Site icon Vistara News

Acid Attack | ದಾಳಿಯಾಗಿ 11 ದಿನ: ಆರೋಪಿ ನಾಗೇಶ್‌ ಬದುಕಿದ್ದಾನಾ ಅಥವಾ…?

nagesh

ಬೆಂಗಳೂರು : ಆ್ಯಸಿಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 11 ದಿನಗಳೇ ಕಳೆದಿದ್ದು , ಆರೋಪಿ ಮಾತ್ರ ಇನ್ನೂ ಸಿಕ್ಕಿಲ್ಲ. ರಾಜ್ಯವಷ್ಟೆ ಅಲ್ಲದೆ ಇನ್ನಿತರ ರಾಜ್ಯಗಳಲ್ಲೂ ಪೊಲೀಸರು ಪತ್ತೆ ಮಾಡಲು ಸಾಧ್ಯವಾಗಿಲ್ಲದ್ದನ್ನು ನೋಡಿದರೆ ಆರೋಪಿ ನಾಗೇಶ್‌ ಕುರಿತು ಅನೇಕ ಅನುಮಾನಗಳು ಮೂಡಲಾರಂಭಿಸಿವೆ.

ಏಪ್ರಿಲ್‌ 28 ಗುರುವಾರ ಬೆಳಿಗ್ಗೆ 8.30ರ ವೇಳೆಯಲ್ಲಿ ಯುವತಿಯನ್ನು ಆಕೆಯ ತಂದೆ, ಸುಂಕದಕಟ್ಟೆಯ ಮತ್ತೂಟು ಮಿನಿ ಫೈನಾನ್ಸ್‌ ಕಚೇರಿಗೆ ಡ್ರಾಪ್‌ ಮಾಡಿದ್ದರು. ಮೊದಲನೇ ಮಹಡಿಯಲ್ಲಿದ್ದ ಕಚೇರಿಗೆ ಮೆಟ್ಟಿಲು ಹತ್ತಿಕೊಂಡು ಹೋಗುವ ಸ್ಥಿತಿಯಿತ್ತು. ಕಚೇರಿಗೆ ಇನ್ನೂ ಯಾರೂ ಬರದೇ ಇದ್ದದ್ದರಿಂದ ಬಾಗಿಲ ಹತ್ತಿರ ನಿಂತುಕೊಂಡಿದ್ದರು. ಈ ಸಮಯದಲ್ಲಿ ಆರೋಪಿ ನಾಗೇಶ್‌ ಹತ್ತಿರಕ್ಕೆ ಬಂದಿದ್ದಾನೆ. ಒಂದು ಕೈ ಕವರ್‌ನಲ್ಲಿ ಏನನ್ನೋ ಹಿಡಿದಿರುವುದನ್ನು ಕಂಡು ಗಾಭರಿಯಿಂದ ಯುವತಿ ಓಡಲು ಪ್ರಯ್ನಿಸಿದ್ದಳು. ಕೂಡಲೇ ನಾಗೇಶ್‌ ಅವಳನ್ನು ಹಿಂಬಾಲಿಸಿಕೊಂಡು ಹೋಗಿ ಆಸಿಡ್‌ ಅನ್ನು ಯುವತಿಯ ಮೇಲೆ ಹಾಕಿ ಓಡಿ ಹೋಗಿದ್ದ. ಎದೆ, ಕೈಗಳು, ಹಾಗೂ ಬೆನ್ನಿಗೆ ಆಸಿಡ್‌ ಬಿದ್ದು, ಗಾಯಗಳಾಗಿದ್ದು, ಯುವತಿ ತಂದೆಗೆ ಕೂಡಲೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಳು. ಸೇಂಟ್‌ ಆಸ್ಪತ್ರೆಗೆಗೆ ದಾಖಲು ಸಹ ಮಾಡಲಾಗಿತ್ತು. ಏಳು ವರ್ಷಗಳ ಹಿಂದೆ ಯುವತಿಯ ದೊಡ್ಡಮನ ಮನೆಯಲ್ಲಿ ಬಾಡಿಗೆ ಇದ್ದ ನಾಗೇಶ್‌, ಪ್ರೀತಿ ಮಾಡುವಂತೆ ಹಿಂಸೆ ನೀಡುತ್ತಿದ್ದ. ಇದಕ್ಕೆ ಒಪ್ಪಿದಿದ್ದಾಗ ಆಸಿಡ್‌ ದಾಳಿ ಮಾಡಿದ್ದ.

ಇದನ್ನೂ ಓದಿ |ನನ್ನ ಟ್ರಿಪ್‌ ವಿವರವನ್ನು ಟಿವಿ, ಪೇಪರ್‌ನಲ್ಲಿ ನೋಡಿ ಎಂದಿದ್ದ ಆರೋಪಿ ನಾಗೇಶ

ಈಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಆರೋಪಿ ಸಿಕಿಲ್ಲ. ಈಗಾಗಲೇ ಆರೋಪಿ ನಾಗೇಶ್‌ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 326 ಎ ಮತ್ತು 370 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಯೂ ಕೊಂಡಿದ್ದಾರೆ.

ಈ ನಡುವೆ, ಆರೋಪಿ ವಿರುದ್ಧ ಜೀವಾವಧಿ ಅಥವಾ ಮರಣ ದಂಡನೆ ಶಿಕ್ಷೆಯಾಗುವ ರೀತಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಡ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿತ್ತು. ಪೊಲೀಸರು ತಕ್ಷಣ ಜಾಮೀನು ಸಿಗದಂತೆ ನೋಡಿಕೊಳ್ಳಬೇಕು. ಕಠಿಣ ಸೆಕ್ಷನ್‌ಗಳನ್ನು ಹಾಕಿ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂಬ ಬೇಡಿಕೆ ಕೂಡ ಹೆಚ್ಚಾಗಿತ್ತು. ತಮಿಳುನಾಡಿನಲ್ಲಿದ್ದಾನೆ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಸುದ್ದಿಗಳ ನಡುವೆ ಪೊಲೀಸರು ಹುಡುಕಾಡುತ್ತಿದ್ದಾರಾದರೂ ಆರೋಪಿ ಮಾತ್ರ ಕೈಗೆ ಸಿಕ್ಕಿಲ್ಲ. ಇದೇ ವೇಳೆ ಯುವತಿಗೆ ಗುರುವಾರ ಮೊದಲ ಶಸ್ತ್ರಚಿಕಿತ್ಸೆ ಕೂಡ ನೆರವೇರಿತ್ತು.

ಎಲ್ಲಿಯೂ ಸುಳಿವೇ ಸಿಗದ ಹಿನ್ನಲೆಯಲ್ಲಿ, ಧಾರ್ಮಿಕ ಕ್ಷೇತ್ರಗಳಲ್ಲಿ ಬೀಡು ಬಿಟ್ಟಿದ್ದನೆ ಅನ್ನೋ ಮಾಹಿತಿಯೂ ಕೂಡ ಲಭ್ಯವಿತ್ತು. ತಮಿಳುನಾಡು, ಆಂದ್ರಪ್ರದೇಶ ಕೇರಳದಲ್ಲಾಯ್ತು, ಇದೀಗ ಉತ್ತರ ಭಾರತದಲ್ಲಿ ಪೊಲೀಸರು ಹುಡುಗಾಟ ನಡೆಸುತ್ತಲೇ ಇದ್ದಾರೆ. ವಾರಾಣಸಿ, ದೆಹಲಿ, ಮುಂಬೈ ಸೇರಿ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಸಿಡ್ ನಾಗೇಶನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

ಹೊಸ ಸಿಮ್ ಖರೀದಿಸಿದ್ದ ಎಂಬ ಮಾಹಿತಿ ಸಿಕ್ಕಿದ ಮೇರೆಗೆ ಪೊಲೀಸರು ಸಿಮ್ ಖರೀದಿ, ಲೊಕೇಷನ್ ರೂಟ್, ಟವರ್, ಡಂಪ್ ಮಾಡಿ ಹೋದ ಸ್ತಳದಲ್ಲಿ ನೋಡಿದಾಗ ಅಪರಿಚಿತನ ವ್ಯಕ್ತಿಯದ್ದಾಗಿತ್ತು. ಬೇರೆ ವ್ಯಕ್ತಿ ಸಿಮ್ ಖರೀದಿ ಮಾಡಿದ್ದು, ನಾಗೇಶ್ ಇದ್ದ ಲೊಕೇಷನ್, ಅದೇ ಮಾರ್ಗದಲ್ಲಿ ಸಂಚರಿಸಿದ ವ್ಯಕ್ತಿಯ ವಿಚಾರಣೆಯೂ ನಡೆಯುತ್ತಿದೆ. ವಿಚಾರಣೆ ಬಳಿಕ ನಾಗನ ಸಂಪರ್ಕವಿಲ್ಲವೆಂದು ಪೊಲೀಸರಿಗೆ ತಿಳಿದು ಬಂದಿದೆ.

ಬದುಕಿದ್ದರೆ ಹಿಡಿಯುತ್ತೇವೆ ಎಂದಿದ್ದರು

ಅನೇಕ ದಿನಗಳಿಂದ ಆರೋಪಿಯನ್ನು ಪೊಲೀಸರಿಂದ ಬಂಧಿಸಲು ಸಾಧ್ಯವಾಗದೇ ಇರುವುದು ಸರ್ಕಾರಕ್ಕೂ ಮುಜುಗರ ಉಂಟು ಮಾಡಿದೆ. ಈ ಕುರಿತು ಕೆಲ ದಿನಗಳ ಹಿಂದೆ ಸುದ್ದಿಗಾರರ ಪ್ರಶ್ನೆಗೆ ಗೃಹಸಚಿವ ಆರಗ ಜ್ಞಾನೇಂದ್ರ ತುಸು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ʼಆರೋಪಿ ಭೂಮಿ ಮೇಲೆ ಬದುಕಿದ್ದರೆ , ಎಲ್ಲಿದ್ದರೂ ಅವನನ್ನು ಹಿಡಿದುಕೊಂಡು ಬಂದೇ ಬರ್ತೀವಿ. ಅವನು ಹಗಲಿರುಳು ಒಂದು ಕಡೆ ನಿಲ್ಲದೇ ತಿರುಗಾಡ್ತಿದ್ದಾನೆ. ನಮ್ಮ ಅಧಿಕಾರಿಗಳು ರಾತ್ರಿ ಹಗಲು ಅನ್ನದೇ ಕೆಲಸ ಮಾಡುತ್ತಿದ್ದಾರೆʼ ಎಂದು ಹೇಳಿಕೆ ಕೂಡ ನೀಡಿದ್ದರು. ಇನ್ನೂ ಆರೋಪಿ ಸಿಗದೇ ಇದ್ದ ಕಾರಣ, ತಲೆ ಮರೆಸಿಕೊಂಡಿದ್ದಾನಾ? ಆತ ನಿಜವಾಗ್ಲೂ ಬದುಕಿದ್ದಾನಾ? ಎನ್ನುವ ಅನುಮಾನ ಮೂಡಿದೆ.

ಸದ್ಯ ಈಗ ಯುವತಿಗೆ ಲಘು ಆಹಾರ ಕುಟುಂಬಸ್ಥರು ನೀಡುತ್ತಿದ್ದು , ಸ್ಕಿನ್ ಸರ್ಜರಿ ಚಿಕಿತ್ಸೆ ಕೂಡ ಮುಗಿದಿದೆ. ಸೋಮವಾರ ಅಂತಿಮ ಸರ್ಜರಿ ಚಿಕಿತ್ಸೆ ಕೊಡುವ ಪ್ರಕ್ರಿಯೆ ಆಗಲಿದ್ದು, ಸಿಬ್ಬಂದಿಗಳು ಸರ್ಜರಿ ಸ್ಪೆಷಲ್‌ ವಾರ್ಡ್‌ಗೆ ಶಿಪ್ಟ್ ಮಾಡಲಿದ್ದಾರೆ. ಗಾಯದ ಜಾಗದಲ್ಲಿ ಊತ ಕಡಿಮೆಯಾಗಿದ್ದು, ಮೊದಲಿಗಿಂತ ಚೆನ್ನಾಗಿ ಮಾತನಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.‌

ಇದನ್ನೂ ಓದಿ | ಆ್ಯಸಿಡ್‌ ದಾಳಿ | ಕ್ರೌರ್ಯಕ್ಕೆ ತಕ್ಕಂತೆ ಶಿಕ್ಷೆ ಎಂದ ಸಚಿವ ಸುಧಾಕರ್

Exit mobile version