Site icon Vistara News

4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?

Uttar Pradesh News

40-Year-Old Father Arrested For Raping 2 Minor Daughters In Uttar Pradesh

ಲಖನೌ: ರಾತ್ರಿ ಬಿಡಿ, ಸಂಜೆಯಾದರೂ ಸಾಕು, ಮನೆಯ ಹೆಣ್ಣುಮಕ್ಕಳನ್ನು ಹೊರಗೆ ಕಳುಹಿಸಲು ತಂದೆ-ತಾಯಿ ಹಿಂಜರಿಯುತ್ತಾರೆ. ದಿನ ಬೆಳಗಾದರೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಂಬಂತಹ ಸುದ್ದಿಗಳನ್ನು ಓದಿ, ಪ್ರಕರಣಗಳನ್ನು ಕೇಳಿ ಜನರಲ್ಲಿ ಭೀತಿ ಇದೆ. ಆದರೆ, ದೇಶದಲ್ಲಿ ಮನೆಯಲ್ಲೂ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ ಎಂದಾದರೆ? ಹೌದು, ಉತ್ತರ ಪ್ರದೇಶದಲ್ಲಿ (Uttar Pradesh) ಪಾಪಿ ತಂದೆಯು ತನ್ನ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ (Physical Abuse) ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ನಾಲ್ಕು ವರ್ಷದಿಂದ ಇಬ್ಬರು ಪುತ್ರಿಯರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಾಜಿಯಾಬಾದ್‌ ನಿವಾಸಿಯಾದ ದುರುಳನು ಮನೆಯಲ್ಲಿ 17 ವರ್ಷದ ಹಾಗೂ 15 ವರ್ಷದ ಮಕ್ಕಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ತಂದೆಯ ವಿಕೃತ ಕೃತ್ಯದ ಕುರಿತು ಬಾಲಕಿಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Crime News

ಪ್ರಕರಣ ಬಯಲಾಗಿದ್ದು ಹೇಗೆ?

ನಿರಂತರವಾಗಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ದುರುಳನು, ಇಬ್ಬರನ್ನೂ ಹೆದರಿಸಿದ್ದಾನೆ. ಈ ವಿಷಯದ ಕುರಿತು ಯಾರಿಗಾದರೂ ತಿಳಿಸಿದರೆ ಇಬ್ಬರನ್ನೂ ಕೊಂದು ಹಾಕುತ್ತೇನೆ ಎಂದು ಹೆದರಿಸಿದ್ದಾನೆ. ಇದರಿಂದಾಗಿ ಯಾರಿಗೂ ಹೇಳದ ಬಾಲಕಿಯರು, ಬೇರೆ ಯಾರ ಜತೆಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಶಾಲೆಗೆ ಹೋದರೂ ಗೆಳತಿಯರ ಜತೆ ಬೆರೆಯುತ್ತಿರಲಿಲ್ಲ. ತಮ್ಮದೇ ಚಿಂತೆಯಲ್ಲಿ ಇಬ್ಬರೂ ಮುಳುಗಿರುತ್ತಿದ್ದರು. ಇದನ್ನು ಕಂಡ ಶಿಕ್ಷಕಿಯೊಬ್ಬರು ಇಬ್ಬರ ಜತೆ ಮಾತನಾಡಿದಾಗ ಪ್ರಕರಣ ಬಯಲಾಗಿದೆ.

ಇದನ್ನೂ ಓದಿ: Physical abuse : 12 ವರ್ಷದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಪಾಪಿ ತಂದೆ

ಇಬ್ಬರೂ ಹೆಣ್ಣುಮಕ್ಕಳನ್ನು ಪಾರ್ಕ್‌ಗೆ ಕರೆದುಕೊಂಡು ಹೋದ ಶಿಕ್ಷಕಿಯು, ಅವರಿಗೆ ಆದ ಅನ್ಯಾಯದ ಕುರಿತು ತಿಳಿದುಕೊಂಡಿದ್ದಾರೆ. ನಿಮಗೇನೂ ಆಗುವುದಿಲ್ಲ, ನಾನಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ. ಬಳಿಕ ಬಾಲಕಿಯರು ಪೊಲೀಸ್‌ ಠಾಣೆಗೆ ತೆರಳಿ ತಂದೆ ವಿರುದ್ಧ ದೂರು ನೀಡಿದ್ದಾರೆ. ಬಳಿಕ ಪೊಲೀಸರು ವಿಕೃತ ಕಾಮಿಯನ್ನು ಬಂಧಿಸಿದ್ದಾರೆ. ಕೆಲ ವರ್ಷಗಳಿಂದ ಕೆಲಸ ಮಾಡದೆ ಮನೆಯಲ್ಲಿಯೇ ಬಿದ್ದಿರುವ ವ್ಯಕ್ತಿಯು ಪುತ್ರಿಯರ ಮೇಲೆ ಅತ್ಯಾಚಾರ ಎಸಗಿರುವ ಕುರಿತು ಹೆಣ್ಣುಮಕ್ಕಳ ತಾಯಿಗೆ ಗೊತ್ತೇ ಇಲ್ಲ. ತಾಯಿಯು ನಿತ್ಯ ಕೆಲಸಕ್ಕೆ ಹೋಗುವ ಕಾರಣ ಮನೆಯಲ್ಲಿ ನಡೆಯುವ ಅನಾಚಾರದ ಬಗ್ಗೆ ಗೊತ್ತಿರಲಿಲ್ಲ ಎಂದು ತಿಳಿದುಬಂದಿದೆ.

Exit mobile version