ಒಟಿಟಿ
OTT Platform | ಒಟಿಟಿ ಕಂಟೆಂಟ್‌ಗಳಿಗೆ ಸೆನ್ಸಾರ್ ಬೇಡ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಒಟಿಟಿಯಲ್ಲಿ ಪ್ರಸಾರವಾಗುವ ಸಿನಿಮಾಗಳನ್ನು ಕಮಿಟಿಗೆ (Ott Platform ) ತೋರಿಸಬೇಕು ಎನ್ನುವ ವಿಚಾರ ಉತ್ತರ ಪ್ರದೇಶ ಹೈಕೋರ್ಟ್ ಮೆಟ್ಟಿಲೇರಿತ್ತು. ಈಗ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಬೆಂಗಳೂರು: ಕೋವಿಡ್ ನಂತರದ ದಿನಮಾನದಲ್ಲಿ ಒಟಿಟಿಗಳು (OTT Platform) ಚಿತ್ರಮಂದಿರಕ್ಕೆ ಪೈಪೋಟಿ ನೀಡುತ್ತಿದೆ. ಇದರ ಬೆನ್ನಲ್ಲೆ ಒಟಿಟಿಯಲ್ಲಿ ಪ್ರಸಾರವಾಗುವ ಕಂಟೆಂಟ್‌ಗಳ ಮೇಲೆ ನಿಯಂತ್ರಣ ಹೇರಬೇಕು, ಸಿನಿಮಾಗೆ ಇದ್ದ ಹಾಗೆ ಇದಕ್ಕೂ ಸೆನ್ಸಾರ್ ಇರಬೇಕು ಎಂದು ವಾದಗಳು ಕೇಳಿ ಬರುತ್ತಿದ್ದವು. ಒಟಿಟಿಗೆ ಬಿಡುಗಡೆಯಾಗುವ ಮುನ್ನ ಸಿನಿಮಾ ಹಾಗೂ ಸಿರೀಸ್‌ಗಳನ್ನು ಸಮಿತಿಗೆ ತೋರಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಹೈಕೋರ್ಟ್ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಈ ಕುರಿತಂತೆ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
ಕೊರೊನಾ ಸಂದರ್ಭದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರಬಲವಾಗಿ ಜನರನ್ನು ಸೆಳೆಯುವಂತೆ ಮಾಡಿತು. ಆ ನಂತರ ಒಟಿಟಿಗಳ ವೆಬ್ ಸರಣಿ (Web Series), ಸಿನಿಮಾಗಳಲ್ಲಿ ಅಶ್ಲೀಲತೆ, ಧಾರ್ಮಿಕ ವಿಷಯಗಳ ಚರ್ಚೆಗಳು ಹೆಚ್ಚಾದಾಗ ಕೂಗು ಹೆಚ್ಚಾಗಿತ್ತು. ಬಳಿಕ ಒಟಿಟಿಯಲ್ಲಿ ಪ್ರಸಾರವಾಗುವ ಕಂಟೆಂಟ್‌ಗಳು ಸೆನ್ಸಾರ್‌ಶಿಪ್ ಆಗಬೇಕು, ಒಟಿಟಿಯಲ್ಲಿ ಯಾವುದೇ ವೆಬ್ ಸರಣಿ ಹಾಗೂ ಸಿನಿಮಾಗಳು ಬಿಡುಗಡೆಯಾಗುವ ಮುನ್ನ ಕಮಿಟಿಗೆ ತೋರಿಸಬೇಕು ಎಂದು ಮಿರ್ಜಾಪುರದ ಸುಜೀತ್ ಕುಮಾರ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ | Vikrant Rona OTT | ಒಟಿಟಿ ಅಖಾಡದಲ್ಲಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಅಬ್ಬರ
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಒಟಿಟಿಯಲ್ಲಿ ಬಿಡುಗಡೆ ಆಗುವ ಕಂಟೆಂಟ್‌ಗಳನ್ನು ಮೊದಲಿಗೆ ಕಮಿಟಿಗೆ ತೋರಿಸುವುದು ಸೂಕ್ತವಲ್ಲ ಎಂದು ಹೇಳಿತು. ಅರ್ಜಿದಾರರು ಮನವಿ ಮಾಡಿದಂತೆ ʻಮಿರ್ಜಾಪುರ್-2ʼ ವೆಬ್ ಸರಣಿಯನ್ನು ಬ್ಯಾನ್ ಮಾಡಲು ಒಪ್ಪಿಗೆ ಸೂಚಿಸಿರಲಿಲ್ಲ. ಹೈಕೋರ್ಟ್‌ನ ಈ ತೀರ್ಪಿನ ವಿರುದ್ಧ ಸುಜೀತ್ ಕುಮಾರ್ ಸಿಂಗ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಆದರೆ ಮೇಲ್ಮನವಿ ಅರ್ಜಿಯನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
ಇದನ್ನೂ ಓದಿ | Gaalipata 2 | ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ-2 ಒಟಿಟಿಗೆ ಎಂಟ್ರಿ
ಒಟಿಟಿ
Pathaan Film: ಒಟಿಟಿಯಲ್ಲೂ ತೆರೆಕಾಣಲು ಸಜ್ಜಾಗಿದೆ ಪಠಾಣ್; ಅಮೇಜಾನ್ ಪ್ರೈಮ್ನಲ್ಲಿ ಈ ದಿನಾಂಕದಂದು ಬಿಡುಗಡೆ
ಪಠಾಣ್ ದೇಶಭಕ್ತಿ ಸಾರುವ ಸಿನಿಮಾ ಎಂದು ಶಾರುಖ್ಖಾನ್ ಹೇಳಿದ್ದರು. ಇದರಲ್ಲಿ ಶಾರುಖ್ ಖಾನ್ RAW (Research and Analysis Wing)ನ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರನ್ನು ಹತ್ತಿಕ್ಕುವ ಕಥೆ ಇದರಲ್ಲಿದ್ದು, ಜಾನ್ ಅಬ್ರಾಹಂ ಅವರು ಭಯೋತ್ಪಾದಕನ ಮುಖಂಡನ ಪಾತ್ರ ವಹಿಸಿದ್ದಾರೆ.
ಬೇಷರಮ್ ರಂಗ್ (ನಾಚಿಕೆ ಇಲ್ಲದ ಬಣ್ಣ) ಎಂಬ ಹಾಡಿನಿಂದಾಗಿ ಹಿಂದು ಸಂಘಟನೆಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿ, ಆ ವಿವಾದದ ಮಧ್ಯೆಯೇ ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಪಠಾಣ್ (Pathaan Film)ಈಗಾಗಲೇ ಬಾಹುಬಲಿ ಸಿನಿಮಾದ ಕಲೆಕ್ಷನ್ನ್ನೂ ಹಿಂದಿಕ್ಕಿ ಮುಂದೆ ಓಡಿದೆ. ಅತ್ಯಂತ ಹೆಚ್ಚಿನ ಗಳಿಕೆ ಕಂಡ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ. ಇನ್ನೂ ಕೆಲವು ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುತ್ತಿರುವ ಮಧ್ಯೆಯೇ, ಒಟಿಟಿಗೂ ಕಾಲಿಡುತ್ತಿದೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಅಭಿನಯದ ಈ ಬ್ಲಾಕ್ಬಸ್ಟರ್ ಸಿನಿಮಾ ಮಾರ್ಚ್ 22ರಿಂದ ಅಮೇಜಾನ್ ಪ್ರೈಮ್ನಲ್ಲಿ ಪ್ರದರ್ಶನ ಕಾಣಲಿದೆ. ಅಮೇಜಾನ್ ಪ್ರೈಮ್ನಲ್ಲಿ ನಾಳೆ (ಮಾ.22)ಯಿಂದ ನೀವು ಪಠಾಣ್ ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳನ್ನು ನೋಡಬಹುದು.
ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ತುಂಡುಡುಗೆ ಧರಿಸಿ ನೃತ್ಯ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಪಠಾಣ್ ಬಿಡುಗಡೆಗೇ ಅವಕಾಶ ಕೊಡುವುದಿಲ್ಲ ಎಂದು ಹಲವು ಹಿಂದು ಸಂಘಟನೆಗಳು ಕಿಡಿಕಾರಿದ್ದವು. ಅದೆಲ್ಲದರ ಮಧ್ಯೆ ಜ.25ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಇದೀಗ 50 ದಿನಗಳನ್ನು ಪೂರೈಸಿದೆ. ಇಲ್ಲಿಯವರೆಗೆ ಪಠಾಣ್ ಕಲೆಕ್ಷನ್ 1 ಸಾವಿರ ಕೋಟಿ ರೂಪಾಯಿ ಮೀರಿದೆ ಎಂದು ಹೇಳಲಾಗಿದೆ. ಯಶ್ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ಪ್ರಕಾರ ಪಠಾಣ್ ಗಳಿಕೆ 1048.30 ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಭಾರತದಲ್ಲಿ ಕಲೆಕ್ಷನ್ 656.20 ಕೋಟಿ ರೂ.ಆಗಿದೆ. ಹಾಗೇ, ವಿದೇಶಗಳಲ್ಲಿ ಗಳಿಕೆ 392.10 ಕೋಟಿ ರೂ.
ಪಠಾಣ್ ದೇಶಭಕ್ತಿ ಸಾರುವ ಸಿನಿಮಾ ಎಂದು ಶಾರುಖ್ಖಾನ್ ಹೇಳಿದ್ದರು. ಇದರಲ್ಲಿ ಶಾರುಖ್ ಖಾನ್ RAW (Research and Analysis Wing)ನ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರನ್ನು ಹತ್ತಿಕ್ಕುವ ಕಥೆ ಇದರಲ್ಲಿದ್ದು, ಜಾನ್ ಅಬ್ರಾಹಂ ಅವರು ಭಯೋತ್ಪಾದಕನ ಮುಖಂಡನ ಪಾತ್ರ ವಹಿಸಿದ್ದಾರೆ. ಪಠಾಣ್ ಬಿಡುಗಡೆಯಾಗುತ್ತಿದ್ದಂತೆ ಅತ್ಯಂತ ಯಶಸ್ವಿಯಾಗಿ ಓಡುತ್ತಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಶಾರುಖ್ ಖಾನ್ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದರು. ಅದರಲ್ಲು ಶಾರುಖ್ ಖಾನ್ಗಂತೂ ಅದೆಷ್ಟೋ ವರ್ಷಗಳ ನಂತರದ ಯಶಸ್ಸು ಇದು. ಟ್ವೀಟ್ ಮಾಡಿದ್ದ ಅವರು, ಕಠಿಣ ಪರಿಶ್ರಮ, ನಿಷ್ಠೆ ಮತ್ತು ನಂಬಿಕೆಗೆ ಸಿಕ್ಕ ಜಯ ಎಂದಿದ್ದರು.
ಒಟಿಟಿ
Kannada New Film: ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಒಟಿಟಿಗೆ ಎಂಟ್ರಿ
ಬಿಗ್ ಬಜೆಟ್, ಅದ್ಧೂರಿ ಮೇಕಿಂಗ್, ಇಶಾನ್ ಸ್ಟೈಲಿಶ್ ಅವತಾರ ಹೀಗೆ ಸಾಕಷ್ಟು ಕಾರಣಗಳಿಂದ ‘ರೇಮೊ’ (Kannada New Film) ನಿರೀಕ್ಷೆ ಹುಟ್ಟಿಸಿತ್ತು. ನವೆಂಬರ್ 25ರಂದು ರಾಜ್ಯಾದ್ಯಂತ ತೆರೆಕಂಡು ಉತ್ತಮ ವಿಮರ್ಶೆ ಪಡೆದುಕೊಂಡಿತ್ತು,
ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ ಇಶಾನ್ ಹಾಗೂ ಆಶಿಕಾ ರಂಗನಾಥ್ ನಟನೆಯ ‘ರೇಮೊ’ (Kannada New Film) ಸಿನಿಮಾ ಒಟಿಟಿ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ. ಬಿಗ್ ಬಜೆಟ್, ಅದ್ಧೂರಿ ಮೇಕಿಂಗ್, ಇಶಾನ್ ಸ್ಟೈಲಿಶ್ ಅವತಾರ ಹೀಗೆ ಸಾಕಷ್ಟು ಕಾರಣಗಳಿಂದ ‘ರೇಮೊ’ ನಿರೀಕ್ಷೆ ಹುಟ್ಟಿಸಿತ್ತು. ನವೆಂಬರ್ 25ರಂದು ರಾಜ್ಯಾದ್ಯಂತ ತೆರೆಕಂಡು ಉತ್ತಮ ವಿಮರ್ಶೆ ಪಡೆದುಕೊಂಡ ಸಿನಿಮಾ ಇದೀಗ ZEE5 ಮೂಲಕ ಒಟಿಟಿ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದೆ.
ಮಾರ್ಚ್ 10ರಂದು ‘ರೇಮೊ’ ಸಿನಿಮಾ ZEE5 ನಲ್ಲಿ ಬಿಡುಗಡೆಯಾಗುತ್ತಿದೆ. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಮತ್ತೊಂದು ಹಿಟ್ ಸಿನಿಮಾವನ್ನು ತನ್ನ ಪ್ರೇಕ್ಷಕರಿಗೆ ನೀಡುತ್ತಿದೆ ZEE5. ‘ವೇದ’ ಸಿನಿಮಾ ಬಿಡುಗಡೆಯಾಗಿ ಅತಿ ಕಡಿಮೆ ಅವಧಿಯಲ್ಲೇ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ವೀವ್ಸ್ ಪಡೆದುಕೊಂಡಿತ್ತು. ಆ ಖುಷಿಯನ್ನು ZEE5 ಸೆಲೆಬ್ರೆಟ್ ಕೂಡ ಮಾಡಿತ್ತು.
ಇದನ್ನೂ ಓದಿ: Chiranjeevi | ʻರೇಮೊʼ ನಟ ಇಶಾನ್‌ಗೆ ಮೆಗಾ ಸ್ಟಾರ್ ಚಿರಂಜೀವಿ ಸಾಥ್!
‘ರೇಮೊ’ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ಶರತ್ ಕುಮಾರ್, ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಮಧು ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಜಯಾದಿತ್ಯ ಬ್ಯಾನರ್ ನಡಿ ಸಿ. ಆರ್. ಮನೋಹ ಬಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸಿ. ಆರ್ ಗೋಪಿ ಸಹ ನಿರ್ಮಾಣವಿದೆ. ವೈದಿ ಕ್ಯಾಮೆರಾ ವರ್ಕ್, ಕೆ.ಎಂ. ಪ್ರಕಾಶ್ ಸಂಕಲನ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಒಟಿಟಿ
Avatar: The Way of Water: ಅವತಾರ್-2 ಒಟಿಟಿ ರಿಲೀಸ್ ಡೇಟ್ ಅನೌನ್ಸ್: ಇಲ್ಲಿದೆ ಮಾಹಿತಿ
ಡಿಜಿಟಲ್ ಬಿಡುಗಡೆಯೊಂದಿಗೆ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಆಗಮಿಸುತ್ತಿದೆ. ಈ ಬಗ್ಗೆ ಚಿತ್ರದ (Avatar: The Way of Water) ಅಧಿಕೃತ ಇನ್‌ಸ್ಟಾ ಖಾತೆಯಲ್ಲಿ ಒಟಿಟಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಚಿತ್ರತಂಡ.
ಬೆಂಗಳೂರು: ಜೇಮ್ಸ್ ಕ್ಯಾಮರೂನ್ ಅವರ ಅವತಾರ್ ದಿ ವೇ ಆಫ್ ವಾಟರ್ (Avatar: The Way of Water) ಕಳೆದ ವರ್ಷ ಡಿ.22ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಒಟಿಟಿ ಮೂಲಕ ʻಅವತಾರ್ 2ʼ ಚಿತ್ರ ಲಗ್ಗೆ ಇಡುತ್ತಿದೆ. ಡಿಜಿಟಲ್ ಬಿಡುಗಡೆಯೊಂದಿಗೆ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಆಗಮಿಸುತ್ತಿದೆ. ಈ ಬಗ್ಗೆ ಚಿತ್ರದ ಅಧಿಕೃತ ಇನ್‌ಸ್ಟಾ ಖಾತೆಯಲ್ಲಿ ಒಟಿಟಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಚಿತ್ರತಂಡ. ಇದೇ ಮಾರ್ಚ್ 28ರಂದು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ (Ott) ತೆರೆ ಕಾಣುತ್ತಿದೆ.
ಪ್ರೈಮ್ ವಿಡಿಯೊ, ವುಡು ಮತ್ತು ಮೂವೀಸ್ ಎನಿವೇರ್‌ನಲ್ಲಿ ಸಿನಿಮಾ ಲಭ್ಯವಿದೆ ಎಂದು ವರದಿಯಾಗಿದೆ. ಡಿಜಿಟಲ್ ಆವೃತ್ತಿಗಳು ಡಾಲ್ಬಿ ಅಟ್ಮಾಸ್ ಆಡಿಯೊದೊಂದಿಗೆ 4K ಅಲ್ಟ್ರಾ HD ಗುಣಮಟ್ಟದಲ್ಲಿ ಲಭ್ಯವಿರಲಿದೆ. ಜೇಮ್ಸ್ ಕ್ಯಾಮರೂನ್ ಅವರು ಸಿನಿಮಾ ಮಾಡುವ ಶೈಲಿಯೇ ಅಚ್ಚರಿ ಮೂಡಿಸುವಂಥದ್ದು. ತೆರೆ ಹಿಂದೆ ಅವರ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿರುತ್ತಾರೆ. ಒಟಿಟಿಯಲ್ಲಿ `ಅವತಾರ್ 2′ ಸಿನಿಮಾ ವೀಕ್ಷಿಸುವುದರ ಜತೆಗೆ ಮೇಕಿಂಗ್ ದೃಶ್ಯಗಳನ್ನೂ ಪ್ರೇಕ್ಷಕರು ನೋಡಬಹುದಾಗಿದೆ.
ಇದನ್ನೂ ಓದಿ: Avatar 3 | ಅವತಾರ್-2 ಸಕ್ಸೆಸ್ ಬೆನ್ನಲ್ಲೇ ಅವತಾರ್-3 ಸೀಕ್ವೆಲ್ ಮಾಡಲು ಮುಂದಾದ ಜೇಮ್ಸ್ ಕ್ಯಾಮರೂನ್!
ಅವತಾರ್-3 ಸೀಕ್ವೆಲ್
2022ರಲ್ಲಿ ತೆರೆ ಕಂಡ ಜೇಮ್ಸ್ ಕ್ಯಾಮರೂನ್ ಅವರ ʼಅವತಾರ್: ದಿ ವೇ ಆಫ್ ವಾಟರ್ʼ (Avatar: The Way of Water) ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡಿದೆ. ಇದರ ಬೆನ್ನಲ್ಲೇ ತಯಾರಕರು ಜನಪ್ರಿಯ ಫ್ರ್ಯಾಂಚೈಸ್‌ನಲ್ಲಿ ಅವತಾರ್-3 ಈಗಾಗಲೇ ಕೆಲಸ ಆರಂಭಗೊಂಡಿದೆ ಎಂದು ಖಚಿತಪಡಿಸಿದ್ದಾರೆ. ಅವತಾರ್ 2, 13 ವರ್ಷಗಳ ನಂತರ 2022ರಲ್ಲಿ ತೆರೆ ಕಂಡಿದೆ.ಈಗ, ಅವತಾರ್ 3 (Avatar 3) ಮತ್ತು 4 ರ ಕೆಲಸ ಈಗಾಗಲೇ ಪ್ರಾರಂಭವಾಗಿದೆ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ. ಅವತಾರ್-2 ಕಲೆಕ್ಷನ್ನಿಂದಾಗಿ ಚಿತ್ರತಂಡಕ್ಕೆ ಭರವಸೆ ಮೂಡಿದೆ. ಹಾಗಾಗಿ ‘ಅವತಾರ್’ ಸಿನಿಮಾದ 3, 4 ಮತ್ತು 5ನೇ ಸೀಕ್ವೆಲ್ಗಳನ್ನು ಮಾಡಲು ಜೇಮ್ಸ್ ಕ್ಯಾಮರೂನ್ ಮುಂದೆ ಬಂದಿದ್ದಾರೆ. ಜೇಮ್ಸ್ ಕ್ಯಾಮರೂನ್ ಅವರ ಅವತಾರ್-1, 2009ರಲ್ಲಿ ಬಿಡುಗಡೆಯಾಗಿತ್ತು. ಆಗಿನ ಕಾಲಕ್ಕೆ ₹20 ಸಾವಿರ ಕೋಟಿಗೂ ಹೆಚ್ಚು ಹಣ ಬಾಚಿತ್ತು. ಈ ಪೈಕಿ ಅವತಾರ್-3, 2024ರ ಡಿಸೆಂಬರ್ 20ರಂದು ರಿಲೀಸ್ ಆದರೆ, 2026ರ ಡಿಸೆಂಬರ್ 18ಕ್ಕೆ ಅವತಾರ್-4 ಹಾಗೂ 2028ರ ಡಿಸೆಂಬರ್ 22ರಂದು ಅವತಾರ್ ಪಾರ್ಟ್ 5 ರಿಲೀಸ್ ಆಗಲಿದೆ.
ಒಟಿಟಿ
Aditi Rao Hydari: ಸಿದ್ಧಾರ್ಥ್ ಜತೆಗಿನ ಸಂಬಂಧದ ವದಂತಿಗಳ ಬೆನ್ನಲ್ಲೇ ಅನಾರ್ಕಲಿಯಂತಹ ಪ್ರೀತಿ ಇನ್ನೂ ಇದೆ ಎಂದ ಅದಿತಿ ರಾವ್ ಹೈದರಿ!
ಸಿರೀಸ್‌ನಲ್ಲಿ ನಾಸಿರುದ್ದೀನ್ ಶಾ (Naseeruddin Shah) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ಸಿದ್ಧಾರ್ಥ್ (siddharth) ಜತೆಗಿನ ಸಂಬಂಧದ ವದಂತಿಗಳ ನಡುವೆ ಅದಿತಿ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು: `ತಾಜ್: ಡಿವೈಡೆಡ್ ಬೈ ಬ್ಲಡ್’ (Taj: Divided By Blood) ವೆಬ್ ಸಿರೀಸ್‌ನಲ್ಲಿ ಅನಾರ್ಕಲಿ ಪಾತ್ರದಲ್ಲಿ ಅದಿತಿ ರಾವ್ ಹೈದರಿ (Aditi Rao Hydari) ನಟಿಸಲು ಸಿದ್ಧರಾಗಿದ್ದಾರೆ. ಜೀ 5ನಲ್ಲಿ ಸಿರೀಸ್ ಮೊದಲ ಸೀಸನ್ ಮಾರ್ಚ್ 3, 2023 ರಂದು ಪ್ರೀಮಿಯರ್ ಆಗಲಿದೆ. ಸಿರೀಸ್‌ನಲ್ಲಿ ನಾಸಿರುದ್ದೀನ್ ಶಾ (Naseeruddin Shah) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ಸಿದ್ಧಾರ್ಥ್ (siddharth) ಜತೆಗಿನ ಸಂಬಂಧದ ವದಂತಿಗಳ ನಡುವೆ ಅದಿತಿ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಸಿರೀಸ್ ಕುರಿತು ಮಾತನಾಡಿದ ನಟಿ ʻಕಥೆಯ ಹೊಸ ದೃಷ್ಟಿಕೋನದ ಬಗ್ಗೆ ನಾನು ತುಂಬಾ ಉತ್ಸುಕನಾಗಿರುವೆʼʼ ಎಂದು ಮಾಧ್ಯಮದವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಅದಿತಿ ರಾವ್ ಹೇಳಿದ್ದೇನು?
‘ಅನಾರ್ಕಲಿ ದುರಂತ ನಾಯಕಿಯಾಗಿರಲಿಲ್ಲ’!
“ನಾವು (ಮೊಘಲರ) ಕಥೆಯೊಂದಿಗೆ ಹೆಚ್ಚು ಸಾಂಸ್ಕೃತಿಕವಾಗಿ ಸಂಪರ್ಕ ಹೊಂದಿದ್ದೇವೆ. ನಿರ್ದೇಶಕ ರೊನಾಲ್ಡ್ ಸ್ಕಾಲ್ಪೆಲೋ ಯಾವಾಗಲೂ ‘ಅನಾರ್ಕಲಿ ದುರಂತ ನಾಯಕಿ’ ಎಂದು ಹೇಳುತ್ತಿರುತ್ತಾರೆ. ಒಂದು ಹಂತದಲ್ಲಿ ನಾನು ಇಲ್ಲ ಎಂದಿದ್ದೆ. ಅವಳು ನಮಗೆ ದುರಂತ, ಆದರೆ ಅವಳಿಗೆ ಅವಳು ದುರಂತ ನಾಯಕಿ ಅಲ್ಲ. ಗೋಡೆಯೊಂದರಲ್ಲಿ ಬಂಧಿಯಾಗಿರುವಾಗ ತನ್ನ ಪ್ರೀತಿಗೆ ಬೆಂಬಲವಾಗಿ ನಿಂತಿರುವ ನಿರ್ಭೀತ ಹುಡುಗಿ ಅವಳು. ಎಂತಹ ಅದ್ಭುತ ಹುಡುಗಿ, ಮತ್ತು ಅದು ಎಂತಹ ಪ್ರೀತಿ ʼಎಂದರು.
ಇದನ್ನೂ ಓದಿ: Aditi Rao Hydari: ಅದಿತಿ ರಾವ್ ಹೈದರಿ, ಯಾರು ಗೊತ್ತಾ ಈ ನಟಿ?
‘ಅನಾರ್ಕಲಿಯಂತಹ ಪ್ರೀತಿ ಇನ್ನೂ ಇದೆ
ನಿಜ ಜೀವನದಲ್ಲಿ ಅಂತಹ ಪ್ರೀತಿ ಇದೆಯಾ ಎಂಬ ಪ್ರಶ್ನೆಗೆ ನಟಿ ಉತ್ತರಿಸಿ ʻʻಸಿನಿಮಾ ಎಲ್ಲಿಂದಲೋ ಬರುತ್ತದೆ. ಪ್ರೀತಿ (ಹಾಗೆ) ಇನ್ನೂ ಅಸ್ತಿತ್ವದಲ್ಲಿದೆ ಎಂದು ನಾನು ನಂಬುತ್ತೇನೆʼʼಎಂದರು. ನಟ ಸಿದ್ಧಾರ್ಥ್ ಜತೆಗಿನ ಸಂಬಂಧದ ವದಂತಿಗಳ ನಡುವೆ ಅದಿತಿ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಜೋಡಿ ಒಟ್ಟಿಗೆ ಡ್ಯಾನ್ಸ್ ಮಾಡಿರುವ ವಿಡಿಯೊ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ನಟಿ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Actor Siddharth | ಮುಂಬೈ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಸಿದ್ಧಾರ್ಥ್-ಅದಿತಿ ರಾವ್ ಹೈದರಿ: ಫೋಟೊ ವೈರಲ್
ಬಿಡುವಿನ ಸಮಯದಲ್ಲಿ ಒಟ್ಟಾಗಿ ಕಾಲ ಕಳೆದಿರುವ ಅದಿತಿ ರಾವ್ ಹೈದರಿ ಮತ್ತು ಸಿದ್ದಾರ್ಥ್ ಅವರು ‘ಟಮ್ ಟಮ್..’ ಹಾಡಿಗೆ ಹೆಜ್ಜೆ ಹಾಕಿದ್ದರು. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ʻಮಹಾ ಸಮುದ್ರಮ್ʼ ಚಿತ್ರದಲ್ಲಿ ಸಿದ್ಧಾರ್ಥ್ ಮತ್ತು ಅದಿತಿ ಒಟ್ಟಾಗಿ ಅಭಿನಯಿಸಿದ್ದರು. ಅಲ್ಲಿಂದ ಈ ಜೋಡಿ ಮಧ್ಯೆ ಆಪ್ತತೆ ಹೆಚ್ಚಾಗಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದರು. ಈ ಹಿಂದೆ ರಾಜಕುಮಾರ್ ರಾವ್ ಅವರ ಮದುವೆಯಲ್ಲಿ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್ ಹುಟ್ಟುಹಬ್ಬಕ್ಕೆ ಅತ್ಯಂತ ಪ್ರೀತಿಯಿಂದ ಹಾರೈಸಿದ್ದರು ಅದಿತಿ.
-
ದೇಶ18 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ18 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್8 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ19 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ19 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ9 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ10 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ12 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್