನ್ನು ಮೊದಲಿಗೆ ಕಮಿಟಿಗೆ ತೋರಿಸುವುದು ಸೂಕ್ತವಲ್ಲ ಎಂದು ಹೇಳಿತು. ಅರ್ಜಿದಾರರು ಮನವಿ ಮಾಡಿದಂತೆ ʻಮಿರ್ಜಾಪುರ್-2ʼ ವೆಬ್‌ ಸರಣಿಯನ್ನು ಬ್ಯಾನ್‌ ಮಾಡಲು ಒಪ್ಪಿಗೆ ಸೂಚಿಸಿರಲಿಲ್ಲ. ಹೈಕೋರ್ಟ್‌ನ ಈ ತೀರ್ಪಿನ ವಿರುದ್ಧ ಸುಜೀತ್‌ ಕುಮಾರ್‌ ಸಿಂಗ್‌ ಸುಪ್ರೀಂ‌ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಆದರೆ ಮೇಲ್ಮನವಿ ಅರ್ಜಿಯನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್‌, ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

ಇದನ್ನೂ ಓದಿ | Gaalipata 2 | ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಗಾಳಿಪಟ-2 ಒಟಿಟಿಗೆ ಎಂಟ್ರಿ

Exit mobile version