ತಿರುವನಂತಪುರಂ: ಚಲಿಸುವ ರೈಲುಗಳಲ್ಲಿಯೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆ, ದರೋಡೆಯಂತಹ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ಕೇರಳದಲ್ಲಿ (Kerala) ಚಲಿಸುತ್ತಿರುವ ರೈಲಿನಲ್ಲಿಯೇ 46 ವರ್ಷದ ವ್ಯಕ್ತಿಯೊಬ್ಬ 26 ವರ್ಷದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ (Sexual Harassment) ನೀಡಿದ್ದಾನೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಹಿಳೆಯು ಭಾನುವಾರ ಬೆಳಗಿನ (ಜನವರಿ 14) ಜಾವ ಅಮೃತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ರೈಲು ಕೊಟ್ಟಾಯಂ ದಾಟಿದೆ. ಆಗ ರೈಲಿನಲ್ಲಿದ್ದ 46 ವರ್ಷದ ವ್ಯಕ್ತಿಯು ಮಹಿಳೆಯೊಂದಿಗೆ ಮಾತನಾಡಲು ಆರಂಭಿಸಿದ್ದಾನೆ. ಆದರೆ, ಮಹಿಳೆಯು ಈತನ ಮಾತಿಗೆ ಕಿವಿಗೊಟ್ಟಿಲ್ಲ. ಇದಾದ ನಂತರ ಕುಪಿತಗೊಂಡ ವ್ಯಕ್ತಿಯು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದವನೇ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾಯಂಕುಲಂ ರೈಲು ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಅಳುವದಿಂದ ವರ್ಕಾಲಕ್ಕೆ ಮಹಿಳೆಯು ಒಬ್ಬರೇ ತೆರಳುತ್ತಿದ್ದರು. ಕಲ್ಲಿಕೋಟೆಯ ವ್ಯಕ್ತಿಯು ಎರ್ನಾಕುಲಂದಿಂದ ತಿರುವಲ್ಲಕ್ಕೆ ತೆರಳುತ್ತಿದ್ದ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಮಹಿಳೆಯು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ದೂರು ನೀಡುತ್ತಲೇ ಕೊಟ್ಟಾಯಂ ರೈಲ್ವೆ ಪೊಲೀಸರು ಕ್ಷಿಪ್ರವಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Adult Films: ಉದ್ಯಮದಲ್ಲಿ ಲೈಂಗಿಕ ದೌರ್ಜನ್ಯ: ದೂರಿದ ಪೋರ್ನ್ ತಾರೆ ತಿಂಗಳಲ್ಲಿ ಶವವಾಗಿ ಪತ್ತೆ
ಮೊದಲು ವ್ಯಕ್ತಿಯು ಮಾತನಾಡಲು ಮುಂದಾದ. ಇದೇ ವೇಳೆ ಆತನ ಮಾತಿಗೆ ನಾನು ಕಿವಿಗೊಡಲಿಲ್ಲ. ಇದರಿಂದ ಕೋಪಗೊಂಡ ಆತನು ನನ್ನ ಮುಟ್ಟಿದ. ಅಲ್ಲದೆ, ಅಸಭ್ಯವಾಗಿ ನನ್ನೊಂದಿಗೆ ವರ್ತಿಸಿದ ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೆಲ ವಾರಗಳ ಹಿಂದಷ್ಟೇ ಕೇರಳದಿಂದ ಗೋವಾಕ್ಕೆ ಹೊರಟಿದ್ದ ರೈಲಿನಲ್ಲಿ ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮುಖದ ಮೇಲೆ ಹಸ್ತಮೈಥುನ ಮಾಡುವ ಪ್ರಯತ್ನ ಮಾಡಿದ್ದು ಭಾರಿ ಸುದ್ದಿಯಾಗಿತ್ತು. ಕರ್ನಾಟಕದ ಗೋಕರ್ಣ ಸಮೀಪ ರೈಲು ಬರುತ್ತಿದ್ದಂತೆ ಆರೋಪಿ, ಮಲಗಿದ್ದ ಮಹಿಳೆಯ ಮುಖದ ಮುಂದೆ ಹಸ್ತಮೈಥುನ ಮಾಡಲು ಆರಂಭಿಸಿದ್ದ ಆ ಮಹಿಳೆಯ ಜತೆಗೆ ಬಂದಿದ್ದ ಇಬ್ಬರು ಸ್ನೇಹಿತರು ಇದನ್ನು ಗಮನಿಸಿ ಕೂಡಲೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ