ನವದೆಹಲಿ: ಅತ್ಯಾಚಾರಿಗಳ ವಿರುದ್ಧ ಎಷ್ಟೇ ಕಠಿಣ ನಿಯಮ ರೂಪಿಸಿದರೂ, ಅತ್ಯಾಚಾರದ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ದೇಶದಲ್ಲಿ ಅತ್ಯಾಚಾರ (Rapes In India) ಮಾತ್ರ ನಿಲ್ಲುತ್ತಿಲ್ಲ. ದೇಶದಲ್ಲಿ ಗಂಟೆಗೆ ಸರಾಸರಿ ೮೬ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತದೆ ಎಂದು ಸರಕಾರವೇ ಮಾಹಿತಿ ನೀಡಿದ್ದು, ಇದು ನಾಗರಿಕ ಸಮಾಜವೇ ತಲೆತಗ್ಗಿಸುವ ವಿಷಯವಾಗಿದೆ.
ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ವರದಿ ಪ್ರಕಾರ ಕಳೆದ ವರ್ಷ ೩೧,೬೭೭ ಅತ್ಯಾಚಾರ ಪ್ರಕರಣ ದಾಖಲಾಗಿವೆ. ಅಂದರೆ, ನಿತ್ಯ ಗಂಟೆಗೆ ಸರಾಸರಿ ೮೬ ಕೇಸ್‌ಗಳು ದಾಖಲಾಗಿವೆ. ಅದೇ ರೀತಿ, ಗಂಟೆಗೆ ಸರಾಸರಿ ೪೯ ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಲ್ಲಿ ತಿಳಿಸಿದೆ.
ಅತ್ಯಾಚಾರ ಪ್ರಕರಣಗಳ ದಾಖಲಾಗುವುದರಲ್ಲಿ ರಾಜಸ್ಥಾನ (೬,೩೩೭) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ (೨,೯೪೭), ಉತ್ತರ ಪ್ರದೇಶ (೨,೮೪೫) ಹಾಗೂ ದೆಹಲಿ (೧,೨೫೦) ಇವೆ. ೨೦೨೦ರಲ್ಲಿ ದೇಶಾದ್ಯಂತ ೨೮,೦೪೬ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೆ, ೨೦೧೯ರಲ್ಲಿ ೩೨,೦೩೩ ಕೇಸ್ ದಾಖಲಾಗಿದ್ದವು.
ಇದನ್ನೂ ಓದಿ | Conviction Rate | ಉತ್ತರ ಪ್ರದೇಶದಲ್ಲಿ ಮಹಿಳಾ ದೌರ್ಜನ್ಯಕ್ಕಿಲ್ಲ ಆಸ್ಪದ, ಶಿಕ್ಷೆ ಪ್ರಮಾಣ ದೇಶದಲ್ಲೇ ಗರಿಷ್ಠ