ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ ಗೆಸ್ಟ್‌ಹೌಸ್‌ನಲ್ಲಿ ಕೆಲವು ದಾಖಲೆಗಳನ್ನು ಎಸಿಬಿ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ.
ಶಾಸಕ ಜಮೀರ್ ಅಹ್ಮದ್ ಅಕ್ರಮ ಗಳಿಕೆ ಕೇಸ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿರುವ ಮಾಹಿತಿಯನ್ನು ಆಧರಿಸಿ ಎಸಿಬಿ ದಾಳಿ ನಡೆಸಿದೆ.
ಸದಾಶಿವ ನಗರದಲ್ಲಿ ಇರುವ ಜಮೀರ್ ಅವರ ಗೆಸ್ಟ್ ಹೌಸ್‌ನಲ್ಲಿ ಕೆಲ ದಾಖಲೆಗಳನ್ನು ಎಸಿಬಿ ತಂಡ ವಶಪಡಿಸಿಕೊಂಡಿದೆ. ಈ ಐಷಾರಾಮಿ ಗೆಸ್ಟ್‌ಹೌಸ್ ಅನ್ನು ಈ ಹಿಂದೆ ಜಮೀರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಕೊಟ್ಟಿದ್ದರು. ಸಂಬಂಧ ಹಳಸಿದ ಬಳಿಕ ವಾಪಸ್ ಪಡೆದಿದ್ದರು.
ಜಮೀರ್ ಸೋದರನ ಆಕ್ರೋಶ
ಈ ನಡುವೆ ಎಸಿಬಿ ದಾಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಜಮೀರ್ ಅವರ ಸೋದರ, ” ನಾವು ಎಸಿಬಿ ಅಧಿಕಾರಿಗಳ ತನಿಖೆಗೆ ಅಡ್ಡಿಪಡಿಸುವುದಿಲ್ಲ. ಅವರು ಅವರ ಕೆಲಸವನ್ನು ಮಾಡುತ್ತಾರೆ. ಆದರೆ ಬಿಜೆಪಿ ಶಾಸಕರ ವಿರುದ್ಧ ದಾಳಿ ನಡೆಯುತ್ತಿದೆಯೇ?ʼʼ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:Zameer ACB Raid | ಹೈಕೋರ್ಟ್ ತೀವ್ರ ತರಾಟೆಯ ಬೆನ್ನಲ್ಲೇ ಎಚ್ಚೆತ್ತ ಎಸಿಬಿಯಿಂದ ತಿಮಿಂಗಿಲಗಳ ಬೇಟೆ