ಮುಂಬೈ: ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಿದರೂ ಕಾಮಾಂಧರು ಮಾತ್ರ ಅನಾಚಾರ ಎಸಗುತ್ತಲೇ ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಮೇಲೆ 8 ಮಂದಿ 12 ಗಂಟೆ ಅತ್ಯಾಚಾರ (Gang Rape In Palghar) ಎಸಗಿದ್ದು, ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ.
“ಪಾಲ್ಘರ್ ಜಿಲ್ಲೆ ಸತ್ಪತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಹಿಮ್ ಗ್ರಾಮದಿಂದ ದುರುಳರು ಡಿಸೆಂಬರ್ 15ರ ಸಂಜೆ ಅಪಹರಿಸಿದ್ದಾರೆ. ಆಕೆಯನ್ನು ಜನವಸತಿ ಇಲ್ಲದ ಬಂಗಲೆಯೊಂದಕ್ಕೆ ಕರೆದೊಯ್ದು ರಾತ್ರಿ 8ರಿಂದ ಡಿಸೆಂಬರ್ 16ರ ಬೆಳಗ್ಗೆ 10ಗಂಟೆವರೆಗೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪೋಕ್ಸೊ ಕಾಯಿದೆ, ಐಪಿಸಿಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ರಾಜ್ಯದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಲೋಪದ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Disgusting Act | 40 ವರ್ಷದ ವ್ಯಕ್ತಿಯಿಂದ ನಾಯಿ ಮೇಲೆ ಅತ್ಯಾಚಾರ! ವಿಡಿಯೋ ವೈರಲ್