Site icon Vistara News

Mob Lynching | ಕಳ್ಳನೆಂದು ಶಂಕಿಸಿ ರಾಜಸ್ಥಾನದಲ್ಲಿ ವ್ಯಕ್ತಿಯ ಹತ್ಯೆಗೈದ 25 ಜನ

Chiranji Lal Saini

ಜೈಪುರ: ರಾಜಸ್ಥಾನದ ಅಲ್ವರ್‌ ಜಿಲ್ಲೆಯಲ್ಲಿ ಕಳ್ಳ ಎಂದು ಶಂಕಿಸಿ ೫೦ ವರ್ಷದ ಹಿಂದೂ ವ್ಯಕ್ತಿಯೊಬ್ಬರ ಮೇಲೆ ಮುಸ್ಲಿಮರು ದಾಳಿ ನಡೆಸಿ (Mob Lynching) ಹತ್ಯೆಗೈದಿದ್ದಾರೆ. ರಾಮ್‌ಬಸ್‌ ಎಂಬ ಗ್ರಾಮದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಚಿರಣ್‌ಜಿ ಲಾಲ್‌ ಸೈನಿ ಎಂಬುವವರು ಕಳ್ಳ ಎಂದು ಶಂಕಿಸಿದ ೨೦-೨೫ ಮುಸ್ಲಿಮರು ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಚಿರಣ್‌ಜಿ ಲಾಲ್‌ ಸೈನಿಯು ಜಮೀನಿನಲ್ಲಿ ನಿಂತಿದ್ದಾಗ ಸಿನಿಮೀಯ ರೀತಿಯ ಘಟನೆ ನಡೆದಿದೆ. ಟ್ರ್ಯಾಕ್ಟರ್‌ ಒಂದನ್ನು ಕದ್ದಿದ್ದ ಕಳ್ಳರನ್ನು ಪೊಲೀಸರು ಹಾಗೂ ಟ್ರ್ಯಾಕ್ಟರ್‌ ಮಾಲೀಕ ಹಿಂಬಾಲಿಸುತ್ತಿದ್ದರು. ಇನ್ನೇನು, ಪೊಲೀಸರು ಹಿಡಿದೇಬಿಡುತ್ತಾರೆ ಎನ್ನುವಾಗ ಟ್ರ್ಯಾಕ್ಟರ್‌ಅನ್ನು ಜಮೀನಿನಲ್ಲಿಯೇ ಬಿಟ್ಟು ಕಳ್ಳರು ಓಡಿ ಹೋಗಿದ್ದಾರೆ. ಆಗ ಸ್ಥಳದಲ್ಲಿದ್ದ ಸೈನಿಯೇ ಕಳ್ಳ ಎಂದು ಭಾವಿಸಿದ ಹತ್ತಾರು ಜನ ಸಾಮೂಹಿಕವಾಗಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

ಜನ ಹಲ್ಲೆ ನಡೆಸುತ್ತಿರುವಾಗ ಪೊಲೀಸರು ಸ್ಥಳಕ್ಕೆ ಬಂದು ಗುಂಪನ್ನು ಚದುರಿಸಿ, ಸೈನಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ವ್ಯಕ್ತಿ ಮೃತಪಟ್ಟರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಜುಮ್ಮಾ ಖಾನ್‌, ವಿಕ್ರಮ್‌ ಖಾನ್‌ ಸೇರಿ ಹಲವರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ | ಚಿನ್ನಾಭರಣಕ್ಕಾಗಿ ಉಸಿರುಗಟ್ಟಿಸಿ ವೃದ್ಧೆ ಹತ್ಯೆ: ಕೊಲೆ ಮಾಡುತ್ತಾರೆಂದು ಮೊದಲೇ ಹೇಳಿದ್ದರೂ ನಿರ್ಲಕ್ಷ್ಯ?

Exit mobile version