Site icon Vistara News

Stray Dogs: 4 ವರ್ಷದ ಬಾಲಕನನ್ನು ರಸ್ತೆ ಮಧ್ಯೆ ಎಳೆದಾಡಿ ಕಚ್ಚಿ ಕೊಂದ ಬೀದಿ ನಾಯಿಗಳು; ಭಯಾನಕ ವಿಡಿಯೊ ವೈರಲ್​

12 year old boy Killed By stray dogs In Bareilly

#image_title

ಹೈದರಾಬಾದ್: ನಾಲ್ಕು ವರ್ಷದ ಬಾಲಕನೊಬ್ಬನನ್ನು ಬೀದಿನಾಯಿಗಳು ಹಿಡಿದು, ಎಳೆದಾಡಿ ಕಚ್ಚಿ ಕೊಂದುಹಾಕಿದ್ದಾರೆ. ಹೈದರಾಬಾದ್​ನಲ್ಲಿ ನಡೆದ ಈ ಘಟನೆಯ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಅದನ್ನು ನೋಡಲು ಸಾಧ್ಯವಿಲ್ಲದಷ್ಟು ಭೀಕರವಾಗಿದೆ. ಬೀದಿ ನಾಯಿಗಳ (Stray Dogs) ದಾಳಿಯಿಂದ ಬಾಲಕನ ಹೊಟ್ಟೆಗೆ ತೀವ್ರವಾಗಿ ಗಾಯವಾಗಿತ್ತು. ಶ್ವಾನಗಳು ಅವನ ಹೊಟ್ಟೆಯನ್ನು ಬಗೆದುಬಿಟ್ಟಿದ್ದವು. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಿಸಲಿಲ್ಲ.

ಪುಟಾಣಿ ಬಾಲಕ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಅಲ್ಲಿಗೆ ಬಂದ ಮೂರು ಬೀದಿ ನಾಯಿಗಳು ಅವನನ್ನು ಸುತ್ತುವರಿದಿವೆ. ಆಗ ಹುಡುಗ ಹೆದರಿ, ಅಲ್ಲಿಂದ ಓಡಲು ಯತ್ನಿಸಿದ್ದಾನೆ. ಆದರೆ ಮೂರು ನಾಯಿಗಳು ಏಕಕಾಲಕ್ಕೆ ದಾಳಿ ಮಾಡಿ, ಆತನನ್ನು ಹಿಡಿದು, ಎಳೆದಾಡಿ ಗಾಯಗೊಳಿಸಿದ್ದನ್ನು ವಿಡಿಯೊದಲ್ಲಿ ನೋಡಬಹುದು. ಆತ ಕೆಳಗೆ ಬಿದ್ದು ನರಳಾಡಿದ್ದಾನೆ. ಈ ಬಾಲಕನ ತಂದೆ ಅಪಾರ್ಟ್​​ಮೆಂಟ್​​ವೊಂದರಲ್ಲಿ ವಾಚ್​ಮೆನ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲೇ ಸಮೀಪದಲ್ಲೇ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀದಿನಾಯಿಗಳಿಂದ ಮಕ್ಕಳ ಸಾವಾಗುತ್ತಿರುವುದು ಇದೇ ಮೊದಲೇನೂ ಖಂಡಿತ ಅಲ್ಲ. ಹಿಂದೆಯೂ ಹಲವು ಘಟನೆಗಳು ನಡೆದಿವೆ. ಶನಿವಾರ ಉತ್ತರ ಪ್ರದೇಶದ ಸಹರಾನ್​ಪುರ ಜಿಲ್ಲೆಯಲ್ಲಿ ಏಳುವರ್ಷದ ಬಾಲಕನೊಬ್ಬ ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದ. ಈ ಹುಡುಗನ ಹೆಸರು ಖನ್ನಾ ಎಂದಾಗಿದ್ದು, ಬಿಲಾಸ್​ಪುರದಲ್ಲಿರುವ ತನ್ನ ಮನೆಯ ಹಿಂಭಾಗದಲ್ಲಿ ಆಟವಾಡುತ್ತಿದ್ದಾಗಲೇ ಘಟನೆ ನಡೆದಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ಮೃತಪಟ್ಟಿದ್ದ. ಗುಜರಾತ್​​ನ ಸೂರತ್​​ನಲ್ಲೂ ಕೂಡ 4 ವರ್ಷದ ಬಾಲಕನೊಬ್ಬ ಬೀದಿ ನಾಯಿಗಳಿಗೆ ಬಲಿಯಾಗಿದ್ದ.

Exit mobile version