ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ (Actor Darshan) ಮನೆಯೂಟ ನೀಡಲು ಜೈಲಾಧಿಕಾರಿಗಳು ನಿರಾಕರಿಸಿದ್ದಾರೆ. ಮನೆಯೂಟ ನೀಡುವ ಬಗ್ಗೆ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಹೈಕೋರ್ಟ್ ಸೂಚಿಸಿತ್ತು. ಆದರೆ, ಕೊಲೆ ಆರೋಪಿಗೆ ಕಾನೂನಿನಲ್ಲಿ ಮನೆಯೂಟಕ್ಕೆ ಅವಕಾಶ ಇಲ್ಲವೆಂದು ಅಧಿಕಾರಿಗಳು ನಿರಾಕರಣೆ ಮಾಡಿದ್ದಾರೆ.
ಆಗಸ್ಟ್ 20ಕ್ಕೆ ದರ್ಶನ್ ಮನೆಯೂಟ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಲಿದ್ದು, ಈ ನಡುವೆ ಅರ್ಜಿ ಬಗ್ಗೆ ಜೈಲಾಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕೋರ್ಟ್‌ಗೆ ನೀಡಲು ಜೈಲಾಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ.
ಅನೇಕ ವಿಐಪಿ ವಿಚಾರಣಾಧೀನ ಬಂಧಿಗಳಿಗೆ ಮನೆಯೂಟ ನಿರಾಕರಣೆ ಮಾಡಲಾಗಿದೆ ಎಂದು ಕೋರ್ಟ್ ಆದೇಶ ನೀಡಿದರೂ ಜೈಲು ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಜೈಲಿನಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ಬಂಧಿಗಳಿದ್ದಾರೆ. ಒಬ್ಬೊಬ್ಬರಿಗೂ ಮನೆಯೂಟಕ್ಕೆ ಅವಕಾಶ ನೀಡಿದರೆ, ಜೈಲಿನ ಊಟ ಮಾಡುವವರು ಇರುವುದಿಲ್ಲ. ಎಲ್ಲರೂ ಮನೆ ಊಟ ಕೇಳುವ ಸ್ಥಿತಿ ಉದ್ಭವ ಆಗಲಿದೆ. ಹೀಗಾಗಿ ಮನೆ ಊಟ ನೀಡುವ ವಿಚಾರದಲ್ಲಿ ಮರು ಪರಿಶೀಲಿಸಲು ಕೋರ್ಟ್‌ಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇತರರಂತೆ ನಟ ದರ್ಶನ್ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಯುತ್ತದೆ. ನಟ ದರ್ಶನ್‌ಗೆ ಮನೆ ಊಟ ಅಗತ್ಯವಿಲ್ಲ, ಜೈಲಿನಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಂದ ಕೋರ್ಟ್‌ಗೆ ವರದಿ ಸಲ್ಲಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ | Viral Video: 11 ವರ್ಷಗಳ ಹಿಂದೆ ಸತ್ತಿದ್ದ ಗಂಡ ಕನಸಲ್ಲಿ ಬಂದು ʼಸೇರಿದʼ; ಹಾಗಾಗಿ ಮಗು ಹುಟ್ಟಿತು ಅಂತಿದ್ದಾಳೆ ಈ ಹೆಂಗಸು!
ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ; ಎಫ್‌ಎಸ್‌ಎಲ್ ವರದಿಯಲ್ಲಿ ದೃಢ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಅತಿ ದೊಡ್ಡ ರಹಸ್ಯ ರಿವೀಲ್ ಆಗಿದೆ. ದರ್ಶನ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಸಿಕ್ಕಿದ್ದು, ಇದರಿಂದ ಪ್ರಕರಣದಲ್ಲಿ ದರ್ಶನ್‌ಗೆ (Actor Darshan) ಕಂಟಕವಾಗಲಿರುವ ಅತಿ ದೊಡ್ಡ ಸಾಕ್ಷ್ಯ ಪೊಲೀಸರಿಗೆ ಸಿಕ್ಕಂತಾಗಿದೆ.
ಇದನ್ನೂ ಓದಿ | Muda Scam: ರಾಜ್ಯಪಾಲರನ್ನು ಭೇಟಿಯಾದ ಟಿ.ಜೆ.ಅಬ್ರಹಾಂ; ಸಿಎಂ ವಿರುದ್ಧ ತನಿಖೆಗೆ ಮತ್ತಷ್ಟು ದಾಖಲೆ
ಎಫ್‌ಎಸ್‌ಎಲ್ ವರದಿಯಲ್ಲಿ ಭಯಾನಕ ಸತ್ಯ ಹೊರಬಿದ್ದಿದೆ. ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ರೌಂಡ್ ನೆಕ್ ಶರ್ಟ್ ಅನ್ನು ಎಫ್‌ಎಸ್‌ಎಲ್‌ಗೆ ಪೊಲೀಸರು ಕಳುಹಿಸಿದ್ದರು. ಪರಿಶೀಲನೆಯಲ್ಲಿ ದರ್ಶನ್ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವು ರೇಣುಕಾಸ್ವಾಮಿಯ ದೇಹದ ರಕ್ತ ಎಂಬುದು ಎಫ್‌ಎಸ್‌ಎಲ್ ವರದಿಯಲ್ಲಿ ಧೃಡವಾಗಿದೆ ಎನ್ನಲಾಗಿದೆ.