Site icon Vistara News

Rape In Bhopal | ಕೈತುತ್ತು ಕೊಟ್ಟ 78 ವರ್ಷದ ಭಿಕ್ಷುಕಿ ಮೇಲೆಯೇ ಅತ್ಯಾಚಾರ ಎಸಗಿದ ದುರುಳ!

16-year-Old Girl Raped By Instagram Friend In Kanpur's Hookah Bar

UP Hookah Bar Case

ಭೋಪಾಲ್:‌ ದೇಶದಲ್ಲಿ ನಡೆಯುವ ಕೆಲವೊಂದು ಕೃತ್ಯಗಳನ್ನು ನೋಡಿದರೆ ಸಮಾಜದಲ್ಲಿ ಮೌಲ್ಯಗಳು ಮರೀಚಿಕೆಯಾಗಿವೆಯೇನೋ ಅನಿಸುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ 78 ವರ್ಷದ ಭಿಕ್ಷುಕಿ ಮೇಲೆ (Rape In Bhopal) ದುರುಳನೊಬ್ಬ ಅತ್ಯಾಚಾರ ಎಸಗಿದ್ದಾನೆ. ಕೃತ್ಯ ಎಸಗಿದ 37 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಬೀಬ್‌ಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ದೇವಾಲಯವೊಂದರ ಬಳಿ ವೃದ್ಧೆಯು ಭಿಕ್ಷೆ ಬೇಡುತ್ತಾರೆ. ದೇವಸ್ಥಾನಕ್ಕೆ ಬರುವವರು ನೀಡುವ ಹಣ ಹಾಗೂ ಆಹಾರದಿಂದಲೇ ಇವರು ಜೀವನ ಸಾಗಿಸುತ್ತಿದ್ದಾರೆ. ಆದರೆ, ಕಳೆದ ಅಕ್ಟೋಬರ್‌ 26ರ ಮಧ್ಯರಾತ್ರಿ ದೇವಾಲಯ ಪಕ್ಕದ ಗುಡಿಸಲಿನಲ್ಲಿ ವೃದ್ಧೆ ಮಲಗಿದ್ದಾಗ ಆಕೆಯ ಮೇಲೆ ವ್ಯಕ್ತಿಯು ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ವ್ಯಕ್ತಿಯು ಬೀದಿ ಬದಿ ಮಲಗುತ್ತಿದ್ದ. ಅವನು ಕೂಡ ದೇವಾಲಯದ ಎದುರು ಭಿಕ್ಷೆ ಬೇಡುತ್ತಿದ್ದ. ಎಷ್ಟೋ ಸಲ ವೃದ್ಧೆಯೇ ಆತನಿಗೆ ಊಟ ಕೊಡುತ್ತಿದ್ದಳು ಹಾಗೂ ಮಗನಂತೆ ನೋಡಿಕೊಳ್ಳುತ್ತಿದ್ದಳು. ಅಂತಹ ಮಹಿಳೆ ಮೇಲೆಯೇ ದುರುಳನು ಅತ್ಯಾಚಾರಗೈದಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದರು.

ಇದನ್ನೂ ಓದಿ | ಅಪರಿಚಿತ ಮಹಿಳೆ ಶವ ಅರೆನಗ್ನವಾಗಿ ಪತ್ತೆ, ಅತ್ಯಾಚಾರ- ಕೊಲೆ ಶಂಕೆ

Exit mobile version