ಬೆಂಗಳೂರು: ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಆಸ್ತಿ ವಿಚಾರಕ್ಕೆ ಆ್ಯಸಿಡ್ ದಾಳಿ (Acid Attack) ನಡೆದಿದೆ. ಕಿರಣ್ ಎಂಬಾತನ ಮೇಲೆ ಸಂಬಂಧಿಕರೇ ಆ್ಯಸಿಡ್ ದಾಳಿ ನಡೆಸಿದ್ದಾರೆ. ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದ್ದು, ಕಿರಣ್ ಮೇಲೆ ಏಕಾಏಕಿ ಬಾತ್ ರೂಮಿಗೆ ಬಳಸುವ ಆ್ಯಸಿಡ್‌ನಿಂದ ದಾಳಿ ನಡೆಸಿದ್ದಾರೆ. ಇದೇ ತಿಂಗಳ 22ರಂದು ಘಟನೆ ನಡೆದಿದೆ. ರಾಮಕೃಷ್ಣ, ಕಲಾವತಿ, ಉಪೇಂದ್ರ ಎಂಬುವವರರ ವಿರುದ್ಧ ದೂರು ದಾಖಲಾಗಿದೆ.
ಕೆಲ ದಿನಗಳಿಂದ ಆಸ್ತಿ ವಿಚಾರಕ್ಕೆ ಕುಟುಂಬದಲ್ಲಿ ಗಲಾಟೆ ನಡೆಯುತ್ತಿತ್ತು. ಕಿರಣ್ ತಮ್ಮ ತಾಯಿಯ ಕಾರ್ಯದ ಬಗ್ಗೆ ಮಾತನಾಡಲು ಹೋಗಿದ್ದರು. ಆ ಸಂದರ್ಭದಲ್ಲಿ ರಾಮಕೃಷ್ಣ ಮತ್ತು ಇನ್ನಿತರು ಸೇರಿಕೊಂಡು ಕಿರಣ್‌ಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಾತ್ ರೂಮಿನಲ್ಲಿದ್ದ ಆ್ಯಸಿಡ್ ಕಣ್ಣು, ಕೈಗಳಿಗೆ ಎರಚಿದ್ದಾರೆ. ಸದ್ಯ ಈ ಕೃತ್ಯ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Udupi News : ಉಡುಪಿಯಲ್ಲಿ ಪೊಲೀಸ್ ಕ್ವಾಟ್ರಸ್‌ನಲ್ಲಿ ಲೇಡಿ ಕಾನ್ಸ್‌ಟೇಬಲ್ ಸೂಸೈಡ್
ಕಿರಿಕ್ ಪಾರ್ಟಿ; ವಿದ್ಯಾರ್ಥಿಗಳ ಹೊಡಿಬಡಿ
ರಾಯಚೂರು: ಮೆಡಿಕಲ್ ಕಾಲೇಜ್ ರೀಗೇಲ್ ಪಾರ್ಟಿಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಕಿರಿಕ್ (Students Fighting) ನಡೆದಿದೆ. ಪಾರ್ಟಿ ಬಳಿಕ ಬೆತ್ತ, ದೊಣ್ಣೆ ಹಿಡಿದು ಒಬ್ಬರಿಗೊಬ್ಬರು ಬಡಿದಾಟ ನಡೆಸಿದ್ದಾರೆ. ರಾಯಚೂರಿನ ನವೋದಯ ಮೆಡಿಕಲ್ ಕಾಲೇಜ್ (Navodaya Medical College) ಕ್ಯಾಂಪಸ್‌ನಲ್ಲಿ ಗಲಾಟೆ ನಡೆದಿದೆ.
ನವೋದಯ ಮೆಡಿಕಲ್ ಕಾಲೇಜಿನ ಹಾಸ್ಟೆಲ್ -5ರ ಬಳಿ ವಿದ್ಯಾರ್ಥಿಗಳು ಗಲಾಟೆ ನಡೆಸಿ, ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಓರ್ವ ವಿದ್ಯಾರ್ಥಿಯ ತಲೆಗೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ತೆಲಂಗಾಣ ರಾಜ್ಯದ ನಾರಾಯಣಪೇಟೆ ಕ್ಷೇತ್ರದ ಮಾಜಿ ಶಾಸಕ ಎಸ್‌ಆರ್ ರೆಡ್ಡಿಗೆ ಸಂಬಂಧಿಸಿದ ಮೆಡಿಕಲ್ ಕಾಲೇಜ್ ಇದಾಗಿದೆ.
ಗಾಯಾಳು ವಿದ್ಯಾರ್ಥಿಗೆ ನವೋದಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Self Harming: 1 ವರ್ಷದ ಮಗುವಿನೊಂದಿಗೆ ನೇತ್ರಾವತಿ ನದಿಗೆ ಹಾರಿ ತಾಯಿ ಆತ್ಮಹತ್ಯೆ
ಶಿವಮೊಗ್ಗದಲ್ಲಿ ಗಲಾಟೆ ತಡೆಯಲು ಹೋದ ಪೊಲೀಸರ ಮೇಲೆ ಪುಂಡರಿಂದ ಹಲ್ಲೆ
ಶಿವಮೊಗ್ಗ: ಇತ್ತೀಚೆಗೆ ಪೊಲೀಸರ ಮೇಲೆ ಹಲ್ಲೆ ಪ್ರಕರಣಗಳು (Assault Case) ಹೆಚ್ಚಾಗುತ್ತಿದೆ. ಜನಸಾಮಾನ್ಯರನ್ನು ರಕ್ಷಣೆ ಮಾಡು ರಕ್ಷಕರಿಗೆ ರಕ್ಷಣೆ ಇಲ್ಲದಂತಾಗಿದೆ. ಸದ್ಯ ಪೊಲೀಸರ ಮೇಲೆ ಕೆಲ ಪುಂಡರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಗೌತಂಪುರ ಮಾರಿಕಾಂಬಾ ಜಾತ್ರೆಯಲ್ಲಿ ಘಟನೆ ನಡೆದಿದೆ.
ಅಂಗಡಿ ಮುಂಗಟ್ಟು ಬಳಿ ಗಲಾಟೆ ಮಾಡುತ್ತಿರುವುದನ್ನು ತಡೆಯಲು ಹೋದ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾರೆ. ಆನಂದಪುರ ಪೊಲೀಸ್ ಠಾಣೆ ಸಿಬ್ಬಂದಿ ಕಿರಣ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿಯ ಖಾಕಿ ಹಿಡಿದು ಎಳೆದಾಡಿದ್ದಲ್ಲದೇ ಕಪಾಳಕ್ಕೆ ಹೊಡೆದಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಎಲ್ಲ ಪುಂಡರನ್ನು ಬಂಧಿಸಿ, ತನಿಖೆಯನ್ನು ನಡೆಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ