ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಗೆ “ಅತ್ಯಾಚಾರದ ರಾಜಧಾನಿ” ಎಂಬ ಕುಖ್ಯಾತಿ ಇದೆ. ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವುದು ದೆಹಲಿಯಲ್ಲಿ ಸಾಮಾನ್ಯ ಎಂಬಂತೆ ಆಗಾಗ ಪ್ರಕರಣಗಳು ದೇಶಾದ್ಯಂತ ಸುದ್ದಿಯಾಗಿದೆ. ಇಂತಹ ಕುಖ್ಯಾತಿಯ ರಾಜಧಾನಿಯಲ್ಲೀಗ ಹುಡುಗರೂ ಸುರಕ್ಷಿತವಲ್ಲ ಎಂಬಂತಾಗಿದೆ. ೧೨ ವರ್ಷದ ಬಾಲಕನ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದು, ಹತ್ಯೆ ಮಾಡಿರುವ ಪ್ರಕರಣವೇ ಈ ಮಾತಿಗೆ ನಿದರ್ಶನವಾಗಿದೆ.
12 ವರ್ಷದ ಬಾಲಕನನ್ನು ಅತ್ಯಾಚಾರಗೈದು, ದೊಣ್ಣೆಗಳಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ದೆಹಲಿ ಮಹಿಳಾ ಆಯೋಗ (DCW)ದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಟ್ವೀಟ್ ಮಾಡಿದ್ದು, “ದೆಹಲಿಯಲ್ಲಿ ಹುಡುಗರೂ ಸುರಕ್ಷಿತವಾಗಿಲ್ಲ” ಎಂದಿದ್ದಾರೆ. ಹಾಗೆಯೇ, ಪ್ರಕರಣದ ಕುರಿತು ಆಯೋಗವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ | ದಲಿತ ಬಾಲಕಿಯರನ್ನು ಅತ್ಯಾಚಾರ ಮಾಡಿ ಕೊಂದು, ಮರಕ್ಕೆ ನೇತು ಹಾಕಿದ ಮುಸ್ಲಿಂ ಯುವಕರು