ಭೋಪಾಲ್: ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಎಷ್ಟೇ ಕಠಿಣ ಕ್ರಮ ತೆಗೆದುಕೊಂಡರೂ, ಶಿಕ್ಷೆ ವಿಧಿಸಿದರೂ ಕಾಮಪಿಶಾಚಿಗಳು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವುದು ನಿಂತಿಲ್ಲ. ಹಾಗಾಗಿಯೇ, ಭಾರತದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಲ್ಲ ಎಂಬ ಕುಖ್ಯಾತಿ ಇದೆ. ಆದರೆ, ಮಧ್ಯಪ್ರದೇಶದಲ್ಲಿ ಕಾಮಾಂಧರಿಬ್ಬರು ಮೇಕೆಯ ಮೇಲೆಯೇ ಅತ್ಯಾಚಾರ ಎಸಗಿದ್ದು, ಈಗ ಪ್ರಾಣಿಗಳಿಗೂ ಕಾಮಪಿಶಾಚಿಗಳಿಂದ ರಕ್ಷಣೆ ಇಲ್ಲ ಎಂಬಂತಾಗಿದೆ.
ಮಧ್ಯಪ್ರದೇಶದ ಸೆಹೋರ್ ಜಿಲ್ಲೆ ಭೆರುಂಡ ಪ್ರದೇಶದಲ್ಲಿ ಇಬ್ಬರು ದುರುಳರು ಮೇಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮೇಕೆ ಮೇಲೆ ಗ್ಯಾಂಗ್‌ರೇಪ್ ಮಾಡುತ್ತಿರುವುದನ್ನು ಕಂಡ ಮೇಕೆಯ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಬಂಧಿತನನ್ನು ಗೆಂಡಾಲಾಲ್ ಎಂದು ಗುರುತಿಸಲಾಗಿದೆ.
“ಮೇಕೆಯ ಮಾಲೀಕ ರೋಹಿತ್ ಕೆವಾತ್ ಎಂಬುವವರು ಶನಿವಾರ ಸಂಜೆ ಮೇಕೆಗಳನ್ನು ಮೇಯಿಸಲು ಹೋಗಿದ್ದಾರೆ. ಇದೇ ವೇಳೆ ಒಂದು ಮೇಕೆ ಕಾಣೆಯಾಗಿರುವುದನ್ನು ಅವರು ಗಮನಿಸಿದ್ದಾರೆ. ಇದೇ ವೇಳೆ ಮೇಕೆಯೊಂದು ಕಿರುಚಾಡುತ್ತಿರುವುದನ್ನು ನೋಡಿ ಪರಿಶೀಲಿಸಿದಾಗ ಇಬ್ಬರು ಕಾಮಾಂಧರು ಮೇಕೆಯ ಮೇಲೆ ಅತ್ಯಾಚಾರ ಎಸಗುತ್ತರುವುದನ್ನು ನೋಡಿದ್ದಾರೆ. ಬಳಿಕ ಈ ಕುರಿತು ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಬಲೆ ಬೀಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಕರ್ನಾಟಕದಲ್ಲೂ ಇಂತಹ ಪ್ರಕರಣ ನಡೆದಿತ್ತು. ಕೊಟ್ಟಿಗೆಯಲ್ಲಿ ಮಲಗಿದ್ದ ಆಕಳ ಕರುವಿನ ಮೇಲೆಯೇ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಅತ್ಯಂತ ಅಮಾನುಷ, ಅಮಾನವೀಯ ಘಟನೆ ನಡೆದಿತ್ತು. ಇಮ್ತಿಯಾಜ್ ಎಂಬಾತ ಒಂದು ಆಕಳ ಕರುವನ್ನು ನೆಲಕ್ಕೆ ಕೆಡವಿ ಅದರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ಕಂಡುಬಂದಿತ್ತು. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲೇ ಅದರ ಕೈ ಕಾಲುಗಳನ್ನೂ ಕಟ್ಟಿ ಹಾಕಿ ದೌರ್ಜನ್ಯ ನಡೆಸುತ್ತಿರುವುದು ಸುದ್ದಿಯಾಗಿತ್ತು.