ಲಖನೌ: ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಜತೆ ಸ್ನೇಹ ಬೆಳೆಸಿ, ಸ್ನೇಹ ಪ್ರೀತಿಗೆ ತಿರುಗಿ, ಕೊನೆಗೆ ಮೋಸ ಹೋದ ಯುವತಿಯರ ಸಂಖ್ಯೆ ಹೆಚ್ಚಿದೆ. ಹೀಗಿದ್ದರೂ, ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ಮೋಸದ ಜಾಲಕ್ಕೆ ಸಿಲುಕುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ 16 ವರ್ಷದ ಬಾಲಕಿಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನನ್ನು ಭೇಟಿಯಾಗಲು ಹೋಗಿ (UP Hookah Bar Case) ಅತ್ಯಾಚಾರಕ್ಕೀಡಾಗಿದ್ದಾಳೆ.
ಉತ್ತರ ಪ್ರದೇಶದ ಕಾನ್ಪುರದ ಬಾಲಕಿಗೆ ಇನ್‌ಸ್ಟಾಗ್ರಾಂನಲ್ಲಿ ಕಾನ್ಪುರದವನೇ ಆದ ವಿನಯ್ ಠಾಕೂರ್ ಎಂಬಾತ ಪರಿಚಯವಾಗಿದ್ದಾನೆ. ಮಾರ್ಚ್ 4ರಂದು ಭೇಟಿಯಾಗೋಣ ಎಂದು ಕರ‍್ರಾಹಿಯಲ್ಲಿರುವ ಎಂ.ಜಿ. ಕೆಫೆಗೆ ಕರೆದಿದ್ದಾನೆ. ಹುಕ್ಕಾ ಬಾರ್‌ಗೆ ಹೋದ ಬಾಲಕಿ ಕುಡಿದ ಪಾನೀಯದಲ್ಲಿ ಮತ್ತು ಬರುವ ಅಂಶ ಬೆರೆಸಿದ್ದಾರೆ. ಬಳಿಕ ಹುಕ್ಕಾ ಬಾರ್‌ನಲ್ಲಿಯೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕಿಯು ವೈದ್ಯ ದಂಪತಿಯ ಪುತ್ರಿಯಾಗಿದ್ದು, ಬಾಲಕಿಯ ತಂದೆಯು ವಿನಯ್ ಠಾಕೂರ್ ಸೇರಿ ಎಂಟು ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ವಿನಯ್ ಠಾಕೂರ್‌ನನ್ನು ಬಂಧಿಸಿದ್ದಾರೆ. ಬಾಲಕಿಯ ಅಶ್ಲೀಲ ವಿಡಿಯೊ ಚಿತ್ರೀಕರಿಸಿದ ವಿನಯ್ ಠಾಕೂರ್, ಅದನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಕೆಲ ದಿನಗಳಿಂದ ಬಾಲಕಿಗೆ ಬೆದರಿಕೆಯೊಡ್ಡಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Sexual Assault: ವಿಜಯಪುರದಲ್ಲಿ ಹೇಯ ಕೃತ್ಯ, ವೃದ್ಧೆಯ ಮೇಲೆ ಇಬ್ಬರಿಂದ ಅತ್ಯಾಚಾರ