ಬೆಂಗಳೂರು: ಪೋಕ್ಸೋ ಕಾಯಿದೆ (POCSO Case) ಇರುವುದು ಅಪ್ರಾಪ್ತ ಹೆಣ್ಮಕ್ಕಗಳನ್ನು ಲೈಂಗಿಕ ದೌರ್ಜನ್ಯದಿಂದ (Sexual Harrassment) ರಕ್ಷಿಸಲು. ಹಾಗಂತ, ಪರಿಣಾಮ ಅರಿಯದೆ ಬೆಳೆಸಿದ ಲೈಂಗಿಕ ಸಂಬಂಧವನ್ನು (Sexual Relationship) ಅಪರಾಧ ಎಂದು ಪರಿಗಣಿಸಲಾಗದು ಎಂಬ ವಿಶಿಷ್ಟ ತೀರ್ಪನ್ನು ನೀಡಿದೆ ರಾಜ್ಯ ಹೈಕೋರ್ಟ್ (karnataka High court). ವಿಶೇಷ ಪ್ರಕರಣವೊಂದರಲ್ಲಿ ಈ ರೀತಿ ಹೇಳಿದ ಕೋರ್ಟ್ ಯುವಕನ ಮೇಲಿನ ಮೊಕದ್ದಮೆಯನ್ನು ರದ್ದುಗೊಳಿಸಿದೆ.
ಆಂಧ್ರ ಪ್ರದೇಶ ಮೂಲದ 20ರ ಹರೆಯದ ಯುವಕನೊಬ್ಬ 16 ಹರೆಯದ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅಪ್ರಾಪ್ತೆ ವರಿಸಿದ್ದಕ್ಕಾಗಿ ಯುವಕನ ವಿರುದ್ಧ ಐಪಿಸಿ ಸೆಕ್ಷನ್ 366(ಎ), 376(1) ಮತ್ತು ಪೋಕ್ಸೊ ಕಾಯಿದೆ 2012ರ ಸೆಕ್ಷನ್ 4 ಹಾಗೂ 6 ಮತ್ತು 2006ರ ಬಾಲ್ಯ ವಿವಾಹ (Child Marraiage) ಕಾಯಿದೆಯ 9ರ ಅಡಿಯಲ್ಲಿ ಹೊರಿಸಲಾದ ಆರೋಪಗಳನ್ನು ದಾಖಲಿಸಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಯುವಕ ಹೈಕೋರ್ಟ್ ಮೇಟ್ಟಿಲೇರಿದ್ದ. ಕೋರ್ಟ್ ಈಗ ಪರಿಸ್ಥಿತಿಯನ್ನು ಅವಲೋಕಿಸಿ ಅವನಿಗೆ ರಕ್ಷಣೆ ನೀಡಿದೆ. ಇಲ್ಲಿ ಬಾಲಕಿ ಮತ್ತು ಬಾಲಕಿಯ ತಾಯಿ ಇಬ್ಬರೂ ಕೂಡಾ ಜೀವನೋಪಾಯಕ್ಕಾಗಿ ಆತನ ಮೇಲೆ ಅವಲಂಬಿತರಾಗಿರುವುದನ್ನು ಪರಿಗಣಿಸಿದ ಕೋರ್ಟ್ ಇಂಥ ತೀರ್ಪನ್ನು ನೀಡಿದೆ. ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಇದನ್ನೂ ಓದಿ : POCSO Case : ಕುಂಟೆಬಿಲ್ಲೆ ಆಟವಾಡುತ್ತಿದ್ದ ಬಾಲಕಿಯನ್ನು ಎಳೆದೊಯ್ದು ರೇಪ್; ಕುಡುಕ ಯುವಕನ ಕೃತ್ಯ
ಕೋರ್ಟ್ ಪರಿಗಣಿಸಿದ ಅಂಶಗಳು ಯಾವುದು?
- ಕಾನೂನಿನ ಅರಿವಿಲ್ಲದೇ ಅರ್ಜಿದಾರ ಹಾಗೂ ಮಗಳ ಮದುವೆ ಅನೀರಿಕ್ಷಿತವಾಗಿ ನಡೆದಿದೆ. ಬಳಿಕ ಮಗಳು ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ವಿವಾಹಕ್ಕೆ ಕಾನೂನುಬದ್ಧ ವಯಸ್ಸು ತಲುಪಿದ ಕೂಡಲೇ ದಂಪತಿ ಕಾನೂನಿನ ಅಡಿಯಲ್ಲಿ ವಿವಾಹ ನೋಂದಾಯಿಸಿಕೊಳ್ಳುತ್ತಾರೆ ಎಂದು ಪೀಠದ ಮುಂದೆ ಅಪ್ರಾಪ್ತ ಬಾಲಕಿ ಹಾಗೂ ತಾಯಿ ಜಂಟಿಯಾಗಿ ಅಫಿಡವಿಟ್ ಸಲ್ಲಿಸಿದನ್ನು ನ್ಯಾಯಾಲಯ ಪರಿಗಣಿಸಿದೆ.
- ಹುಡುಗಿಯ ಪಾಲಕರು ಆರ್ಥಿಕವಾಗಿ ದುರ್ಬಲರಾಗಿದ್ದು, ತಾಯಿ ಹಾಗೂ ಮಗು ಜೀವನೋಪಾಯಕ್ಕಾಗಿ ಅರ್ಜಿದಾರರ ಮೇಲೆ ಅವಲಂಬಿತಾಗಿರುವುದನ್ನು ಗಮನಿಸಿದ್ದು, ಅರ್ಜಿದಾರರು ನ್ಯಾಯಾಂಗ ಬಂಧನದಲ್ಲಿದ್ದರೆ ಕುಟುಂಬ ಸಂಕಷ್ಟಕ್ಕೀಡಾಗುತ್ತದೆ. ಪತ್ನಿ ಹಾಗೂ ಮಗು ದುಃಖಮಯ ಬದುಕು ಸಾಗಿಸಬೇಕಾಗುತ್ತದೆ. ಇವುಗಳೆಲ್ಲವನ್ನು ಗಣನೆಗೆ ಪಡೆದುಕೊಂಡ ಪೀಠ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ.
ಪ್ರಕರಣದ ಬಗ್ಗೆ ಕೋರ್ಟ್ ಹೇಳಿದ್ದೇನು?
- ಪೋಕ್ಸೊ ಕಾಯಿದೆಯ ಉದ್ದೇಶವು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದು. ಪರಿಣಾಮ ಅರಿಯದೆ ಪರಸ್ಪರ ಸಮ್ಮತಿಯಿಂದ ಹರಿಹರೆಯದ ಇಬ್ಬರು ಲೈಂಗಿಕ ಸಂಭೋಗ ನಡೆಸುವುದು ಅಪರಾಧವಲ್ಲ ಎಂದು ಕೋರ್ಟ್ ಹೇಳಿದೆ.
- ಯುವಕ ಹಾಗೂ ಬಾಲಕಿ ಇಬ್ಬರೂ ಸಮಾಜದ ಆರ್ಥಿಕ ಹಿಂದುಳಿದ ವರ್ಗದಿಂದ ಬಂದವರು. ಹೀಗಾಗಿ ಪ್ರಕರಣ ಸಂಬಂಧ ಪರಿಣಾಮಗಳ ಕುರಿತು ಮಾಹಿತಿಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಶಿಕ್ಷೆ ನೀಡಬೇಕಾಗಿಲ್ಲ.
- ಅಪ್ರಾಪ್ತ ವಯಸ್ಕರೊಂದಿಗೆ ಸಮ್ಮತಿಯಿಂದ ಲೈಂಗಿಕ ಸಂಭೋಗವು ನಡೆಸುವುದು ಪೋಕ್ಸೊ ಕಾಯಿದೆ ಅಡಿ ಅಪರಾಧವಾಗಿದ್ದರೂ ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನು ಪರಿಗಣಿಸಿ ದೋಷಾರೋಪಾ ಪ್ರಕ್ರಿಯೆ ರದ್ದುಗೊಳಿಸಲಾಗುತ್ತಿದೆ. ಇಲ್ಲವಾದಲ್ಲಿ ಬಾಲಕಿ ಮತ್ತು ಮಗು ನ್ಯಾಯವೈಫಲ್ಯತೆ ಎದುರಿಸಬೇಕಾಗಬಹುದು.