Site icon Vistara News

Ayodhya Priest: ಅಯೋಧ್ಯೆಯಲ್ಲಿ ಅರ್ಚಕನ ಹತ್ಯೆ; ಮಂದಿರ ಉದ್ಘಾಟನೆ ಮೊದಲೇ ಆತಂಕ

hanumangarhi temple in ayodhya

A Priest Of Ayodhya’s Hanumangarhi Temple was found dead In his room

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮಮಂದಿರದ (Ram Mandir) ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2024ರ ಜನವರಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಯನ್ನೂ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ, ಅಯೋಧ್ಯೆಯಲ್ಲಿರುವ ಹನುಮಾನ್‌ಗಢಿ ದೇವಾಲಯದ (Hanumangarhi Temple) ಅರ್ಚಕರೊಬ್ಬರ ಶವ (Ayodhya Priest) ಗುರುವಾರ (ಅಕ್ಟೋಬರ್‌ 19) ಪತ್ತೆಯಾಗಿದ್ದು, ಕತ್ತು ಸೀಳಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಅತಿ ಹೆಚ್ಚು ಭದ್ರತೆ ಇರುವ ರಾಮಮಂದಿರ ಆವರಣದಲ್ಲಿರುವ ಕೋಣೆಯಲ್ಲಿಯೇ ಅರ್ಚಕ ರಾಮ್‌ ಸಹ್ರೆಯ್‌ ದಾಸ್‌ (Ram Sahrey Das) ಅವರ ಶವ ಪತ್ತೆಯಾಗಿದೆ. “ರಾಮ್‌ ಸಹ್ರೆಯ್‌ ದಾಸ್‌ ಕೋಣೆಯಲ್ಲಿ ಅವರ ಶವ ಪತ್ತೆಯಾಗಿದೆ. ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಹನುಮಾನ್‌ಗಢಿ ದೇವಾಲಯಕ್ಕೆ ಹೊಂದಿಕೊಂಡಿರುವ ಕೋಣೆಯಲ್ಲಿ ಅವರು ಇಬ್ಬರು ಶಿಷ್ಯಂದಿರೊಂದಿಗೆ ವಾಸವಿದ್ದರು. ಇಬ್ಬರಲ್ಲಿ ಒಬ್ಬ ಶಿಷ್ಯನನ್ನು ಬಂಧಿಸಲಾಗಿದೆ. ಮತ್ತೊಬ್ಬನ ಬಂಧನಕ್ಕೆ ತಂಡ ರಚಿಸಲಾಗಿದೆ” ಎಂದು ಅಯೋಧ್ಯೆ ಎಸ್‌ಪಿ ರಾಜ್‌ ಕರಣ್‌ ನಯ್ಯರ್‌ ಮಾಹಿತಿ ನೀಡಿದ್ದಾರೆ.

ರಾಮಮಂದಿರ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ

“ಅರ್ಚಕ ರಾಮ್‌ ಸಹ್ರೆಯ್‌ ದಾಸ್‌ ಅವರು ಬೆಳಗ್ಗೆ 7 ಗಂಟೆಯಾದರೂ ದೇವಾಲಯದ ಪೂಜೆ ಮಾಡಲು ಹೊರಬರದ ಕಾರಣ ಕೋಣೆಯನ್ನು ನೋಡಿದಾಗ ಅವರ ಶವ ಪತ್ತೆಯಾಗಿದೆ. ಕೂಡಲೇ ಈ ಕುರಿತು ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹರಿತವಾದ ಉಪಕರಣದಿಂದ ಅವರ ಕತ್ತು ಸೀಳಲಾಗಿದೆ. ಅವರ ಕೋಣೆ ಬಾಗಿಲು ಮುರಿದು ಸೇರಿ ಯಾವುದೇ ರೀತಿಯ ಪ್ರವೇಶ ಆಗಿಲ್ಲ. ಆದರೂ, ಅವರನ್ನು ಹತ್ಯೆ ಮಾಡಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ಅರ್ಚಕರು, ಸಿಬ್ಬಂದಿ ಸಂಬಳ 40% ಹೆಚ್ಚಳ; ಇವರ ವೇತನ ಎಷ್ಟು?

ಶಿಷ್ಯಂದಿರ ಜತೆಗೆ ದ್ವೇಷ?

ರಾಮ್‌ ಸಹ್ರೆಯ್‌ ದಾಸ್‌ ಅವರು ಹಲವು ಶಿಷ್ಯರೊಂದಿಗೆ ಜಗಳವಾಡಿದ್ದು, ಶಿಷ್ಯಂದಿರು ಇವರ ಮೇಲೆ ದ್ವೇಷ ಸಾಧಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಬುಧವಾರ ರಾತ್ರಿ (ಅಕ್ಟೋಬರ್‌ 19) ಅರ್ಚಕ ರಾಮ್‌ ಸಹ್ರೆಯ್‌ ದಾಸ್‌ ಹಾಗೂ ಶಿಷ್ಯಂದಿರ ಜತೆ ಜಗಳವಾಗಿದ್ದು, ಜಗಳ ತಾರಕಕ್ಕೇರಿದಾಗ ಒಬ್ಬ ಶಿಷ್ಯನು ಇವರ ಕತ್ತು ಸೀಳಿದ್ದಾನೆ ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ. ರಾಮಮಂದಿರಕ್ಕೆ ಜನವರಿಯಲ್ಲಿ ಚಾಲನೆ ದೊರೆಯುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಮಂದಿರ ಉದ್ಘಾಟನೆಯ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಗಿದ್ದು, ಸಾವಿರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Exit mobile version