ಸೊಪೋರ್: ಬುರ್ಖಾಧಾರಿ ಮಹಿಳೆಯೊಬ್ಬಳು ಕೇಂದ್ರ ಸಶಸ್ತ್ರ ಮೀಸಲು ಪಡೆ ಕ್ಯಾಂಪ್ ಮೇಲೆ ಬಾಂಬ್ ಎಸೆದಿರುವ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ ಸಂಜೆ 7 ಗಂಟೆ ಸುಮಾರಿನಲ್ಲಿ ಬುರ್ಖಾ ಧರಿಸಿ ಬಂದ ಮಹಿಳೆ, ತನ್ನ ಬ್ಯಾಗ್‌ನಲ್ಲಿದ್ದ ಬಾಂಬ್ ಅನ್ನು ಹೊರಗೆ ತೆಗೆದು ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಎಸೆದಿದ್ದಾಳೆ. ಬಾಂಬ್ ಎಸೆದ ಕೂಡಲೇ ಆ ಬುರ್ಖಾಧಾರಿ ಮಹಿಳೆ ಸ್ಥಳದಿಂದ ಕಾಲ್ಕಿತ್ತ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬುರ್ಖಾಧಾರಿ ಮಹಿಳೆ ಎಸೆದ ಬಾಂಬ್ ಸೇನಾ ಕ್ಯಾಂಪ್ ಹೊರ ಭಾಗದಲ್ಲಿ ಬಿದ್ದ ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಶ್ಮೀರ ಐಜಿಪಿ ವಿಜಯ್ ಕುಮಾರ್, ಕೃತ್ಯ ಎಸಗಿರುವ ಮಹಿಳೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಹೇಳಿದರು.